ಕರ್ನಾಟಕ

karnataka

ETV Bharat / business

2023ರಲ್ಲಿ ಭಾರತದ ಆರ್ಥಿಕ ದರ 6.1ಕ್ಕೆ ಕುಸಿತ: ಐಎಂಎಫ್​ ವರದಿ - ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ

ನಾಳೆ ಕೇಂದ್ರ ಬಜೆಟ್​ ಮಂಡನೆಯಾಗಲಿದ್ದು, ಅದಕ್ಕೂ ಮೊದಲು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್​) ದೇಶದ ಆರ್ಥಿಕ ಬೆಳವಣಿಗೆ ದರವನ್ನು ಅಂದಾಜಿಸಿದೆ.

imf-projects-indias-growth
ಭಾರತದ ಆರ್ಥಿಕ ದರ ಬಗ್ಗೆ ಐಎಂಎಫ್​ ವರದಿ

By

Published : Jan 31, 2023, 1:36 PM IST

ಹೈದರಾಬಾದ್/ವಾಷಿಂಗ್ಟನ್:ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕ ದೇಶವಾಗಿದ್ದರೂ, 2022-23 ನೇ ಸಾಲಿನ ಆರ್ಥಿಕ ಬೆಳವಣಿಗೆ ದರ ತುಸು ಕುಸಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್​) ಅಂದಾಜಿಸಿದೆ. ಈ ವರ್ಷದ 6.8 ಆರ್ಥಿಕ ದರ ಹಾಗೆಯೇ ಮುಂದುವರಿಯಲಿದೆ. ಇದು ಬಳಿಕ ಇಳಿಕೆ ಕಾಣಲಿದೆ ಎಂದಿದೆ. ಇದೇ ವೇಳೆ ನೆರೆಯ ರಾಷ್ಟ್ರ ಚೀನಾ ಆರ್ಥಿಕ ಪ್ರಗತಿ ಕಾಣಲಿದೆ ಎಂದು ಭವಿಷ್ಯ ಹೇಳಿದೆ.

ಕೇಂದ್ರ ಸರ್ಕಾರ ತನ್ನ ಕೊನೆಯ ಪೂರ್ಣಾವಧಿ ಬಜೆಟ್​ ಮಂಡನೆಗೆ ಸಿದ್ಧತೆ ನಡೆಸಿದ ಹೊತ್ತಲ್ಲೇ ಐಎಂಎಫ್​ ತನ್ನ ವರದಿ ಮಂಡಿಸಿದ್ದು, ಭಾರತದ ಆರ್ಥಿಕ ದರವನ್ನು ಕುಗ್ಗಿಸಿದೆ. ಆರ್ಥಿಕ ಬೆಳವಣಿಗೆ ಕುಸಿದರೂ ಅದು ಭಾರತದ ಆಂತರಿಕ ವಿದ್ಯಮಾನಗಳಿಗಿಂತಲೂ ಬಾಹ್ಯ ಬೆಳವಣಿಗೆಯ ಪರಿಣಾಮಗಳಿಂದಾಗಿ ಅದು ತುಸು ನಷ್ಟ ಅನುಭವಿಸಲಿದೆ ಎಂದು ವರದಿ ಹೇಳಿದೆ. ಇತ್ತೀಚೆಗಿನ ಅಂದಾಜಿನಲ್ಲಿ ಭಾರತದ ಬೆಳವಣಿಗೆಯ ದರವನ್ನು ಹೊಗಳಿದ್ದ ಅಂತಾರಾಷ್ಟ್ರೀಯ ಸಂಸ್ಥೆ ಹಣದುಬ್ಬರ, ರಷ್ಯಾದ ಆಕ್ರಮಣ, ಹೆಚ್ಚಿನ ಬಡ್ಡಿದರಗಳ ಹೊರತಾಗಿಯೂ ವಿಶ್ವ ಆರ್ಥಿಕತೆಗೆ ಹೋಲಿಸಿದರೆ, ಭಾರತದ ಬೆಳವಣಿಗೆ ಉಜ್ವಲವಾಗಿದೆ ಎಂದಿತ್ತು.

ಮುಂದಿನ ವರ್ಷ ಚೇತರಿಕೆ:ಭಾರತದ ಬೆಳವಣಿಗೆಯು 2022 ರ ಶೇಕಡಾ 6.8 ರಿಂದ 2023 ರಲ್ಲಿ ಶೇಕಡಾ 6.1 ಕ್ಕೆ ಇಳಿಯಲಿದೆ. 2024 ರಲ್ಲಿ ಇದು ಮತ್ತೆ ಶೇಕಡಾ 6.8 ಕ್ಕೆ ಏರುತ್ತದೆ. ಬಾಹ್ಯ ಪರಿಣಾಮಗಳನ್ನೂ ಮೀರಿ ದೇಶೀಯ ಬೆಳವಣಿಗೆ ಚೇತರಿಸಿಕೊಳ್ಳಲಿದೆ ಎಂದು ಐಎಂಎಫ್​ನ ವರ್ಲ್ಡ್ ಎಕನಾಮಿಕ್ ಔಟ್‌ಲುಕ್ ಅಪ್‌ಡೇಟ್ ಹೇಳಿದೆ. ಏಷ್ಯಾದ ಪ್ರವರ್ಧಮಾನಕ್ಕೆ ಬರುತ್ತಿರುವ ಹಾಗೂ ಅಭಿವೃದ್ಧಿಶೀಲ ದೇಶಗಳಲ್ಲಿ 2023-24 ರ ಆರ್ಥಿಕ ವರ್ಷದಲ್ಲಿ ಪ್ರಗತಿ ದರ ಶೇ.5.3 ರಷ್ಟಯ ಇರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಇದು 4.3 ಕ್ಕೆ ಇಳಿದಿತ್ತು. ಈ ಸ್ಥಿತಿಗೆ ಚೀನಾದ ವಿದ್ಯಮಾನಗಳೇ ಮುಖ್ಯ ಕಾರಣ ಎಂದು ಐಎಂಎಫ್​ ಹೇಳಿದೆ.

