ಕರ್ನಾಟಕ

karnataka

ETV Bharat / business

ಪಿಜಿ, ಪೇಯಿಂಗ್​ ಹಾಸ್ಟೆಲ್​ಗಳಿಗೆ ಶೇಕಡ 12 ರಷ್ಟು ಜಿಎಸ್​ಟಿ: ಕರ್ನಾಟಕ ಎಎಆರ್​ ಸ್ಪಷ್ಟನೆ - ಜಿಎಸ್‌ಟಿ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್

ಹಾಸ್ಟೆಲ್ ವಾಸ್ತವ್ಯಕ್ಕೆ ಪಾವತಿಸುವ ಬಾಡಿಗೆ ಮತ್ತು ಪಿಜಿಗಳಿಗೆ ಪಾವತಿಸುವ ಹಣಕ್ಕೆ ಶೇ 12ರಷ್ಟು ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ಸ್ಪಷ್ಟಪಡಿಸಿದೆ. ಇದರಿಂದ ಪೇಯಿಂಗ್​ ಹಾಸ್ಟೆಲ್‌ನಲ್ಲಿರುವವರಿಗೆ ಹೊರೆಯಾಗಲಿದೆ.

hostel accommodation to attract 12 pc gst  PG accommodation to attract 12pc tax  Karnataka AAR  Authority for Advance Rulings  ಪೇಯಿಂಗ್​ ಹಾಸ್ಟೆಲ್​ಗಳಿಗೆ ಶೇಕಡ 12 ರಷ್ಟು ಜಿಎಸ್​ಟಿ  ಕರ್ನಾಟಕ ಎಎಆರ್​ ಸ್ಪಷ್ಟನೆ  ಹಾಸ್ಟೆಲ್ ವಾಸ್ತವ್ಯಕ್ಕೆ ಪಾವತಿಸುವ ಬಾಡಿಗೆ  ಪಿಜಿಗಳಿಗೆ ಪಾವತಿಸುವ ಹಣಕ್ಕೆ ಶೇ 12ರಷ್ಟು ಜಿಎಸ್‌ಟಿ  ಪೇಯಿಂಗ್​ ಹಾಸ್ಟೆಲ್‌ಗಳಲ್ಲಿ ಉಳಿಯುವ ವಿದ್ಯಾರ್ಥಿಗಳಿಗೆ  ಉದ್ಯೋಗಿಗಳಿಗೆ ಹಾಸ್ಟೆಲ್ ಸೌಕರ್ಯಗಳು ಹೊರೆ  ಜಿಎಸ್‌ಟಿ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್  ಪೀಠಗಳು ಎರಡು ಪ್ರತ್ಯೇಕ ಪ್ರಕರಣ
ಪಿಜಿ, ಪೇಯಿಂಗ್​ ಹಾಸ್ಟೆಲ್​ಗಳಿಗೆ ಶೇಕಡ 12 ರಷ್ಟು ಜಿಎಸ್​ಟಿ: ಕರ್ನಾಟಕ ಎಎಆರ್​ ಸ್ಪಷ್ಟನೆ

By

Published : Jul 29, 2023, 10:57 PM IST

ನವದೆಹಲಿ: ಪೇಯಿಂಗ್​ ಹಾಸ್ಟೆಲ್‌ಗಳಲ್ಲಿ ಉಳಿಯುವ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಹಾಸ್ಟೆಲ್ ಸೌಕರ್ಯಗಳು ಹೊರೆಯಾಗಬಹುದು. ಇದರ ಹಿನ್ನೆಲೆ ಜಿಎಸ್‌ಟಿ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ (ಎಎಆರ್) ಪೀಠಗಳು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಾಸ್ಟೆಲ್ ಶುಲ್ಕಕ್ಕೆ ಶೇ 12ರಷ್ಟು ಜಿಎಸ್‌ಟಿ ಅನ್ವಯವಾಗುವಂತೆ ತೀರ್ಪು ನೀಡಿವೆ. ಬೆಂಗಳೂರು ಮತ್ತು ಲಖನೌ ಪೀಠಗಳು ಇತ್ತೀಚೆಗೆ ಹಾಸ್ಟೆಲ್‌ಗಳು ಮತ್ತು ವಸತಿ ನಿಲಯಗಳು ವಸತಿ ಗೃಹಗಳ ಅಡಿಯಲ್ಲಿ ಬರುವುದಿಲ್ಲ. ಆದ್ದರಿಂದ ಜಿಎಸ್‌ಟಿಯಿಂದ ಯಾವುದೇ ವಿನಾಯಿತಿ ಇಲ್ಲ ಎಂದು ತೀರ್ಪು ನೀಡಿವೆ.

