ಕರ್ನಾಟಕ

karnataka

ETV Bharat / business

ಮಾರ್ಕೆಟ್​ ಬಾಕ್ಸ್​ ​ಹಗರಣಕ್ಕೆ ಹೈದರಾಬಾದ್​ ನಂಟು.. ಆ್ಯಪ್​ ರೂಪಿಸಿಕೊಟ್ಟವ ಹೈದರಾಬಾದಿಗ! - Market Box scammmer Abhishek Jain

9 ಕೋಟಿಗೂ ಅಧಿಕ ವಂಚನೆ ಮಾಡಿದ ಮಾರ್ಕೆಟ್​ ಆ್ಯಪ್​ ಹಗರಣಕ್ಕೆ ಹೈದರಾಬಾದ್​ ನಂಟು ಬೆಸೆದಿದೆ ಆ್ಯಪ್​ ರೂಪಿಸಿಕೊಟ್ಟ ವ್ಯಕ್ತಿ ಹೈದರಾಬಾದ್​ ನಿವಾಸಿಯಾಗಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

market-box-crores-scam
ಮಾರ್ಕೆಟ್​ ಬಾಕ್ಸ್​ ​ಹಗರಣಕ್ಕೆ ಹೈದರಾಬಾದ್​ ನಂಟು

By

Published : Nov 15, 2022, 4:13 PM IST

ಹೈದರಾಬಾದ್:ಕಡಿಮೆ ಬಂಡವಾಳ, ಅಧಿಕ ಲಾಭದ ಆಸೆ ತೋರಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಮಾರ್ಕೆಟ್​ ಬಾಕ್ಸ್​ ಆ್ಯಪ್​ ಪ್ರಕರಣಕ್ಕೆ ಹೈದರಾಬಾದ್​ ನಂಟಿರುವುದು ತಿಳಿದುಬಂದಿದೆ. ಆ್ಯಪ್​ ರೂಪಿಸಿ ಕೊಟ್ಟ ವ್ಯಕ್ತಿ ಹೈದರಾಬಾದ್​ ಮೂಲದವ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ವಿಪರ್ಯಾಸವೆಂದರೆ ಆ್ಯಪ್​ನಲ್ಲಿ ಹೂಡಿಕೆ ಮಾಡಿ ಮೋಸ ಹೋದ ವ್ಯಕ್ತಿಯೂ ಹೈದರಾಬಾದ್​ಗೆ ಸೇರಿದವರು.

ಆ್ಯಪ್​ ರೂಪಿಸಿ ನಿರ್ವಹಣೆ ಮಾಡುತ್ತಿದ್ದ ಮಾಲೀಕ ಉತ್ತರಪ್ರದೇಶ ಮೂಲದ ಅಭಿಷೇಕ್​ ಜೈನ್​ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಕಡಿಮೆ ಬಂಡವಾಳ ಹೂಡಿದರೆ ಅಧಿಕ ಲಾಭ ನೀಡುವುದಾಗಿ ಭರವಸೆ ನೀಡಿ ಸಾವಿರಾರು ಜನರನ್ನು ವಂಚಿಸಿರುವುದು ತನಿಖೆಯಲ್ಲಿ ಬಯಲಾಗಿದೆ.

