ಹೈದರಾಬಾದ್: ಇತ್ತೀಚಿನ ದಿನಮಾನಗಳಲ್ಲಿ ಎಲ್ಲ ವರ್ಗದ ಜನರು ತಮ್ಮ ಜೀವನದ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಸಾಲ ಪಡೆಯಲು ಮುಂದಾಗುತ್ತಿದ್ದಾರೆ. ನೀವೂ ಕೂಡ ಹಬ್ಬವನ್ನು ಅವಿಸ್ಮರಣೀಯವಾಗಿಸಲು ನಿರ್ಧರಿಸಿದರೆ, ಮೊದಲು ಬ್ಯಾಂಕ್‌ನಿಂದ ಅಗತ್ಯವಿರುವ ಮನೆ ಅಥವಾ ವಾಹನ ಸಾಲದ ಮೊತ್ತವನ್ನು ಹೇಗೆ ಪಡೆಯುವುದು ಎಂದು ತಿಳಿದುಕೊಳ್ಳುವುದು ಅಗತ್ಯ.
ನೀವು ಆರಂಭದಲ್ಲಿ ಸಲ್ಲಿಸಿದ ದಾಖಲಾತಿಗಳ ಆಧಾರದಲ್ಲಿ ನಿಮಗೆಷ್ಟು ಸಾಲ ಸಿಗುತ್ತದೆ ಎಂಬುದನ್ನು ಬ್ಯಾಂಕ್ ತಿಳಿಸುತ್ತದೆ. ಆದರೆ ಅಂತಿಮವಾಗಿ ನೀವು ಸಲ್ಲಿಸುವ ಎಲ್ಲ ದಾಖಲೆಗಳು ಮತ್ತು ನೀವು ಖರೀದಿಸಲು ಬಯಸಿರುವ ಆಸ್ತಿಯ ಮೌಲ್ಯದ ಮೇಲೆ ನಿಮಗೆ ಸಿಗಬಹುದಾದ ಸಾಲದ ಮೊತ್ತ ನಿರ್ಧಾರವಾಗುತ್ತದೆ.
ಮನೆ ಸಾಲವಾದರೆ ಅದು ನಿರ್ಧಾರವಾಗುವುದು ಹೀಗೆ:ವೈಯಕ್ತಿಕ ಮತ್ತು ಅಡಮಾನ ಸಾಲಗಳಾದರೆ ಒಂದು ನಿರ್ದಿಷ್ಟ ಸಾಲದ ಮೊತ್ತವನ್ನು ಬ್ಯಾಂಕ್ ನಿಮ್ಮ ಖಾತೆಗೆ ಜಮೆ ಮಾಡುತ್ತದೆ. ಇದನ್ನು ಪೂರ್ಣ ಪಾವತಿ ಅಥವಾ ಫುಲ್ ಪೇಮೆಂಟ್ ಎಂದು ಕರೆಯಲಾಗುತ್ತದೆ. ಮನೆ ಮತ್ತು ಶಿಕ್ಷಣ ಸಾಲದ ವಿಚಾರವಾದರೆ ಎಷ್ಟು ಮೊತ್ತವನ್ನು ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ ಎಂಬುದನ್ನು ಬ್ಯಾಂಕ್ ನಿಮಗೆ ತಿಳಿಸುತ್ತದೆ.
