ಹೈದರಾಬಾದ್: ಎಟಿಎಂಗಳಲ್ಲಿ ಹಣ ಬರುವುದುನ್ನು ಎಲ್ಲರಿಗೂ ತಿಳಿದಿರುವ ವಿಷಯ. ಇನ್ನು ನೀರು ಬರುವ ವ್ಯವಸ್ಥೆ ಹೊಂದಿರುವ ಎಟಿಎಂ ಬಗ್ಗೆ ಕೂಡ ಕೇಳಿರುತ್ತೇವೆ. ಆದರೆ, ಇದೀಗ ಎಟಿಎಂನಲ್ಲಿ ಬಂಗಾರ ಕೂಡ ಬರುತ್ತಿದ್ದು, ಈ ಸಂಗತಿ ಜನರ ಅಚ್ಚರಿಗೆ ಕಾರಣವಾಗಿದೆ. ವಿದೇಶಗಳಲ್ಲಿ ಇದ್ದ ಇಂತಹ ಬಂಗಾರದ ಎಟಿಎಂ ಸೇವೆ ಇದೀಗ ಹೈದರಾಬಾದ್ನಲ್ಲೂ ಆರಂಭವಾಗಿದೆ. ತೆಲುಗು ಯುವಕನೊಬ್ಬ ಇಂತಹ ಸಾಫ್ಟ್ವೇರ್ ಅಭಿವೃದ್ಧಿಪಡಿಸಿ, ಮಷಿನ್ ತಯಾರಿಸಿದ್ದಾರೆ. 'ಓಪನ್ ಕ್ಯೂಬ್' ಸಂಸ್ಥಾಪಕರಾದ ಪಿ ವಿನೋದ್ ಇದರ ನಿರ್ಮಾತೃ.
ಆಂಧ್ರಪ್ರದೇಶದ ಅಂಕಲ್ಪಲ್ಲಿ ವಿನೋದ್ ಹುಟ್ಟೂರು. ಇವರ ತಂದೆ ಬೆಂಗಳೂರಿನಲ್ಲಿ ಕೆಲಕಾಲ ಉದ್ಯಮ ನಿರ್ವಹಿಸಿದ್ದರು. ಈ ಹಿನ್ನೆಲೆ ವಿನೋದ್ ತಮ್ಮ ಬೇಸಿಗೆ ರಜೆ ಸಮಯದಲ್ಲಿ ಕೆಲವು ವೆಬ್ ಡೆವಲ್ಮೆಂಟ್ ಕೋರ್ಸ್ಗಳಿಗೆ ಸೇರಿದ್ದರು. 10ನೇ ತರಗತಿ ಆಗುತ್ತಿದ್ದಂತೆ ಇದರಲ್ಲಿ ಮಾಸ್ಟರ್ ಆದರು. ಆಗಿನಿಂದ ತಮ್ಮ ಪಾಕೆಟ್ ಮನಿ ಸಂಪಾದನೆಗೆ ವೆಬ್ಸೈಟ್ ಡಿಸೈನ್ ಮಾಡಲು ಆರಂಭಿಸಿ, ಬಳಿಕ ಅದನ್ನೇ ವೃತ್ತಿಯಾಗಿ ತೆಗೆದುಕೊಂಡರು. ಇಂಜಿನಿಯರಿಂಗ್ಗೆ ಬಂದ ಮೇಲೆ ಗೆಳೆಯರಿಗೆ ಈ ಸಂಬಂಧ ಸಲಹೆಯನ್ನು ನೀಡುತ್ತಿದ್ದರು.