ಉತ್ತರಪ್ರದೇಶದ ಅಭಿಷೇಕ್​ ಜೈನ್​ ಸೂಚನೆಯಂತೆ ಹೈದರಾಬಾದ್​ನ ಭನ್ವರ್​ಲಾಲ್​ ಎಂಬಾತ ಆ್ಯಪ್​ ರೂಪಿಸಿಕೊಟ್ಟಿದ್ದಾನೆ. ಭನ್ವರ್​ಲಾಲ್​ ಕೆಲ ವರ್ಷಗಳ ಹಿಂದೆ ಹೈದರಾಬಾದ್​ಗೆ ಬಂದು ನೆಲೆಸಿ ಇಲ್ಲಿಯೇ ಉಳಿದುಕೊಂಡಿದ್ದಾರೆ. ವ್ಯವಹಾರದ ಕಾರಣಕ್ಕಾಗಿ ಆ್ಯಪ್​ ರೂಪಿಸಿಕೊಟ್ಟಿದ್ದು, ವಂಚನೆ ನಡೆಸುವ ಬಗ್ಗೆ ಈತನಿಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಂತ್ರಿಕವಾಗಿ ಸಹಕರಿಸಿರುವ ಭನ್ವರ್​ಲಾಲ್​ ಈ ಪ್ರಕರಣದಲ್ಲಿ ಹೊಂದಿರುವ ಪಾತ್ರದ ಬಗ್ಗೆ ಇನ್ನಷ್ಟು ತನಿಖೆ ನಡೆಸುತ್ತಿರುವ ಸೈಬರಾಬಾದ್​ ಸೈಬರ್​ಕ್ರೈಮ್​ ಪೊಲೀಸರು, ಆರೋಪ ಸಾಬೀತಾದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸುವ ಸಾಧ್ಯತೆ ಇದೆ. ಮಾರ್ಕೆಟ್​​ ಬಾಕ್ಸ್​ ಮಾದರಿಯಲ್ಲಿ ಬೇರೆ ಆ್ಯಪ್​ಗಳು, ವೆಬ್​ಸೈಟ್​ಗಳು ಚಾಲ್ತಿಯಲ್ಲಿವೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?:ಉತ್ತರ ಪ್ರದೇಶದ ಮೊಗಲ್ಸರಾಯ್‌ನ ಅಭಿಷೇಕ್ ಜೈನ್ ಎಂಬುವರು ಮಾರ್ಕೆಟ್ ಬಾಕ್ಸ್ ಆ್ಯಪ್ ಮತ್ತು ವೆಬ್‌ಸೈಟ್ ಅನ್ನು ಆರಂಭಿಸಿದ್ದರು. ಇದರಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ನೀಡಲಾಗುತ್ತದೆ ಎಂದು ವಾಟ್ಸ್ ಆ್ಯಪ್ ಮತ್ತು ಟೆಲಿಗ್ರಾಂ ಗ್ರೂಪ್​ಗಳಲ್ಲಿ ಜಾಹೀರಾತು ನೀಡಿ ಪ್ರಚಾರ ಮಾಡಿದ್ದರು.

ಅದರಂತೆ ಹೈದರಾಬಾದ್​ನ ವ್ಯಕ್ತಿಯೊಬ್ಬರು 10 ಲಕ್ಷ ರೂ.ಗಳನ್ನು ಆ್ಯಪ್​ನಲ್ಲಿ ಹೂಡಿಕೆ ಮಾಡಿದ್ದರು. ಬಳಿಕ 14.9 ಲಕ್ಷ ರೂಪಾಯಿ ವಾಪಸ್​ ಪಡೆದಿದ್ದರು. ನಂತರ ಅವರು ಟ್ರೇಡಿಂಗ್ ಮೂಲಕ 62.6 ಲಕ್ಷ ರೂಪಾಯಿ ಮರು ಹೂಡಿಕೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಆ್ಯಪ್​ 34.7 ಲಕ್ಷ ರೂಪಾಯಿ ಮಾತ್ರ ವಾಪಸ್ ನೀಡಿತ್ತು.

ಆ್ಯಪ್​ನಿಂದ ತನಗೆ 27.9 ಲಕ್ಷ ರೂಪಾಯಿ ಮೋಸ ಹೋಗಿದ್ದಾಗಿ ಕಳೆದ ವರ್ಷ ಸೈಬರಾಬಾದ್‌ನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿದ ಪೊಲೀಸರು ಮೊಗಲ್ಸ್​ರಾಯ್​ಗೆ ತೆರಳಿ ಅಭಿಷೇಕ್ ಜೈನ್ ಸೇರಿದಂತೆ ಮೂವರನ್ನು ಆಗಸ್ಟ್​ನಲ್ಲಿ ಬಂಧಿಸಿದ್ದರು. ಆ್ಯಪ್‌ನಲ್ಲಿ ದೇಶದ ವಿವಿಧ ರಾಜ್ಯಗಳ 3 ಸಾವಿರಕ್ಕೂ ಅಧಿಕ ಮಂದಿ ನೋಂದಣಿಯಾಗಿ ಹೂಡಿಕೆ ಮಾಡಿದ್ದು, ಸುಮಾರು 9.81 ಕೋಟಿ ರೂಪಾಯಿ ವಂಚನೆ ಮಾಡಿದ್ದು ತನಿಖೆಯಲ್ಲಿ ಪತ್ತೆಯಾಗಿದೆ.

ಓದಿ:ಬೀಟ್​ನಲ್ಲಿದ್ದ ಪೊಲೀಸರಿಗೆ ಸಿಕ್ಕಿ ಬಿದ್ದ ಹುಡುಗ - ಹುಡುಗಿ... ಬಾಲಕಿ ಪೋಷಕರಿಂದ ಅತ್ಯಾಚಾರ ಆರೋಪ

ABOUT THE AUTHOR

...view details