ಪ್ರಸ್ತುತ ಆರ್ಥಿಕ ವರ್ಷ ಮುಗಿಯಲು ಬಂದಿದೆ. ನಿಮ್ಮ ಆದಾಯ, ವೆಚ್ಚ ಮತ್ತು ತೆರಿಗೆ ಕುರಿತು ಹೆಚ್ಚಿನ ಗಮನಹರಿಸಬೇಕಿದೆ. ಇದಕ್ಕಾಗಿ ನಿಮ್ಮ ವಾರ್ಷಿಕ ಮಾಹಿತಿ ಹೇಳಿಕೆ (Annual Information Statement- AIS)ಗಳನ್ನು ಆದಾಯ ತೆರಿಗೆ ಇಲಾಖೆ ಪೋರ್ಟಲ್ನಲ್ಲಿ ಚೆಕ್ ಮಾಡಿಕೊಳ್ಳಿ. ಈ ಎಎಸ್ಐ ನಿಮ್ಮ ವಾರ್ಷಿಕ ಆದಾಯದ ಒಟ್ಟಾರೆ ಸಂಪೂರ್ಣ ಮಾಹಿತಿ ನೀಡುತ್ತದೆ. 2022-23 ಗಳಿಕೆಗೆ ಸಂಬಂಧಿಸಿದಂತೆ ಎಷ್ಟು ತೆರಿಗೆ ಪಾವತಿ ಮಾಡಬಹುದು ಎಂಬುದರ ಸಂಪೂರ್ಣ ಮಾಹಿತಿ ಒದಗಿಸಲಿದೆ.
ಏನಿದು ಎಎಸ್ಐ?: ತೆರಿಗೆದಾರರು ಆರ್ಥಿಕ ವರ್ಷದ ಅವಧಿಯಲ್ಲಿ ಪಡೆದ ಆದಾಯ ಮತ್ತು ಖರ್ಚುವೆಚ್ಚ, ಹೂಡಿಕೆ, ತೆರಿಗೆ ಅನ್ವಯಿಸುವಿಕೆ ಸೇರಿದಂತೆ ಇನ್ನಿತರ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ. ಆದಾಯ ತೆರಿಗೆ ಇಲಾಖೆಯ ಅಧಿಕೃತ ಪೋರ್ಟಲ್ಗೆ ಲಾಗಿನ್ ಮಾಡುವ ಮೂಲಕ ಇದರ ವಿವರವನ್ನು ಪಡೆಯಬಹುದು. ತೆರಿಗೆದಾರರು ವಾರ್ಷಿಕ ಹಣಕಾಸು ವರ್ಷದಲ್ಲಿ ಮಾಡಿದ ವಹಿವಾಟುಗಳ ಸಂಪೂರ್ಣ ಮಾಹಿತಿಯನ್ನು ಆ್ಯನುವಲ್ ಇನ್ಫಾರ್ಮೆಷನ್ ಸ್ಟೇಟ್ಮೆಂಟ್ ಮೂಲಕ ಪಡೆಯಬಹುದು.
ಇದನ್ನು ಓದಿ:UPI ವಂಚನೆ ಬಗ್ಗೆ ಇರಲಿ ಎಚ್ಚರ! ಪಿನ್ ಸೆಟ್ ಮಾಡುವುದಕ್ಕೆ ಅಸಡ್ಡೆ ಬೇಡ
ತೆರಿಗೆ ಪಾವತಿ ವಿವರ:ತೆರಿಗೆದಾರರು ಪಾವತಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಇದರಲ್ಲಿ ಪಡೆಯಬಹುದು. ವೇತನದ ಮೂಲಕ ನೀವು ಆದಾಯ ಪಡೆಯುತ್ತಿದ್ದರೆ, ಅದು ಟಿಡಿಎಸ್ಗೆ ಒಳಗಾಗುತ್ತಿದ್ದರೆ ನೀವು ಎಐಎಸ್ ವರದಿಯಲ್ಲಿ ನೋಡಬಹುದು. ಬ್ಯಾಂಕ್ನ ಉಳಿತಾಯ ಖಾತೆ, ನಿಶ್ಚಿತ ಠೇವಣಿ ಸೇರಿದಂತೆ ಇನ್ನಿತರ ಖಾತೆ ಉಳಿತಾಯದ ಬಡ್ಡಿಯನ್ನು ಈ ಮೂಲಕ ತಿಳಿಯಬಹುದು. ಒಂದು ವೇಳೆ ಷೇರಿನಲ್ಲಿ ಹೂಡಿಕೆ ಮಾಡಿದ್ದರೆ, ಹೂಡಿದ ಕಂಪನಿಗಳ ಮಾಹಿತಿಗಳನ್ನು ಇದು ತೋರಿಸುತ್ತದೆ.