ವಾಷಿಂಗ್ಟನ್:60ಕ್ಕೂ ಹೆಚ್ಚು ದಿನ ಕಳೆದರೂ ರಷ್ಯಾ - ಉಕ್ರೇನ್ ಸಮರ ಮುಂದುವರಿದಿದೆ. ಸದ್ಯಕ್ಕೆ ಇದು ಮುಕ್ತಾಯವಾಗುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ತೈಲ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಭಾರತದಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಾಗತೊಡಗುತ್ತಿದೆ. ಹೀಗಾಗಿ ಹಣದುಬ್ಬರ ನಿಯಂತ್ರಣಕ್ಕೆ ಕಡಿವಾಣ ಹಾಕುವ ಅಗತ್ಯ ಹೆಚ್ಚಾಗಿದೆ.
ಉಕ್ರೇನ್ ಯುದ್ಧದ ಕಾರಣದಿಂದಾಗಿ ತೈಲ ಬೆಲೆಗಳ ಏರಿಕೆಯಾಗ್ತಿದ್ದು, ಭಾರತದಲ್ಲಿ ಹಣದುಬ್ಬರ ಹೆಚ್ಚಳವಾಗಿದೆ. ಇದರಿಂದಾಗಿ ಹಣಕಾಸು ಯೋಜನೆ ಬಿಗಿಗೊಳಿಸುವಿಕೆ ಮತ್ತು ಬೆಳವಣಿಗೆ ಸಾಮರ್ಥ್ಯ ಸುಧಾರಿಸುವುದಕ್ಕೆ ರಚನಾತ್ಮಕ ದೌರ್ಬಲ್ಯಗಳನ್ನು ಪರಿಹರಿಸುವ ಕ್ರಮಗಳ ಅಗತ್ಯವಿದೆ ಎಂದು ಹಿರಿಯ ಐಎಂಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಂದಾಜಿನ ಪ್ರಕಾರ, ದೇಶದ ಆರ್ಥಿಕತೆಯು 2022-23ರಲ್ಲಿ ಶೇ.8.2ರಷ್ಟು ಗುರುತಿಸಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 0.8 ರಷ್ಟು ಕಡಿತಗೊಂಡಿದೆ. ಕಳೆದ ವರ್ಷ ಭಾರತ ಶೇ.9ರಷ್ಟು ಆರ್ಥಿಕತೆಯಲ್ಲಿ ಏರಿಕೆ ದಾಖಲಿಸಿತ್ತು ಎಂದು ಐಎಂಎಫ್ನ ಏಷ್ಯಾ ಮತ್ತು ಪೆಸಿಫಿಕ್ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕ ಅನ್ನೆ-ಮೇರಿ ಗುಲ್ಡೆ-ವುಲ್ಫ್ ಹೇಳಿದ್ದಾರೆ.