ಕರ್ನಾಟಕ

karnataka

ETV Bharat / business

ಹೂಡಿಕೆದಾರರ ಆರ್ಕಷಿಸುತ್ತಿರುವ ಅಧಿಕ ಬಡ್ಡಿ ದರದ ಎಫ್​ಡಿಗಳು: ಈ ಬಗ್ಗೆ ತಜ್ಞರು ಏನಂತಾರೆ? - ಅಲ್ಪಾವಧಿಯ ಎಫ್​ಡಿಗಳು ಸುರಕ್ಷಿತ

ಸಾಂಪ್ರದಾಯಿಕ ಹೂಡಿಕೆದಾರರಲ್ಲಿ ಎಫ್​ಡಿ ಮೇಲಿನ ನಂಬಿಕೆ ಮರಳುತ್ತಿದೆ. ಈ ಬದಲಾವಣೆಯಿಂದ ಅನೇಕ ಠೇವಣಿದಾರು ಕಡಿಮೆ ಬಡ್ಡಿದರದ ಎಫ್​ಡಿಯಿಂದ ತಮ್ಮ ಹಣ ಪಡೆದು ಹೆಚ್ಚಿನ ಬಡ್ಡಿದರ ನೀಡುವ ಕಡೆ ಹೂಡಿಕೆ ಮಾಡುತ್ತಿದ್ದಾರೆ.

ಹೂಡಿಕೆದಾರರ ಆರ್ಕಷಿಸುತ್ತಿರುವ ಅಧಿಕ ಬಡ್ಡಿ ದರದ ಎಫ್​ಡಿಗಳು; ಮಾರುಕಟ್ಟೆ ತಜ್ಞರು ಏನಂತಾರೆ?
high-interest-rate-fd-attracting-investors

By

Published : Nov 17, 2022, 3:49 PM IST

ಹೈದರಾಬಾದ್​: ಕಳೆದ ಎರಡು ವರ್ಷಗಳ ಹಿಂದೆ ಠೇವಣಿ ಸ್ಥಿರ ಠೇವಣಿ (ಎಫ್​ಡಿ) ಹೂಡಿಕೆ ಬಗ್ಗೆ ಹೂಡಿಕೆದಾರರು ನಿರಾಸಕ್ತಿ ತೋರಿದ್ದರು. ಕಾರಣವೇನಂದರೆ, ಕಡಿಮೆ ಬಡ್ಡಿದರ. ಆದರೆ, ಇದೀಗ ಈ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ಹೆಚ್ಚಿಸಲಾಗಿದೆ. ಅನೇಕ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್​ಗಳು ಬಡ್ಡಿದರವನ್ನು ಹೆಚ್ಚಿಸಿ ಠೇವಣಿದಾರರನ್ನು ಆಕರ್ಷಿಸಲು ಮುಂದಾಗಿವೆ.

ಸಾಂಪ್ರದಾಯಿಕ ಹೂಡಿಕೆದಾರರಲ್ಲಿ ಎಫ್​ಡಿ ಮೇಲಿನ ನಂಬಿಕೆ ಮರಳುತ್ತಿದೆ. ಈ ಬದಲಾವಣೆಯಿಂದ ಅನೇಕ ಠೇವಣಿದಾರು ಕಡಿಮೆ ಬಡ್ಡಿದರದ ಎಫ್​ಡಿಯಿಂದ ತಮ್ಮ ಹಣ ಪಡೆದು ಹೆಚ್ಚಿನ ಬಡ್ಡಿದರ ನೀಡುವ ಕಡೆ ಹೂಡಿಕೆ ಮಾಡುತ್ತಿದ್ದಾರೆ. ಈ ರೀತಿ ಬದಲಾವಣೆ ಮಾಡುವುದು ಎಷ್ಟರ ಮಟ್ಟಿಗಿನ ಲಾಭಾದಾಯಕವಾಗಿರಲಿದೆ ಎಂಬುದನ್ನು ಗಮನಿಸುವುದು ಅವಶ್ಯಕವಾಗಿದೆ.

ಬಡ್ಡಿದರ ಹೆಚ್ಚಿಸುತ್ತಿರುವ ಸಮಯದಲ್ಲಿ ಸಾಂಪ್ರದಾಯಿಕ ಠೇವಣಿದಾರರು ಹೂಡಿಕೆಯಲ್ಲಿ ತಜ್ಞರ ಸಲಹೆಯಂತೆ ಎಚ್ಚರಿಕೆ ವಹಿಸಬೇಕು. ನಮಗೆ ಲಭ್ಯವಿರುವ ಹಣದಲ್ಲಿ ಒಂದು ಎಫ್​ಡಿ ಖಾತೆ ತೆರೆಯುವ ಬದಲು ಆ ಹಣವನ್ನು ಸಣ್ಣದಾಗಿ ವಿಂಗಡಿಸಿ ವಿವಿಧ ರೀತಿಯ ಠೇವಣಿ ಮಾಡಬಹುದು. ಕನಿಷ್ಠ ಪಕ್ಷ ಮೂರು ವಿಭಿನ್ನ ಬಗೆಯ ಎಫ್​ಡಿಗಳನ್ನು ತೆಗೆಯಬೇಕು. ಅದರಲ್ಲಿ ಒಂದು ಆರು ತಿಂಗಳಿಗೆ, ಮತ್ತೊಂದು ವರ್ಷಕ್ಕೆ ಹಾಗೂ ಕಡೆಯದಾಗಿ 18 ರಿಂದ 24 ತಿಂಗಳ ಅವಧಿಯದ್ದು.

