ನವದೆಹಲಿ: ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್ ಸಾಲ ಕೊಡುವುದರಲ್ಲಿ ಶೇ. 21.5 ರಷ್ಟು ಏರಿಕೆಯಾಗಿದ್ದು, 13, 95,000 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಖಾಸಗಿ ವಲಯದ ಹೆಚ್‌ಡಿಎಫ್‌ಸಿ ಬ್ಯಾಂಕ್ ಸೋಮವಾರ ತಿಳಿಸಿದೆ. ಕಳೆದ ವರ್ಷ ಜೂನ್ 30ಕ್ಕೆ 11,47,700 ಕೋಟಿ ರೂ. ಕ್ರೆಡಿಟ್ ಬುಕ್ ಇತ್ತು.
ಬ್ಯಾಂಕ್ನ ಒಟ್ಟಾರೆ ಎಲ್ಲಾ ವರ್ಗಾವಣೆ ಇಂಟರ್-ಬ್ಯಾಂಕ್ ಪ್ರಮಾಣಪತ್ರಗಳ ಮತ್ತು ಬಿಲ್‌ಗಳ ಮರು ರಿಯಾಯಿತಿ ಮೂಲಕ ಆದ ಹಿನ್ನೆಲೆ ಜೂನ್ 30, 2021 ಕ್ಕಿಂತ ಸುಮಾರು 22.5 ಪ್ರತಿಶತದಷ್ಟು ಸಾಲ ವಿತರಣೆ ಹೆಚ್ಚಾಗಿದೆ ಎಂದು ಹೆಚ್‌ಡಿಎಫ್‌ಸಿ ಬ್ಯಾಂಕ್ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. ಜೂನ್ 30, 2022 ರ ಹೊತ್ತಿಗೆ ಬ್ಯಾಂಕಿನ ಠೇವಣಿ ಸರಿಸುಮಾರು 16,05,000 ಕೋಟಿ ರೂ. ಆಗಿದೆ.