ಜಾಗತಿಕ ಹಣದುಬ್ಬರವೂ ಇಳಿಕೆ:ಜಾಗತಿಕ ಸಾಲ ನೀಡುವ ಸಂಸ್ಥೆಯಾದ ಐಎಂಎಫ್​, ಕಳೆದ ವರ್ಷ 8.8 ಪ್ರತಿಶತದ ಹಣದುಬ್ಬರ 2023 ರಲ್ಲಿ 6.6 ಶೇಕಡಾ ಇಳಿಯಲಿದೆ ಎಂದು ನಿರೀಕ್ಷಿಸಿದೆ. ಚೀನಾ ಆರ್ಥಿಕತೆಯು 2022 ರಲ್ಲಿ ಕೇವಲ 3 ಪ್ರತಿಶತದ ವಿರುದ್ಧ 2023 ರ ಸಮಯದಲ್ಲಿ 5.2 ಶೇಕಡಾದಲ್ಲಿ ಬೆಳೆಯಬಹುದು ಎಂದು ಹೇಳುತ್ತದೆ. IMF ಅಮೆರಿಕ ಮತ್ತು ಹಲವಾರು ಯುರೋಪಿಯನ್ ರಾಷ್ಟ್ರಗಳಿಗೆ ಸುಧಾರಿತ ದೃಷ್ಟಿಕೋನವನ್ನು ಯೋಜಿಸಿದೆ.

ವಿಶ್ವದ ಬಹುತೇಕ ಪ್ರಗತಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ ಚಟುವಟಿಕೆಗಳು ಯಥಾಸ್ಥಿತಿಗೆ ಮರಳುತ್ತಿವೆ. ಏಷ್ಯಾದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಪ್ರಗತಿದರ ಶೇ.3.9 ರಷ್ಟು ಇತ್ತು. ಮುಂದನ ಆರ್ಥಿಕ ವರ್ಷದಲ್ಲಿ ಇದು ಶೇ.4 ಕ್ಕೆ ತಲುಪಲಿದೆ. ಚೀನಾ ಮತ್ತು ಭಾರತ ದೇಶಗಳು ಮುಂದಿನ ಹಣಕಾಸು ವರ್ಷದಲ್ಲಿ ಜಾಗತಿಕ ಪ್ರಗತಿಯ ಅರ್ಧದಷ್ಟು ಪಾಲು ಪಡೆಯಲಿವೆ. ಇದು ಗಮನಾರ್ಹ ಸಂಗತಿಯಾಗಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕಷ್ಟ:ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಆರ್ಥಿಕತೆಗಳು ವಿಶ್ವದ ಆರ್ಥಿಕ ಪ್ರಗತಿಯಲ್ಲಿ 10ನೇ 1ರಷ್ಟು ಪಾಲು ಪಡೆದಿವೆ. ಇದಕ್ಕೆ ಹೋಲಿಸಿದರೆ ಅರ್ಧದಷ್ಟು ಪಾಲು ಪಡೆದಿರುವ ಭಾರತ-ಚೀನಾ ಆರ್ಥಿಕತೆಗಳು ಪ್ರಾಮುಖ್ಯತೆ ಅರ್ಥವಾಗುತ್ತದೆ. ಮುಂದುವರಿದ ದೇಶಗಳ ಆರ್ಥಿಕತೆಗೆ ಇದು ಸುಸಮಯ ಅಲ್ಲ. ಆರ್ಥಿಕ ಹಿಂಜರಿತಕ್ಕೆ ಪೂರ್ವಭಾವಿಯಾಗಿ ಕಾಣಿಸಿಕೊಳ್ಳುವ ಸ್ಲೋಡೌನ್ ಭೀತಿ ಮುಂದುವರಿಯಲಿದೆ. ಕಳೆದ ವರ್ಷ ಆರ್ಥಿಕ ಪ್ರಗತಿಯು ಶೇ 2.7ರಷ್ಟಿದ್ದರೆ, ಈ ವರ್ಷ ಮತ್ತು ಮುಂದಿನ ವರ್ಷದ ಆರ್ಥಿಕ ಪ್ರಗತಿಯು ಶೇ 1.4 ಇರಬಹುದು ಎಂದು ಅಂದಾಜಿಸಲಾಗಿದೆ. ಮುಂದುವರಿದ 10 ದೇಶಗಳ ಪೈಕಿ 9 ದೇಶಗಳಲ್ಲಿ ಆರ್ಥಿಕ ಪ್ರಗತಿ ಕುಂಠಿತಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ಜಿ20 ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್ ಸಭೆ

ABOUT THE AUTHOR

...view details