ಕರ್ನಾಟಕ

karnataka

ETV Bharat / business

ವಾರ್ಷಿಕವಾಗಿ ಶೇ. 8-9ರಷ್ಟು ಬೆಳವಣಿಗೆ ಸಾಧಿಸಿದ್ರೇ ಮಾತ್ರ ಮೋದಿ ಮಾತು ನಿಜವಾಗುತ್ತೆ: ಡೆಲಾಯ್ಟ್ ಸೌತ್ ಏಷ್ಯಾ ಸಿಇಒ - ವಾರ್ಷಿಕ ಬೆಳವಣಿಗೆ ದಾಖಲಿಸುತ್ತಿರುವ ದೇಶಗಳ ಸಂಖ್ಯೆ

ಭಾರತವು ವಾರ್ಷಿಕವಾಗಿ ಶೇಕಡ 8 ರಿಂದ 9ರಷ್ಟು ಬೆಳವಣಿಗೆ ಸಾಧಿಸಿದಬೇಕು. ಆಗ ಮಾತ್ರ ಪ್ರಧಾನಿ ಮೋದಿ ನುಡಿದ ಭವಿಷ್ಯ ನಿಜವಾಗುತ್ತದೆ ಎಂದು ಡೆಲಾಯ್ಟ್ ಸೌತ್ ಏಷ್ಯಾ ಸಿಇಒ ಹೇಳಿದ್ದಾರೆ.

India Must Grow  India Must Grow 8 9 Per Cent  20 Years To Become Developed Country  ಡೆಲಾಯ್ಟ್ ಸೌತ್ ಏಷ್ಯಾ ಸಿಇಒ  ಬೆಳವಣಿಗೆ ಸಾಧಿಸಿದ್ರೇ ಮಾತ್ರ ಮೋದಿ ಮಾತು ನಿಜ  ಪ್ರಧಾನಿ ಮೋದಿ ನುಡಿದ ಭವಿಷ್ಯ  2047ರ ವೇಳೆಗೆ ಭಾರತ ಅಭಿವೃದ್ಧಿ  ವಾರ್ಷಿಕ ಬೆಳವಣಿಗೆ ದಾಖಲಿಸುತ್ತಿರುವ ದೇಶಗಳ ಸಂಖ್ಯೆ  ದೇಶಗಳ ಸಂಖ್ಯೆ ವಿಶ್ವದಲ್ಲೇ ಅತ್ಯಂತ ಕಡಿಮೆ
ಡೆಲಾಯ್ಟ್ ಸೌತ್ ಏಷ್ಯಾ ಸಿಇಒ

By ETV Bharat Karnataka Team

Published : Sep 9, 2023, 2:27 PM IST

ನವದೆಹಲಿ: 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಭವಿಷ್ಯ ನಿಜವಾದರೆ ದೇಶದ ಆರ್ಥಿಕತೆಯು 20 ವರ್ಷಗಳವರೆಗೆ ವಾರ್ಷಿಕ ಶೇ.8-9ರಷ್ಟು ಬೆಳವಣಿಗೆ ದರವನ್ನು ದಾಖಲಿಸಬೇಕಾಗುತ್ತದೆ ಎಂದು ಡೆಲಾಯ್ಟ್ ಸೌತ್ ಏಷ್ಯಾ ಸಿಇಒ ರೋಮಲ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಆದ್ರೆ ಇದು ಸುಲಭದ ಕೆಲಸವಲ್ಲ ಎಂದು ಹೇಳಿದರು.

8-9ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸುತ್ತಿರುವ ದೇಶಗಳ ಸಂಖ್ಯೆ ವಿಶ್ವದಲ್ಲೇ ಅತ್ಯಂತ ಕಡಿಮೆ. ಆದರೆ ‘ಚೀನಾ ಪ್ಲಸ್ ಒನ್’ ತಂತ್ರ ಭಾರತಕ್ಕೆ ವರವಾಗಲಿದೆ. ಬಹುರಾಷ್ಟ್ರೀಯ ಕಂಪನಿಗಳು ‘ಚೀನಾ ಪ್ಲಸ್ ಒನ್’ ಕಡೆಗೆ ಗಮನ ಹರಿಸುತ್ತಿವೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಭಾರತದಲ್ಲಿ ವ್ಯಾಪಾರ ಮತ್ತು ಉತ್ಪಾದನಾ ಚಟುವಟಿಕೆಗಳನ್ನು ನಡೆಸಲು ಇರುವ ಸಕಾರಾತ್ಮಕ ಪರಿಸ್ಥಿತಿಗಳು ಬೇರೆ ಯಾವುದೇ ದೇಶದಲ್ಲಿ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ರೋಮಲ್ ಶೆಟ್ಟಿ ಹೇಳಿದರು.

