ನವದೆಹಲಿ : ಕಾಲ್ ಸೆಂಟರ್, ಡೆಲಿವರಿ ಎಕ್ಸೆಕ್ಯುಟಿವ್ಗಳು ಮತ್ತು ನುರಿತ ಕುಕ್ಗಳನ್ನು ನೇಮಕ ಮಾಡಿಕೊಳ್ಳುವ ವಿಷಯದಲ್ಲಿ ಮುಂಬೈ, ಚೆನ್ನೈ ಮತ್ತು ಬೆಂಗಳೂರು 2020ರಿಂದ ಮುಂಚೂಣಿಯಲ್ಲಿವೆ ಎಂದು ಅಧ್ಯಯನ ವರದಿ ಹೇಳಿದೆ. ಮೇ 2020 ರಿಂದ ಮೇ 2023 ರವರೆಗಿನ ಮಾಹಿತಿಯ ಪ್ರಕಾರ, ಈ ಮೂರು ಮೆಟ್ರೋ ನಗರಗಳು ಆನ್‌ಲೈನ್ ಇ-ಕಾಮರ್ಸ್ ಮತ್ತು ಫುಡ್ ಡೆಲಿವರಿ ವಿಭಾಗದಲ್ಲಿನ ಬ್ಲೂ ಕಾಲರ್ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಮೂರು ಅಗ್ರ ನಗರಗಳಾಗಿ ಹೊರಹೊಮ್ಮಿವೆ ಎಂದು ಜಾಬ್ ಪೋರ್ಟಲ್ ಇಂಡೀಡ್ ಇಂಡಿಯಾ ಹೇಳಿದೆ.
ಪ್ಲಾಟ್‌ಫಾರ್ಮ್ ಪ್ರಕಾರ, ಕಾಲ್ ಸೆಂಟರ್ ಪ್ರತಿನಿಧಿಯ ಸರಾಸರಿ ವೇತನ ಬೆಂಗಳೂರಿನಲ್ಲಿ ವರ್ಷಕ್ಕೆ 2,52,483 ರೂ. ಆಗಿದೆ. ಚೆನ್ನೈನಲ್ಲಿನ ಡೆಲಿವರಿ ಎಕ್ಸಿಕ್ಯೂಟಿವ್ ವರ್ಷಕ್ಕೆ ಸರಾಸರಿ ಮೂಲ ವೇತನ ರೂ 2,02,586 ಗಳಿಸುತ್ತಾನೆ. ವಿಕಸನಗೊಳ್ಳುತ್ತಿರುವ ಆರ್ಥಿಕ ಪರಿಸ್ಥಿತಿಗಳಿಂದಾಗಿ ಕೆಲ ಕೈಗಾರಿಕೆಗಳು ಇತರರಿಗಿಂತ ಹೆಚ್ಚಿನ ಲಾಭ ಪಡೆದಿವೆ ಮತ್ತು ಬ್ಲೂ ಕಾಲರ್ ಉದ್ಯೋಗಿಗಳಿಗೆ ಆಕರ್ಷಕ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ.
ಕಾಲ್ ಸೆಂಟರ್ ಉದ್ಯೋಗಗಳಲ್ಲಿ ಮುಂಬೈ ಅಗ್ರಸ್ಥಾನದಲ್ಲಿದೆ (ಶೇ 12). ಬೆಂಗಳೂರು (ಶೇ 11.86) ಮತ್ತು ಚೆನ್ನೈ (ಶೇ 8) ನಂತರದ ಸ್ಥಾನದಲ್ಲಿವೆ. ಇದರ ಜೊತೆಗೆ ಕುಕ್ಗಳ ನೇಮಕಾತಿಯಲ್ಲೂ ಮುಂಬೈ (ಶೇ 13) ಮುಂಚೂಣಿಯಲ್ಲಿದೆ. ಕುಕ್ಗಳ ನೇಮಕಾತಿಯಲ್ಲಿ ಬೆಂಗಳೂರು (ಶೇ. 7.47) ಮತ್ತು ಚೆನ್ನೈ (ಶೇ. 7) ನಂತರದ ಸ್ಥಾನದಲ್ಲಿವೆ. ಹಾಗೆಯೇ ಡೆಲಿವರಿ ಎಕ್ಸೆಕ್ಯೂಟಿವ್ ನೇಮಕಾತಿ ವಿಚಾರದಲ್ಲಿ ಚೆನ್ನೈ (ಶೇ 12) ಮುಂದಿದೆ. ಬೆಂಗಳೂರು (ಶೇ 8) ಮತ್ತು ಮುಂಬೈ (ಶೇ 5) ನಂತರದ ಸ್ಥಾನದಲ್ಲಿವೆ.