ಹೈದರಾಬಾದ್: ಯಾವುದೇ ವಾಹನವನ್ನು ಚಲಾಯಿಸಲು ನೀವು ವಾಹನ ವಿಮೆಯನ್ನು ಹೊಂದಿರಲೇಬೇಕು. ಹಾಗಾಗಿ ಹೊಸ ವಾಹನವನ್ನು ಖರೀದಿಸುವಾಗ ವಿಮಾ ಪಾಲಿಸಿಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಅನೇಕರು ವಾಹನವಿಮೆಯನ್ನು ನವೀಕರಿಸಲು ಆಸಕ್ತಿ ತೋರಿಸುವುದಿಲ್ಲ. ಯಾರಾದರೂ ಕೇಳಿದಾಗ ನೋಡೋಣ ಎಂಬ ಧೋರಣೆಯನ್ನು ಹೊಂದಿರುತ್ತಾರೆ. ಇಂತಹ ಧೋರಣೆ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಏಕೆಂದರೆ ವಾಹನದ ವಿಮೆಯ ಅವಧಿ ಮುಗಿದ ಒಂದು ನಿಮಿಷದ ನಂತರ ವಾಹನ ಅಪಘಾತ ಸಂಭವಿಸಿದರೂ ಆ ವಿಮೆ ನಿಮಗೆ ಅನ್ವಯಿಸುವುದಿಲ್ಲ. ಆದ್ದರಿಂದ, ವಿಮೆಯ ಅವಧಿ ಮುಗಿದ ಮೇಲೆ ಉದ್ಭವಿಸುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನೀವು ವಾಹನ ವಿಮೆಯನ್ನು ಪಾವತಿಸಬೇಕು. ಜೊತೆಗೆ ಅವಧಿ ಮುಗಿಯುವ ಮುನ್ನವೇ ವಿಮೆಯನ್ನು ನವೀಕರಿಸಲು ಮುಂದಾಗಬೇಕು.
ನೀವು ಒಂದು ಅಪಘಾತದಲ್ಲಿ ಸಿಲುಕಿದ್ದೀರಿ ಎಂದುಕೊಳ್ಳಿ. ದುರದೃಷ್ಟವಶಾತ್ ನಿಮ್ಮ ವಾಹನದ ವಿಮೆಯನ್ನು ನವೀಕರಿಸಲು ಮರೆತಿದ್ದೀರಿ. ಇಂತಹ ಸಂದರ್ಭದಲ್ಲಿ ನೀವು ಹೆಚ್ಚುವರಿ ನಷ್ಟವನ್ನು ಭರಿಸಬೇಕಾಗಿ ಬರುತ್ತದೆ. ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದರೆ ರೂ. 2,000 ವರೆಗೆ ದಂಡ ಮತ್ತು ಜೈಲು ಶಿಕ್ಷೆಯಾಗುತ್ತದೆ. ಆದ್ದರಿಂದ, ವಿಮೆ ಇರದ ವಾಹನವನ್ನು ಚಲಾಯಿಸದಿರುವುದು ಉತ್ತಮ.
ನಿಮಗೆ ಬೇಕಾದಲ್ಲಿ ವಿಮೆ ಖರೀದಿಸಿ:ವಿಮಾದಾರರು ವಾಹನವನ್ನು ನೇರವಾಗಿ ಪರಿಶೀಲಿಸುವ ಮೂಲಕ ವಾಹನಗಳ ವಿಮೆಯನ್ನು ನವೀಕರಿಸುತ್ತಾರೆ. ಇಲ್ಲದಿದ್ದರೆ, ನೀವು ವಿಮಾ ಕಂಪನಿಗಳಿಗೆ ಹೋಗಿ ವಾಹನವನ್ನು ತೋರಿಸಬಹುದು ಅಥವಾ ಸಂಬಂಧಪಟ್ಟ ವಿಮಾ ಕಂಪನಿಯ ಪ್ರತಿನಿಧಿಗಳು ಬಂದು ವಾಹನವನ್ನು ಪರಿಶೀಲಿಸಿ ವಾಹನ ವಿಮೆಯನ್ನು ನವೀಕರಿಸುತ್ತಾರೆ. ನಿಮ್ಮ ವಾಹನದ ವಿಮಾ ಪಾಲಿಸಿಯ ಅವಧಿ ಮುಗಿದಿರುವುದನ್ನು ಗಮನಿಸಿದ ತಕ್ಷಣ ವಿಮಾ ಕಂಪನಿಯನ್ನು ಸಂಪರ್ಕಿಸಿ ಮತ್ತು ಅದನ್ನು ನವೀಕರಿಸಬೇಕು. ನೀವು ವಿಮಾ ಏಜೆಂಟ್ ಮೂಲಕ ಪಾಲಿಸಿಯನ್ನು ತೆಗೆದುಕೊಂಡರೆ ನೀವು ಅವರನ್ನು ಸಂಪರ್ಕಿಸಿ ವಿಮೆಯನ್ನು ಖರೀದಿಸಬಹುದು. ಅಥವಾ ನೀವು ಆನ್‌ಲೈನ್‌ನಲ್ಲಿ ಪಾಲಿಸಿಯನ್ನು ಖರೀದಿಸಿದರೆ, ನೀವು ಸುಲಭವಾಗಿ ವಿಮಾ ಕಂಪನಿಯ ವೆಬ್‌ಸೈಟ್‌ಗೆ ಹೋಗಿ ಪಾಲಿಸಿಯನ್ನು ನವೀಕರಿಸಬಹುದು.