ನಂತರ, ಬಿಲ್ಡರ್ ಅಥವಾ ಶಿಕ್ಷಣ ಸಂಸ್ಥೆ ನೀಡುವ ಮಾಹಿತಿಯನ್ನು ಆಧರಿಸಿ, ಉಳಿದ ಮೊತ್ತವನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುತ್ತದೆ. ಇದು ಪೂರ್ಣಗೊಳ್ಳುವವರೆಗೆ ನಿರ್ಮಾಣದ ವಿವಿಧ ಹಂತಗಳನ್ನು ಅವಲಂಬಿಸಿ ಗೃಹ ಸಾಲವನ್ನು ವಿತರಿಸಲಾಗುತ್ತದೆ. ಇದು ಪೂರ್ಣಗೊಂಡ ಮನೆಯಾಗಿದ್ದರೆ, ಖರೀದಿದಾರರೊಂದಿಗೆ ಸಹಿ ಮಾಡಿದ ನೋಂದಾಯಿತ ಮಾರಾಟ ಒಪ್ಪಂದದ ಪ್ರಕಾರ ಒಟ್ಟು ಸಾಲದ ಮೊತ್ತವನ್ನು ಮಾರಾಟಗಾರನಿಗೆ ಪಾವತಿಸಲಾಗುತ್ತದೆ.
ಶೈಕ್ಷಣಿಕ ಸಾಲವಾದರೆ: ಆಯಾ ಸಂಸ್ಥೆಗಳು ಶುಲ್ಕವನ್ನು ಸಂಗ್ರಹಿಸುವ ಸಮಯದಲ್ಲಿ ಅಗತ್ಯವಿರುವಷ್ಟು ಸಾಲದ ಮೊತ್ತವನ್ನು ಬ್ಯಾಂಕ್‌ಗಳು ನಿಯತಕಾಲಿಕವಾಗಿ ಮಂಜೂರು ಮಾಡುತ್ತವೆ. ಕೆಲವೊಮ್ಮೆ, ಸಾಲದ ಮೊತ್ತವನ್ನು ನೇರವಾಗಿ ಸಂಸ್ಥೆಗಳ ಖಾತೆಗಳಿಗೆ ಠೇವಣಿ ಮಾಡಲಾಗುತ್ತದೆ. ಕೆಲವು ಬ್ಯಾಂಕುಗಳು ಸಾಲದ ಪ್ರಾಥಮಿಕ ಸ್ವೀಕೃತದಾರರ ಖಾತೆಗಳಲ್ಲಿ ಮಾತ್ರ ಮೊತ್ತವನ್ನು ಜಮೆ ಮಾಡುತ್ತವೆ. ಆದಾಗ್ಯೂ, ಬೋಧನಾ ಶುಲ್ಕವನ್ನು ಹೊರತುಪಡಿಸಿ ಇತರ ವೆಚ್ಚಗಳಿಗೆ ಸಂಬಂಧಿಸಿದ ಸಾಲಗಳನ್ನು ಸಾಲದಾತರ ವೈಯಕ್ತಿಕ ಖಾತೆಯಲ್ಲಿ ಮಾತ್ರ ಜಮೆ ಮಾಡಲಾಗುತ್ತದೆ.
ಮೊದಲು ಭರವಸೆ ನೀಡಿ ನಂತರ ನಿರಾಕರಿಸಲೂ ಬಹುದು: ಬ್ಯಾಂಕ್ ಆರಂಭದಲ್ಲಿ ನಿಮಗೆ ಸಾಲ ನೀಡುವುದಾಗಿ ಭರವಸೆ ನೀಡಿದ್ದರೂ ನಂತರ ಸಾಲ ನೀಡಲು ನಿರಾಕರಿಸಿದರೆ ಆಶ್ಚರ್ಯಪಡಬೇಡಿ. ಸಾಮಾನ್ಯವಾಗಿ, ಕೆಲವು ಮೂಲ ಅಂಶಗಳ ಆಧಾರದ ಮೇಲೆ ಬ್ಯಾಂಕ್ ಅಧಿಕಾರಿಗಳು ಆರಂಭಿಕ ಅಂದಾಜು ಸಾಲದ ಮೊತ್ತವನ್ನು ನಿರ್ಧಾರ ಮಾಡಿರುತ್ತಾರೆ. ಕೆಲವೊಮ್ಮೆ ಈ ಅಂದಾಜು ಸಾಲದ ಮೊತ್ತವು ಕಡಿಮೆಯಾಗುವ ಸಾಧ್ಯತೆಯಿದೆ.