ಬಾಹ್ಯಾಕಾಶ ಕ್ಷೇತ್ರವನ್ನು ಉಲ್ಲೇಖಿಸಿದ ಅವರು, 2040ರ ವೇಳೆಗೆ ಭಾರತವು 100 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಕೃಷಿ, ಬಾಹ್ಯಾಕಾಶ, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ಅಳವಡಿಸಿಕೊಳ್ಳುವತ್ತ ಭಾರತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ ಪ್ರತಿ ವರ್ಷ 16,000-18,000 ಕಿಲೋಮೀಟರ್ ರಸ್ತೆಗಳು ನಿರ್ಮಾಣವಾಗುತ್ತಿದ್ದು, ಇದರಿಂದ ದೇಶದ ಅಭಿವೃದ್ಧಿ ಮತ್ತು ವ್ಯಾಪಾರಕ್ಕೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ. ಭಾರತ ಎದುರಿಸುತ್ತಿರುವ ದೊಡ್ಡ ಸವಾಲು ಕಚ್ಚಾ ತೈಲ ಆಮದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಭಾರತವು ಮೂರು ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು ಗೊತ್ತೇ ಇದೆ. ಸಂದರ್ಶನದಲ್ಲಿ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಭವಿಷ್ಯ ನುಡಿದಿದ್ದರು.

ಓದಿ:Reliance: ಚಿಪ್​ ತಯಾರಿಕೆಯ ಉದ್ಯಮಕ್ಕೆ ಕಾಲಿಡಲು ರಿಲಯನ್ಸ್​ ಪ್ರಯತ್ನ.. ಸಂಭಾವ್ಯ ಪಾಲುದಾರರೊಂದಿಗೆ ಮಾತುಕತೆ: ವರದಿ

ಮೋದಿ ಸರ್ಕಾರವು ಭಾರತದಲ್ಲಿ ಚಿಪ್ ತಯಾರಿಕೆಯನ್ನು ಉತ್ತೇಜಿಸಲು ಬಯಸಿದೆ. ಆದರೆ, ಸರ್ಕಾರದ ಈ ಉದ್ದೇಶ ಕಾರ್ಯರೂಪಕ್ಕೆ ಬಂದಿಲ್ಲ. ಪ್ರಸ್ತುತ ಭಾರತದಲ್ಲಿ ಒಂದೇ ಒಂದು ಚಿಪ್ ತಯಾರಿಕಾ ಘಟಕ ಇಲ್ಲ. ವೇದಾಂತ ಮತ್ತು ಫಾಕ್ಸ್‌ಕಾನ್ ಕೂಡ ಚಿಪ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಬಯಸುತ್ತವೆ. ಚಿಪ್ ಕೊರತೆಯನ್ನು ನಿಭಾಯಿಸಲು, ರಿಲಯನ್ಸ್ ತನ್ನ ಎಲೆಕ್ಟ್ರಾನಿಕ್ಸ್ ವ್ಯವಹಾರಕ್ಕೆ ತೊಂದರೆಯಾಗದಂತೆ ಈ ವ್ಯವಹಾರವನ್ನು ಪ್ರವೇಶಿಸಲು ಬಯಸುತ್ತದೆ. 2021 ರಲ್ಲಿ ಚಿಪ್ ಕೊರತೆಯಿಂದಾಗಿ ಗೂಗಲ್ ಸಹಯೋಗದೊಂದಿಗೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಕಂಪನಿಯ ಯೋಜನೆ ವಿಳಂಬವಾಯಿತು. ಭಾರತ ಸೇರಿದಂತೆ ಇತರೆ ದೇಶಗಳಲ್ಲೂ ಚಿಪ್ ಕೊರತೆ ಕಂಡುಬರುತ್ತಿದೆ.

ABOUT THE AUTHOR

...view details