ಸಿಂಗಾಪುರ: 2022ರಲ್ಲಿ ಜಾಗತಿಕ ಷೇರು ಮಾರುಕಟ್ಟೆಗಳ ಹಿನ್ನಡೆ ಅಥವಾ ಸ್ಥಗಿತಗೊಳ್ಳುವಿಕೆಯಿಂದ IPO (ಆರಂಭಿಕ ಸಾರ್ವಜನಿಕ ಕೊಡುಗೆ) ಮಾರುಕಟ್ಟೆಯು ತೀವ್ರವಾಗಿ ಪ್ರಭಾವಿತವಾಗಿರುವ ಮಧ್ಯೆಯೂ EMEIA (ಯುರೋಪ್, ಮಧ್ಯಪ್ರಾಚ್ಯ, ಭಾರತ ಮತ್ತು ಆಫ್ರಿಕಾ) ವಲಯದಲ್ಲಿ ಭಾರತವು ಭರವಸೆಯ ತಾಣವಾಗಿ ಹೊರಹೊಮ್ಮಿದೆ. ಅರ್ನೆಸ್ಟ್ ಮತ್ತು ಯಂಗ್ ವರದಿಯ ಪ್ರಕಾರ, EMEIA ಐಪಿಓಗಳ ಒಟ್ಟು ಸಂಖ್ಯೆಯು ಶೇ 53 ರಷ್ಟು ಕಡಿಮೆಯಾದಾಗ ಮತ್ತು ಸಂಗ್ರಹಿಸಲಾದ ಮೊತ್ತವು ಶೇ 55 ರಷ್ಟು (358 IPO ಗಳು ಮತ್ತು USD 49.9 ಶತಕೋಟಿ) ಕುಸಿದಾಗ, ಭಾರತೀಯ ಐಪಿಒಗಳ ಸಂಖ್ಯೆಯು 134 ರಿಂದ 138ಕ್ಕೆ ಏರಿಕೆಯಾಗಿದೆ. ಇವುಗಳಿಂದ ಒಟ್ಟು 7.5 ಬಿಲಿಯನ್ ಯುಎಸ್ ಡಾಲರ್ ಸಂಗ್ರಹಿಸಲಾಗಿದೆ.
ಆಶಾಕಿರಣದ ನಡುವೆಯೂ ಕುಸಿತ:ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ಐಪಿಒಗಳಲ್ಲೊಂದಾದ ಭಾರತೀಯ ಜೀವವಿಮಾ ನಿಗಮದ ಐಪಿಒ ದಿಂದ 2.7 ಯುಎಸ್ ಡಾಲರ್ ಬಂಡವಾಳ ಸಂಗ್ರಹವಾಗಿದೆ. ಆದಾಗ್ಯೂ ಕಳೆದ ವರ್ಷ ಐಪಿಒಗಳಿಂದ ಬಂದ ಒಟ್ಟು ಮೌಲ್ಯವು 2021 ರಲ್ಲಿ 17.3 ಶತಕೋಟಿ ಯುಎಸ್ ಡಾಲರ್ಗಳಿಂದ ಶೇ 56 ರಷ್ಟು ಕಡಿಮೆಯಾಗಿದೆ.
ತುಲನಾತ್ಮಕವಾಗಿ ಉತ್ತುಂಗದಲ್ಲಿರುವ ಭಾರತದ ಐಪಿಒ ಜಿಡಿಪಿ ಸುಮಾರು 7 ರಷ್ಟು ಏರಿಕೆಯಾಗುವ ನಿರೀಕ್ಷೆಯಿಂದ ಮತ್ತು ಸ್ಟಾಕ್ ಮಾರುಕಟ್ಟೆಯು ಶೇ 5ರಷ್ಟು ಏರಿಕೆಯೊಂದಿಗೆ ಮಾರುಕಟ್ಟೆಯು ಅದರ ಆರ್ಥಿಕತೆಯ ಸ್ಥಿತಿಸ್ಥಾಪಕತ್ವದಲ್ಲಿ ಪ್ರತಿಬಿಂಬಿತವಾಗಿದೆ. ತುಲನಾತ್ಮಕವಾಗಿ ಉತ್ತುಂಗದಲ್ಲಿರುವ ಭಾರತದ ಐಪಿಒ ಮಾರುಕಟ್ಟೆಯು ಅದರ ಆರ್ಥಿಕತೆಯ ಸ್ಥಿತಿಸ್ಥಾಪಕತ್ವದಲ್ಲಿ ಪ್ರತಿಬಿಂಬಿತವಾಗಿದೆ. ಜಿಡಿಪಿ ಸುಮಾರು 7 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಮತ್ತು ಸ್ಟಾಕ್ ಮಾರುಕಟ್ಟೆಯು ವರ್ಷಕ್ಕೆ ಸೆನ್ಸೆಕ್ಸ್ 5 ಶೇಕಡಾ ಏರಿಕೆಯೊಂದಿಗೆ ಇತರ ಸ್ಟಾಕ್ ಮಾರ್ಕೆಟ್ಗಳನ್ನು ಮೀರಿಸಿದೆ. ಇದು ದೇಶದ ಆರ್ಥಿಕ ಚೇತರಿಕೆಗೆ ಹಾಗೂ ಕುಸಿತ ತಡೆಯುವ ಆಶಾ ಕಿರಣದಂತೆಯೂ ಬಾಸವಾಗುತ್ತಿದೆ.