ನವದೆಹಲಿ:ದೇಶದ ರಫ್ತು ಪ್ರಕ್ರಿಯೆ ಹೆಚ್ಚುತ್ತಿದೆ. ಆರ್ಥಿಕ ಹಿಂಜರಿತದ ಮಧ್ಯೆಯೂ ಭಾರತ ಈ ವರ್ಷ 192 ಮಿಲಿಯನ್ ಡಾಲರ್ನಷ್ಟು ರಫ್ತು ಮಾಡಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಕೇಂದ್ರ ವಾಣಿಜ್ಯ ಕಾರ್ಯಾಲಯ ಹೇಳಿದೆ.
ಕಳೆದ 2 ತ್ರೈಮಾಸಿಕಗಳಿಂದ ಅಮೆರಿಕ ಆರ್ಥಿಕ ಹಿಂಜರಿತದಲ್ಲಿದೆ. ಇದರಿಂದ ಅಲ್ಲಿ ಬಡ್ಡಿದರಗಳು ಹೆಚ್ಚಾಗುತ್ತಿವೆ. ಇದರ ಪರಿಣಾಮ ವಿಶ್ವದ ಇತರ ದೇಶಗಳ ಮೇಲೂ ಬಿದ್ದಿದೆ. ಹಣದುಬ್ಬರಕ್ಕೂ ಇದು ಕಾರಣವಾಗಿದೆ. ಇಷ್ಟೆಲ್ಲಾ ಜಟಿಲತೆ ಮಧ್ಯೆಯೂ ಭಾರತ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 5 ತಿಂಗಳಲ್ಲಿ 192.6 ಮಿಲಿಯನ್ ಡಾಲರ್ ಮೌಲ್ಯದಷ್ಟು ರಫ್ತು ಮಾಡಿದೆ ಎಂದು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಬಿ ವಿ ಆರ್ ಸುಬ್ರಹ್ಮಣ್ಯಂ ತಿಳಿಸಿದರು.