ಬೆಂಗಳೂರು:ಕಳೆದೆರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಇಂದು ವೈದ್ಯಕೀಯ ವೆಚ್ಚಗಳು ಹೆಚ್ಚಾಗಿವೆ. ಸಣ್ಣ ಪುಟ್ಟ ಅನಾರೋಗ್ಯಕ್ಕೂ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ. ಈ ಕಾರಣದಿಂದ ಆರೋಗ್ಯ ವಿಮೆ ಅಗತ್ಯವಾಗಿದೆ. ಇದೇ ವೇಳೆ ವಿಮೆ ಕೂಡ ಒಮ್ಮೆ ಪ್ರೀಮಿಯಂಗಳನ್ನು ಹೆಚ್ಚು ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಾಲಿಸಿಗಳಿಗೆ ಶೇ.15-30ರಷ್ಟು ಪ್ರೀಮಿಯಂ ಹೆಚ್ಚಳವಾಗಿರುವುದು ಸ್ಪಷ್ಟವಾಗಿದೆ.
ಕೋವಿಡ್ ಸಮಯದಲ್ಲಿ ಆರೋಗ್ಯ ವಿಮೆಗಳ ಪಾಲಸಿಯ ಸಂಖ್ಯೆ ಹೆಚ್ಚಾಗಿದೆ. ಇದೀಗ ಇವುಗಳ ನವೀಕರಣದ ಸಮಯ ಬಂದಿದೆ. ಈ ಹಿನ್ನಲೆಯಲ್ಲಿ ಎರಡು ವರ್ಷ ಅಥವಾ ಮೂರು ವರ್ಷಗಳ ಪ್ರೀಮಿಯಂ ಅನ್ನು ಒಂದೇ ಬಾರಿ ಪಾವತಿಸುವುದು ಉತ್ತಮವೇ ಎಂಬ ಅನುಮಾನ ಅನೇಕರಲ್ಲಿದೆ. ನೀವು ವಾರ್ಷಿಕ ಪ್ರೀಮಿಯಂ ಪಾಲಿಸಿ ಅಯ್ದುಕೊಂಡಾಗ ಸಮಯದಿಂದ ಸಮಯಕ್ಕೆ ನೀವು ಹೆಚ್ಚಿನ ಪ್ರೀಮಿಯಂ ಅನ್ನು ಪಾಲಿಸಬೇಕಾಗುತ್ತದೆ. ಎರಡು ಅಥವಾ ಮೂರು ವರ್ಷಗಳ ಕಾಲ ಒಂದೇ ಬಾರಿಗೆ ಪ್ರೀಮಿಯಂ ಪಾವತಿಸುವುದರಿಂದ ಹೊರೆ ಕಡಿಮೆಯಾಗುತ್ತದೆ.
ಹೆಚ್ಚಿನ ಪ್ರೀಮಿಯಂ: ವಾರ್ಷಿಕವಾಗಿ ಪ್ರೀಮಿಯಂ ಅನ್ನು ಪಾವತಿಸುತ್ತಿದ್ದರೆ, ಹೆಚ್ಚಿದ ಪ್ರೀಮಿಯಂ ಅನ್ನು ಕೂಡ ಪಾವತಿಸಬೇಕಾಗುತ್ತದೆ. ವಿಮೆ ಕಂಪನಿಗಳು ಸಾಮಾನ್ಯವಾಗಿ ಪ್ರತಿ ವರ್ಷ ಪ್ರೀಮಿಯಂಗಳನ್ನು ಹೆಚ್ಚು ಮಾಡುತ್ತದೆ. ಈ ಹೊರೆ ನಿಮಗೆ ಬೇಡವಾಗುತ್ತದೆ. ಇದಕ್ಕಾಗಿ ದೀರ್ಘಾವಧಿ ಪಾಲಿಸಿ ಪಡೆಯಬಹುದು. ಪ್ರೀಮಿಯಂ ಹೆಚ್ಚಾದರೂ, ಪಾಲಿಸಿದಾರರು ಆ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಏಕೆಂದರೆ ಅವರು ಈಗಾಗಲೇ ಮುಂಗಡವಾಗಿ ಪ್ರೀಮಿಯಂ ಪಾವತಿಸಿದ್ದಾರೆ.
ಕಂತುಗಳು: ಹೆಚ್ಚಿನ ಮೊತ್ತದ ಪ್ರೀಮಿಯಂ ಪಾವತಿಸುವ ತೊಂದರೆಯಿಲ್ಲದೆ ವಿಮಾ ಕಂಪನಿಗಳು ಸಹ ಸ್ವಲ್ಪ ಸರಳತೆ ನೀಡುತ್ತವೆ. ಅಗತ್ಯವಿದ್ದರೆ ಈ ಸೌಲಭ್ಯವನ್ನು ಪಡೆಯಬಹುದು. ದೀರ್ಘಾವಧಿಯ ಪಾಲಿಸಿಗಳಿಗೆ ಮಾತ್ರವಲ್ಲ. ವಾರ್ಷಿಕ ಪ್ರೀಮಿಯಂ ಪಾವತಿಸುವ ಸಂದರ್ಭದಲ್ಲಿ ಇಎಂಐ ಅನ್ನು ಸಹ ಬಳಸಬಹುದು.