ಅಲ್ಲದೇ, ಪ್ರಾಜೆಕ್ಟ್ ಗಳ ಜೊತೆಗೆ ಶಿಕ್ಷಕರಿಗೆ ಶೈಕ್ಷಣಿಕ ಪ್ರಾಜೆಕ್ಟ್ ಹೇಳಿಕೊಡುವ ಮಟ್ಟಕ್ಕೆ ಬೆಳೆದರು. ಎಂಬಿಎ ಮುಗಿಸಿದ ನಂತರ ಟೆಲಿಕಾಂ ಕಂಪನಿ ಸೇರಿದರು. ಬಳಿಕ ವಿಶಾಖಪಟ್ಟಣದ ಜೀವ ವಿಮಾ ಕಂಪನಿಯಲ್ಲಿ ಮೂರೂವರೆ ವರ್ಷ ಕೆಲಸ ನಿರ್ವಹಿಸಿ ಮಾರ್ಕೆಟಿಂಗ್ ಮತ್ತು ಸೇಲ್ಸ್ ಕೌಶಲಗಳನ್ನು ಅನುಭವ ಪಡೆದರು.
ಹಲವು ಆ್ಯಪ್ ಅಭಿವೃದ್ಧಿ: 2017ರಲ್ಲಿ ಹೈದರಾಬಾದ್ಗೆ ಬಂದ ವಿನೋದ್ ಕೆಲಸ ಮಾಡುತ್ತಿದ್ದಂತೆ, ಹೊಸ ಅವಿಷ್ಕಾರ ನಡೆಸುವ ಮೂಲಕ ಎಲ್ಲರ ಗಮನಸೆಳೆದರು. ಕಿವುಡರಿಗೆ ಸುಲಭವಾಗಿ ಮಾಹಿತಿ ತಲುಪಿಸುವ ಸಾಧನವನ್ನು ಮೊದಲ ಬಾರಿಗೆ ಡಿಸೈನ್ ಮಾಡಿ ಪೆಟೆಂಟ್ ಅನ್ನು ಪಡೆದರು. ಏಳು ವರ್ಷದ ಹಿಂದೆ 'ಓಪನ್ ಕ್ಯೂಬ್' ಎಂಬ ಕಂಪನಿಯನ್ನು ತೆರೆದರು. ಹೊಸ ಕಂಪನಿಯಲ್ಲಿ ಆರಂಭದಲ್ಲಿ ಪ್ರಾಜೆಕ್ಟ್ ಪಡೆಯಲು ಅನೇಕ ಸವಾಲುಗಳನ್ನು ಎದುರಿಸಿದರು.
ಆದಾಗ್ಯೂ, ಮೊದಲ ಅವಿಷ್ಕಾರಕ್ಕಿಂತ ವಿಭಿನ್ನವಾದ 'ಎನ್ಎಚ್7' ಎಂಬ ಅಪ್ಲಿಕೇಷನ್ ಅಭಿವೃದ್ದಿ ಪಡಿಸಿದರು. ಇದು ಫೇಸ್ಬುಕ್, ಟ್ವಿಟರ್ ಮತ್ತು ಟೆಲಿಗ್ರಾಂ ರೀತಿಯಲ್ಲೇ ಸಾಮಾಜಿಕ ಮಾಧ್ಯಮದ ಆ್ಯಪ್ ಆಗಿತ್ತು. ಸುಲಭ ಬಳಕೆ ಮತ್ತು ಉತ್ತಮ ವೈಶಿಷ್ಟ್ಯದಿಂದ ಮೊದಲ ಎರಡು ತಿಂಗಳಲ್ಲೇ 18 ಲಕ್ಷ ಜನ ಇದರ ಬಳಕೆಮಾಡಲು ಆರಂಭಿಸಿದರು. ಈ ಸಂಬಂಧ ಕಠಿಣ ಕಾರ್ಯ ನಿರ್ವಹಿಸಿದ ವಿನೋದ್ 2 ಕೋಟಿಯನ್ನು ಸಂಪಾದಿಸಿದರು. ಈ ಆ್ಯಪ್ನ ಯಶಸ್ಸಿನಿಂದ ಸಿಂಗಪೂರ್ನಲ್ಲಿ ಕಚೇರಿಯನ್ನು ತೆರೆದರು.