ಹೈದರಾಬಾದ್: ಹೂಡಿಕೆಯ ತಂತ್ರಗಳು ಬಹುಕಾಲದಿಂದ ಮಾರುಕಟ್ಟೆ ಬಂಡವಾಳೀಕರಣದ ವಿಧಾನದ ಸುತ್ತಲೇ ಕೇಂದ್ರೀಕೃತವಾಗಿವೆ. ಇನ್ನು ಮೌಲ್ಯಯುತ ಸೂಚ್ಯಂಕ ನಿಧಿಗಳು ಸೂಚ್ಯಂಕಗಳಲ್ಲಿನ ಎಲ್ಲ ಷೇರುಗಳಿಗೆ ಸಮಾನ ಮೌಲ್ಯವನ್ನು ನೀಡುತ್ತವೆ ಮತ್ತು ಸ್ಥಿರವಾದ ಪ್ರತಿಫಲಗಳನ್ನು ಗಳಿಸುವ ಅವಕಾಶವನ್ನು ಸೃಷ್ಟಿಸುತ್ತವೆ.
ಸೀಮಿತ ಸಂಖ್ಯೆಯ ಕಂಪನಿಗಳಲ್ಲೇ ಅತಿಯಾದ ಹೂಡಿಕೆ ಮಾಡುವ ಅಪಾಯವನ್ನು ತಪ್ಪಿಸುವ ನಿಫ್ಟಿ 50 ಸೂಚ್ಯಂಕಗಳತ್ತ ಒಮ್ಮೆ ಚಿತ್ತ ಹರಿಸುವುದು ಸೂಕ್ತ. ಅತ್ಯಂತ ಬಲವಾದ ಹಾಗೂ ಸಧೃಢವಾದ ಕಂಪನಿಗಳಲ್ಲಿ ಹೂಡಿಕೆ ಮಾಡುವುದರಿಂದ ಯಾವಾಗಲೂ ಪ್ರಯೋಜನಗಳಿವೆ. ಕೆಲವು ಷೇರುಗಳಲ್ಲಿ ಹೂಡಿಕೆಗಳನ್ನು ಕೇಂದ್ರೀಕರಿಸುವುದು ಅಥವಾ ಎರಡು ಅಥವಾ ಮೂರು ವಲಯಗಳಿಗೆ ಹೂಡಿಕೆಗಳನ್ನು ಅತಿಯಾಗಿ ಹಂಚುವುದನ್ನು ನಿಲ್ಲಿಸುವುದು ಸೂಕ್ತ. ಒಂದೇ ಕಂಪನಿ ಮೇಲೆ ಹೂಡಿಕೆ ಮಾಡುವುದಕ್ಕಿಂತ ಬೇರೆ ಬೇರೆ ಮೌಲ್ಯಯುತ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ.
ಸಮಾನ ತೂಕದ ಸೂಚ್ಯಂಕ ಹೂಡಿಕೆ ವಿಧಾನವನ್ನು ಮೊದಲು ಅಮೆರಿಕದಲ್ಲಿ ಪರಿಚಯಿಸಲಾಯಿತು. 2000 ರಲ್ಲಿ S&P 500 ಸಮಾನ ತೂಕದ ಸೂಚ್ಯಂಕದೊಂದಿಗೆ ವ್ಯವಹಾರ ಆರಂಭಿಸಲು ಅನುಮತಿ ನೀಡಲಾಗಿತ್ತು. ಆ ನಂತರ, ಎಲ್ಲಾ ದೇಶಗಳಲ್ಲಿ ಇದನ್ನು ಅನುಸರಿಸಲಾಯಿತು. ನಿಫ್ಟಿ 50 ಸೂಚ್ಯಂಕವನ್ನು ಆಧರಿಸಿದ ಮೊದಲ ನಿಧಿಯು ನಮ್ಮ ದೇಶದಲ್ಲಿ 2017 ರಲ್ಲಿ ಜಾರಿಗೆ ಬಂದಿತ್ತು. ಕಳೆದ ಕೆಲವು ವರ್ಷಗಳಲ್ಲಿ, S&P 500 ಮತ್ತು ಇತರ ಸಮಾನ ತೂಕದ ಸೂಚ್ಯಂಕಗಳು ದೀರ್ಘಾವಧಿಯಲ್ಲಿ ಮಾರುಕಟ್ಟೆ ಬಂಡವಾಳೀಕರಣದಲ್ಲಿ ಕೆಲವು ದೊಡ್ಡ ಕಂಪನಿಯ ನಿಧಿಗಳಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿವೆ.
ಷೇರು ಮಾರುಕಟ್ಟೆಯಲ್ಲಿ 'ಡಿಪೋಲರೈಸೇಶನ್' ಅವಧಿಯಲ್ಲಿ ಸಮಾನ ತೂಕದ ಸೂಚ್ಯಂಕವು ಹೆಚ್ಚಿನ ಆದಾಯವನ್ನು ದಾಖಲಿಸುವ ಮೂಲಕ ಹೂಡಿಕೆದಾರರಿಗೆ ಲಾಭ ಮಾಡಿಕೊಟ್ಟಿವೆ. ಮಾರುಕಟ್ಟೆಯಲ್ಲಿ ಕೇಂದ್ರೀಕೃತ ಪ್ರವೃತ್ತಿ ಇದ್ದಾಗ, ಸೂಚ್ಯಂಕದಲ್ಲಿ ಹೆಚ್ಚಿನ ಮೌಲ್ಯ ಹೊಂದಿರುವ ಷೇರುಗಳು ಲಾಭ ಪಡೆಯುತ್ತವೆ. ಆದರೆ, ಡಿಪೋಲರೈಸೇಶನ್ ಸಮಯದಲ್ಲಿ ಎಲ್ಲ ಷೇರುಗಳ ಬೆಲೆಗಳು ಏರುತ್ತವೆ. ಆದ್ದರಿಂದ, ಸಮಾನ ತೂಕದ ಸೂಚ್ಯಂಕ ಯೋಜನೆಗಳು 'ಡಿಪೋಲರೈಸೇಶನ್' ಸಂದರ್ಭಗಳಲ್ಲಿ ಆಕರ್ಷಕವಾಗುತ್ತವೆ. 2009 ರಲ್ಲಿ ಅತಿದೊಡ್ಡ ಆರ್ಥಿಕ ಹಿಂಜರಿತದ ನಂತರ, ಕೋವಿಡ್ -19 ರ ನಂತರ 2020 ರಲ್ಲಿ ಷೇರು ಮಾರುಕಟ್ಟೆಯಲ್ಲಿ ಈ ಇಂತಹ ಷೇರುಗಳಿಗೆ ಹೆಚ್ಚಿನ ಮಹತ್ವ ಇದೆ.