ಪುನರ್​ ಸ್ಥಾಪಿಲು ಅಲ್ಪಾವಧಿ ಎಫ್​​ಡಿಗಳು ಬೆಸ್ಟ್​:ಅಲ್ಪಾವಧಿಯ ಎಫ್​ಡಿಗಳು ಸುರಕ್ಷಿತ ಮತ್ತು ಪುನರ್ ​ಸ್ಥಾಪಿಸಬಹುದಾಗಿದೆ. ಒಮ್ಮೆ ಈ ಬಡ್ಡಿ ದರ ಹೆಚ್ಚಾದಲ್ಲಿ, ಇದನ್ನು ಹಿಂಪಡೆದು ಅಧಿಕ ಬಡ್ಡಿದರಕ್ಕೆ ಠೇವಣಿ ಹೂಡಬಹುದು. ಜಾಗತಿಕ ಹಣದುಬ್ಬರ ಏರಿಕೆಯಾಗುವುದುನ್ನು ಗಮನಿಸಿದಾಗ, ಈ ಬಡ್ಡಿದರ ಇನ್ನು ಕೆಲ ಸಮಯಗಳ ಕಾಲ ಹೆಚ್ಚಿರಲಿದೆ. ಈ ಸ್ಥಿತಿ ಎಲ್ಲಿಯವರಿಗೆ ಮುಂದುವರೆಯಲಿದೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಈ ಹಿನ್ನೆಲೆಯಲ್ಲಿ ಇದಕ್ಕೆ ಅಲ್ಪಾವಧಿಯ ಎಫ್​ಡಿ ಹೂಡಿಕೆ ಮಾಡುವುದು ಅತ್ಯುತ್ತಮ.

ಹೆಚ್ಚಿನ ಬಡ್ಡಿದರ ಹಿನ್ನೆಲೆ ಈಗಾಗಲೇ ಅನೇಕ ಹೂಡಿಕೆದಾರರು ತಮ್ಮ ಪ್ರಚಲಿತ ಎಫ್​ಡಿ ಖಾತೆ ಮುಚ್ಚಲು ಮುಂದಾಗುತ್ತಿದ್ದಾರೆ. ಇದರಿಂದ ಅವರು ಹೆಚ್ಚಿನ ಆದಾಯ ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ, ಈ ರೀತಿಯ ಬದಲಾವಣೆ ಮಾಡುವ ಮುನ್ನ ಅನೇಕ ವಿಷಯಗಳ ಪರಿಗಣನೆಗೆ ತೆಗೆದುಕೊಳ್ಳುವುದು ಅವಶ್ಯ. ಅವಧಿ ಪೂರ್ವಕವಾಗಿ ಎಫ್​ಡಿ ಖಾತೆ ಮುಚ್ಚಿದರೆ ಅದು ದಂಡ ಅಥವಾ ಆದಾಯ ತೆರಿಗೆಗೆ ಗುರಿಯಾಗುತ್ತದಾ ಎಂಬುದನ್ನು ಪರಿಶೀಲಿಸಬೇಕು. ಮೆಚ್ಯೂರಿಟಿಗಿಂತ ಮೊದಲೇ ಈ ಎಫ್​ಡಿಯನ್ನು ವಿತ್​ಡ್ರಾ ಮಾಡಿದಲ್ಲಿ ಬಡ್ಡಿದರ ಕಡಿತಗೊಳ್ಳುವ ಸಾಧ್ಯತೆ ಇದೆ.

ಇದಕ್ಕಿಂತ ಹೆಚ್ಚಿನದಾಗಿ, ಅವಧಿ ಪೂರ್ವದಲ್ಲಿ ಎಫ್​ಡಿ ತೆಗೆದಲ್ಲಿ ಅದಕ್ಕೆ ಬ್ಯಾಂಕ್​ಗಳು ಬಡ್ಡಿದರದ ಮೇಲೆ ಟಿಡಿಎಸ್​ ವಿಧಿಸಬಹುದು. ಕೆಲ ಬ್ಯಾಂಕ್​ಗಳು ಇದಕ್ಕೆ ದಂಡ ವಿಧಿಸಬಹುದು. ದಂಡ ಮತ್ತು ತೆರಿಗೆ ಕಡಿತದ ಮೊತ್ತ ಹೆಚ್ಚಿದ್ದಾಗ ಅದನ್ನು ಹೊರ ತೆಗೆಯುವುದಲ್ಲಿ ಯಾವುದೇ ಲಾಭ ಇಲ್ಲ. ಹಳೆಯ ಮತ್ತು ಹೊಸ ಬಡ್ಡಿದರದ ನಡುವಿನ ವ್ಯತ್ಯಾಸವನ್ನು ಪರಿಗಣಿಸಬೇಕು ಹೆಚ್ಚಿನ ಬಡ್ಡಿ ಠೇವಣಿಗಳಿಗೆ ಬದಲಾಯಿಸುವ ಮೊದಲು ಲಾಭ ಮತ್ತು ನಷ್ಟದ ಅಂದಾಜನ್ನು ಹೊಂದಿರಬೇಕಾಗಿರುವುದು ಅವಶ್ಯ.

ಇದನ್ನೂ ಓದಿ: ಅಮೆಜಾನ್​ನಲ್ಲಿ ಉದ್ಯೋಗ ಕಡಿತದ ಪರ್ವ ಆರಂಭ: ಸಾಫ್ಟವೇರ್​ ಎಂಜಿನಿಯರ್​ಗಳಿಗೆ ಗೇಟ್​ಪಾಸ್

ABOUT THE AUTHOR

...view details