ಕರ್ನಾಟಕ

karnataka

ETV Bharat / business

ಆತ್ಮ ನಿರ್ಭರ ಭಾರತ ಯೋಜನೆ ಹೊರತಾಗಿಯೂ ಚೀನಾದಿಂದ ಔಷಧೀಯ ಉತ್ಪನ್ನಗಳ ಆಮದು ಪ್ರಮಾಣ ಹೆಚ್ಚಳ: ಸರ್ಕಾರ

ದೇಶದಲ್ಲಿ ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ ಭಾರತ ಯೋಜನೆಯ ಹೊರತಾಗಿಯೂ ಔಷಧೀಯ ಉತ್ಪನ್ನಗಳ ಆಮದು ಪ್ರಮಾಣ ಹೆಚ್ಚಾಗಿದೆ. ಇದರಲ್ಲಿ ಚೀನಾದ ಪಾಲು ಶೇ. 41ಕ್ಕಿಂತ ಹೆಚ್ಚಿದೆ ಎಂದು ಕೇಂದ್ರ ಸರ್ಕಾರ ಸದನಕ್ಕೆ ಮಾಹಿತಿ ನೀಡಿದೆ.

India pharma import from China went up last year
ಆತ್ಮ ನಿರ್ಭರ್ ಭಾರತ್ ಯೋಜನೆ ಹೊರತಾಗಿಯೂ ಚೀನಾದಿಂದ ಔಷಧೀಯ ಉತ್ಪನ್ನಗಳ ಆಮದು ಪ್ರಮಾಣ ಹೆಚ್ಚಳ - ಸರ್ಕಾರ

By

Published : Mar 31, 2022, 11:48 AM IST

ನವದೆಹಲಿ: ಔಷಧಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ವಿದೇಶಗಳ ಮೇಲಿನ ಅವಲಂಬನೆಯನ್ನ ಕಡಿಮೆ ಮಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ 2 ವರ್ಷಗಳ ಹಿಂದೆ ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ ಭಾರತ (ಸ್ವಾವಲಂಬಿ ಭಾರತ) ಯೋಜನೆ ಆರಂಭಿಸಿತ್ತು.

ಈ ಯೋಜನೆಯ ಹೊರತಾಗಿಯೂ ದೊಡ್ಡ ಪೂರೈಕೆದಾರ ಚೀನಾದಿಂದ ಭಾರತದ ಫಾರ್ಮಾ ಆಮದುಗಳು ಕಳೆದ ಹಣಕಾಸು ವರ್ಷದಲ್ಲಿ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್‌ನಲ್ಲಿ ನೀಡಿದ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ. ಕೋವಿಡ್‌ನಿಂದಾಗಿ ಜಾಗತಿಕ ಪೂರೈಕೆಯಲ್ಲಿ ಭಾರಿ ಅಡೆತಡೆಗಳು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ ಭಾರತ ಯೋಜನೆ ಸ್ಥಾಪಿಸಿ ಇದಕ್ಕೆ 20 ಲಕ್ಷ ಕೋಟಿ ರೂಪಾಯಿಗಳ ಘೋಷಣೆ ಮಾಡಿದ್ದರು.

ಸಾಂಕ್ರಾಮಿಕ ಸಮಯದಲ್ಲಿ ಪ್ರಮುಖ ಆರಂಭಿಕ ಸಾಮಗ್ರಿಗಳು, ಔಷಧ ಪೂರೈಕೆಗಾಗಿ ಭಾರತೀಯ ಔಷಧೀಯ ಕಂಪನಿಗಳು ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿದ್ದವು. ಜನರ ಜೀವ ಉಳಿಸುವ ಔಷಧಗಳು ಮತ್ತು ಔಷಧಿಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ.

ಹೆಚ್ಚಿನ ಔಷಧ ಪೂರೈಕೆದಾರರು ಚೀನಾದ ವುಹಾನ್ ಪ್ರದೇಶದಲ್ಲಿ ನೆಲೆಗೊಂಡಿದ್ದರಿಂದ ಪರಿಸ್ಥಿತಿ ಗಂಭೀರವಾಗಿತ್ತು. ಇದೇ ವುಹಾನ್‌ನಲ್ಲಿ ಕೊರೊನಾ ಮೊದಲ ಪ್ರಕರಣ ಪತ್ತೆಯಾದ ಕಾರಣ ಇಡೀ ಪ್ರದೇಶವನ್ನು ಚೀನಾದ ಅಧಿಕಾರಿಗಳು ಲಾಕ್‌ಡೌನ್ ಮಾಡಿದ್ದರು. 2018-19 ರಲ್ಲಿ ಭಾರತವು 6.36 ಶತಕೋಟಿ ಡಾಲರ್‌ ಮೌಲ್ಯದ ಔಷಧೀಯ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಇದರಲ್ಲಿ ಚೀನಾದ ಪಾಲು ಶೇ. 41ಕ್ಕಿಂತ ಹೆಚ್ಚಿದೆ. 2019-20ರ ಹಣಕಾಸು ವರ್ಷದಲ್ಲಿ $ 6.46 ಶತಕೋಟಿ ಮೌಲ್ಯದ ಔಷಧೀಯ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದ್ದು, ಹಿಂದಿನ ವರ್ಷಕ್ಕಿಂತ 100 ಮಿಲಿಯನ್‌ಗಿಂತಲೂ ಹೆಚ್ಚಾಗಿದೆ.

ಈ ಅವಧಿಯಲ್ಲಿ ಚೀನಾದಿಂದ ಫಾರ್ಮಾ ಆಮದುಗಳು 2018-19ನೇ ಸಾಲಿನಲ್ಲಿ 2,630.6 ಮಿಲಿಯನ್‌ ಡಾಲರ್‌ನಿಂದ 2019-20ಕ್ಕೆ 2,562.8 ಮಿಲಿಯನ್‌ ಡಾಲರ್‌ಗೆ ಕಡಿಮೆಯಾಗಿದೆ. ಭಾರತದ ಫಾರ್ಮಾ ಆಮದುಗಳಲ್ಲಿ ಚೀನಾದ ಪಾಲು ಕೂಡ ಶೇ.40 ಕ್ಕಿಂತ ಕಡಿಮೆಯಾಗಿದೆ. 2020ರ ಮೇನಲ್ಲಿ ಸರ್ಕಾರವು ಆತ್ಮ ನಿರ್ಭರ ಯೋಜನೆಯನ್ನು ಘೋಷಿಸಿತ್ತು. 2020 ಜುಲೈನಲ್ಲಿ ನಿರ್ಣಾಯಕ ಫಾರ್ಮಾ ಪದಾರ್ಥಗಳ ದೇಶೀಯ ಉತ್ಪಾದನೆಯ ಉತ್ತೇಜನಕ್ಕಾಗಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯನ್ನು ಜಾರಿಗೆ ತರಲಾಗಿತ್ತು.

ಇದನ್ನೂ ಓದಿ:ತೈಲ ಬೆಲೆ ನಿಯಂತ್ರಣಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೊಸ ಪ್ಲಾನ್‌..!

ABOUT THE AUTHOR

...view details