ಬೆಂಗಳೂರಿನ ಶ್ರೀಸಾಯಿ ಲಕ್ಸುರೀಸ್ ಸ್ಟೇ ಎಲ್‌ಎಲ್‌ಪಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರು​ ಪೀಠ ಈ ತೀರ್ಪು ನೀಡಿದೆ. ಹಾಸ್ಟೆಲ್‌ಗಳು ವಸತಿ ಗೃಹಗಳಲ್ಲ, ಅವುಗಳಿಗೂ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ದಿನಕ್ಕೆ ರೂ.1000ಕ್ಕಿಂತ ಕಡಿಮೆ ಇದ್ದರೆ ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ಕ್ಯಾಂಪ್‌ಸೈಟ್‌ಗಳಲ್ಲಿನ ವಸತಿಗಳನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಅದು ನೆನಪಿಸಿತು. ಇದು ಜುಲೈ 17, 2022 ರಿಂದ ಜಾರಿಗೆ ಬಂದಿದೆ. ಇದು ಪಿಜಿ/ಹಾಸ್ಟೆಲ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇಲ್ಲಿ ವಸತಿ ಗೃಹವನ್ನು ವಾಸಕ್ಕೆ ಬದಲಾಗಿ ಬಾಡಿಗೆಗೆ ಬಳಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಅರ್ಜಿದಾರರ (ಶ್ರೀಸಾಯಿ ಹಾಸ್ಟೆಲ್) ಸೇವೆಗಳು ಜಿಎಸ್‌ಟಿ ವಿಧಿಸಬಹುದಾದ ಕಾರಣ, ಭೂ ಮಾಲೀಕರಿಗೆ ಪಾವತಿಸುವ ಬಾಡಿಗೆಗೆ ರಿವರ್ಸ್ ಜಿಎಸ್‌ಟಿ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಹಾಗಾಗಿ ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಒಬ್ಬರ ಸ್ವಂತ ನಿವಾಸದಲ್ಲಿ ಹಾಸ್ಟೆಲ್/ಪಿಜಿ ಸೌಲಭ್ಯಗಳನ್ನು ಒದಗಿಸಿದರೆ, ಅವುಗಳನ್ನು ಅತಿಥಿ ಗೃಹಗಳು ಮತ್ತು ವಸತಿ ಸೇವೆಗಳೆಂದು ಪರಿಗಣಿಸಲಾಗುತ್ತದೆ ಎಂದು ಪೀಠ ಹೇಳಿದೆ.

ನೋಯ್ಡಾ ಮೂಲದ ವಿಎಸ್ ಇನ್ಸ್ಟಿಟ್ಯೂಟ್ ಮತ್ತು ಹಾಸ್ಟೆಲ್ ಪ್ರೈವೇಟ್ ಲಿಮಿಟೆಡ್ ಪ್ರಕರಣದಲ್ಲಿ ಎಎಆರ್ ಲಖನೌ ಪೀಠವು ಇದೇ ರೀತಿಯ ತೀರ್ಪು ನೀಡಿದೆ. ಹಾಸ್ಟೆಲ್ ವಾಸ್ತವ್ಯಕ್ಕೆ ದಿನಕ್ಕೆ 1000 ರೂ.ಗಿಂತ ಕಡಿಮೆ ಇದ್ದರೂ ಜಿಎಸ್‌ಟಿ ಅನ್ವಯವಾಗುತ್ತದೆ. ಎಎಂಆರ್​ಜಿ ಮತ್ತು ಅಸೋಸಿಯೇಟ್ಸ್​ನ ಹಿರಿಯ ಪಾಲುದಾರ ರಜತ್ ಮೋಹನ್ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಾಗಿ ವಾಸಿಸುವ ಹಾಸ್ಟೆಲ್ ಮತ್ತು ವಸತಿ ನಿಲಯಗಳಿಗೆ ಶೇ.12ರಷ್ಟು ಜಿಎಸ್​ಟಿ ವಿಧಿಸಿರುವುದರಿಂದ ಆಯಾ ಕುಟುಂಬಗಳ ಮೇಲೆ ಅಪಾರ ಹೊರೆ ಬೀಳಲಿದೆ. ಜಿಎಸ್‌ಟಿ ಕೌನ್ಸಿಲ್‌ಗೆ ಈ ಕುರಿತು ನೀತಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದರು. ಎಎಆರ್ ಪೀಠಗಳು ನೀಡುವ ತೀರ್ಪುಗಳನ್ನು ಬೇರೆ ರಾಜ್ಯಗಳು ಜಾರಿಗೆ ತಂದರೆ ಹಾಸ್ಟೆಲ್ ಸೌಕರ್ಯಗಳು ಹೊರೆಯಾಗಲಿವೆ ಎಂಬುದು ತಜ್ಞರ ಅಭಿಪ್ರಾಯ.

ಓದಿ:ಜಿಎಸ್​ಟಿ ಸಂಗ್ರಹ ಶೇ 12ರಷ್ಟು ಹೆಚ್ಚಳ; ಏರುಗತಿಯಲ್ಲಿ ಭಾರತದ ಆರ್ಥಿಕತೆ

ABOUT THE AUTHOR

...view details