ಹೈದರಾಬಾದ್: ನೀವು ಅನಿರೀಕ್ಷಿತವಾಗಿ ಆಸ್ಪತ್ರೆಗೆ ದಾಖಲಾದಾಗ ಆರೋಗ್ಯ ವಿಮೆಯು ಆರ್ಥಿಕ ಹೊರೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಆದರೆ ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಎಷ್ಟು ಮೊತ್ತ ಪಾವತಿಸಬೇಕು ಎಂಬುದನ್ನು ಪರಿಶೀಲಿಸದೇ ನಾವು ವರ್ಷಗಟ್ಟಲೆ ಒಟ್ಟಿಗೆ ಪ್ರೀಮಿಯಂ ಪಾವತಿಸುತ್ತಿರುತ್ತೇವೆ. ಹೀಗಾಗಿ ನಮ್ಮ ವಿಮಾ ಪಾಲಿಸಿಯಲ್ಲಿ ಆಗಾಗ ಮಾರ್ಪಾಡು ಮಾಡುವುದು ಮತ್ತು ಹೊಸ ಸೇರ್ಪಡೆಗಳನ್ನು ಮಾಡುವುದು ಕಡ್ಡಾಯವಾಗಿರುತ್ತವೆ.
ವಿಮಾ ಪಾಲಿಸಿ ಎಂದರೆ ಇದೊಂದು ಸುರಕ್ಷತಾ ಕವಚವಿದ್ದಂತೆ. ಆದರೆ, ವಿಮಾ ಪಾಲಿಸಿಯ ಅವಶ್ಯಕತೆ ತಮಗೇನಿದೆ ಮತ್ತು ತಾವು ಕಟ್ಟುತ್ತಿರುವ ಪ್ರೀಮಿಯಂ ವ್ಯರ್ಥವಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಭವಿಷ್ಯದಲ್ಲಿ ನಮಗೆ ಏನು ಕಾದಿದೆ ಎಂಬುದು ಯಾರಿಗೂ ತಿಳಿದಿಲ್ಲ. ದುರದೃಷ್ಟವಶಾತ್, ನಾವು ಕ್ಲೇಮ್ ಮಾಡಬೇಕಾದಾಗ, ಎರಡು ಅಥವಾ ಮೂರು ವರ್ಷಗಳ ನಂತರ ಪಾಲಿಸಿಯು ನಮಗೆ ಸಂಪೂರ್ಣ ವಿಮೆಯನ್ನು ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಪರಿಶೀಲಿಸಬೇಕಾಗುತ್ತದೆ.
ಒಂದು ಕಾಲದಲ್ಲಿ ನಾಲ್ವರ ಕುಟುಂಬಕ್ಕೆ 3 ಲಕ್ಷ ರೂಪಾಯಿ ಪಾಲಿಸಿ ಸಾಕಾಗುತ್ತಿತ್ತು. ಈಗ, ಕನಿಷ್ಠ 10 ಲಕ್ಷ ರೂ. ಗಳಿಗಿಂತ ಕಡಿಮೆ ಇದ್ದರೆ ಅದು ಯಾವುದಕ್ಕೂ ಸಾಕಾಗದು ಎನ್ನುತ್ತಾರೆ ತಜ್ಞರು. ಹಾಗಾದರೆ ಸೂಕ್ತ ವಿಮಾ ಮೊತ್ತವನ್ನು ನಿರ್ಧರಿಸುವುದು ಹೇಗೆಂದು ತಿಳಿಯೋಣ ಬನ್ನಿ.
ಪರ್ಸನಲ್ ಪಾಲಿಸಿ ಫ್ಲೋಟರ್ ಪಾಲಿಸಿ:ಒಂದೊಮ್ಮೆ ಕುಟುಂಬ ಬೆಳೆದರೆ.. ಒಬ್ಬ ವ್ಯಕ್ತಿಗೆ ಕನಿಷ್ಠ 5 ಲಕ್ಷ ಪಾಲಿಸಿ ಸಾಕು ಎಂದುಕೊಳ್ಳೋಣ. ಆದರೆ, ಸಂಗಾತಿ ಬಂದರೆ ಮಕ್ಕಳು ಬೆಳೆದು ಸಂಸಾರ ಬೆಳೆಯುತ್ತದೆ... ಆಗ ಪರ್ಸನಲ್ ಪಾಲಿಸಿ ಫ್ಲೋಟರ್ ಪಾಲಿಸಿ ಆಗಬೇಕಾಗುತ್ತದೆ. ಕುಟುಂಬದಲ್ಲಿ ಹೊಸ ಸದಸ್ಯರು ಬಂದಾಗ, ವಿಮಾ ಮೊತ್ತವನ್ನು ಹೆಚ್ಚಿಸಬೇಕು.
ಮಗುವಿನ ಜನನದ ತೊಂಬತ್ತು ದಿನಗಳ ನಂತರ, ಆರೋಗ್ಯ ವಿಮಾ ಪಾಲಿಸಿಯಲ್ಲಿ ಸೇರಿಸಲು ಒಂದು ಆಯ್ಕೆ ಇದೆ. ಜನನದ ನಂತರ ತಕ್ಷಣವೇ ಒದಗಿಸಲಾದ ರಕ್ಷಣೆಗಳಿವೆ. ಪಾಲಿಸಿಯಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಲು ನಿಮ್ಮ ವಿಮಾ ಕಂಪನಿಯು ಅನುಸರಿಸುವ ನಿಯಮಗಳನ್ನು ತಿಳಿದುಕೊಳ್ಳಿ. ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯಿರಿ. ಹೊಸ ಸದಸ್ಯರು ಸೇರಿದಾಗ ವಿಮಾ ಮೊತ್ತ ಹೆಚ್ಚಾಗುತ್ತದೆ ಮತ್ತು ಅದೇ ಸಮಯಕ್ಕೆ ಪ್ರೀಮಿಯಂ ಹೆಚ್ಚಾಗುವುದು ಸಹಜ. ಇದಕ್ಕಾಗಿ ಸಿದ್ಧರಾಗಿರಿ.
ನಾಲ್ಕು ಜನರ ಕುಟುಂಬಕ್ಕೆ ಕನಿಷ್ಠ 10 ಲಕ್ಷ ರೂ ಪಾಲಿಸಿ:ಐದು ವರ್ಷಗಳ ಹಿಂದೆ 3 ಲಕ್ಷ ರೂಪಾಯಿ ಪಾಲಿಸಿ ಸಾಕಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿಲ್ಲದಾಗ ಮತ್ತು ಆಸ್ಪತ್ರೆಗೆ ಸೇರುವ ಅಗತ್ಯ ಇಲ್ಲದಿರುವಾಗ ಅಷ್ಟೊಂದು ಖರ್ಚು ಬರುವುದಿಲ್ಲ. ಆದರೆ ಈಗಿನ ಕಾಲದಲ್ಲಿ ಆಸ್ಪತ್ರೆಗೆ ಹೋದರೆ ಎಷ್ಟು ಖರ್ಚಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವೈದ್ಯಕೀಯ ಹಣದುಬ್ಬರವು ಪ್ರತಿಬಾರಿಯೂ ದುಪಟ್ಟಿನಂತೆ ಹೆಚ್ಚುತ್ತಿದೆ.