ಕರ್ನಾಟಕ

karnataka

ETV Bharat / business

ಕಷ್ಟಕಾಲದಲ್ಲಿ ಕೈಹಿಡಿಯುವ ಸಪ್ಲಿಮೆಂಟರಿ ರೈಡರ್ ವಿಮೆ: ಇಲ್ಲಿದೆ ಮಾಹಿತಿ - ಸಪ್ಲಿಮೆಂಟರಿ ರೈಡರ್ ಪಾಲಿಸಿಗಳು

ಪ್ರೈಮರಿ ಟರ್ಮ್ ಪಾಲಿಸಿಗಳನ್ನು ಹೊಂದಿರುವವರಿಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸಲು ಸಪ್ಲಿಮೆಂಟರಿ ರೈಡರ್ ಪಾಲಿಸಿಗಳು (supplementary rider policies ) ಸೂಕ್ತವಾಗಿವೆ. ಮುಖ್ಯ ಟರ್ಮ್ ಪಾಲಿಸಿಗಳ ಜೊತೆಗೆ ವಿಮಾ ಕಂಪನಿಗಳು ಈ ಸಪ್ಲಿಮೆಂಟರಿ ಪಾಲಿಸಿಗಳನ್ನು ಒದಗಿಸುತ್ತವೆ.

ಕಷ್ಟಕಾಲದಲ್ಲಿ ಕೈಹಿಡಿಯುವ ಸಪ್ಲಿಮೆಂಟರಿ ರೈಡರ್ ವಿಮೆ: ಇಲ್ಲಿದೆ ಮಾಹಿತಿ
Rider insurance plans help your family to tide over income loss, disabilities

By

Published : Sep 28, 2022, 2:02 PM IST

ಹೈದರಾಬಾದ್: ಪಾಲಿಸಿದಾರರಿಗೆ ಏನಾದರೂ ಸಂಭವಿಸಿದಾಗ ಮಾತ್ರ ಟರ್ಮ್ ಪಾಲಿಸಿ ಉಪಯೋಗಕ್ಕೆ ಬರುತ್ತದೆ. ಆದರೆ ಒಂದು ಕುಟುಂಬದ ಆದಾಯ ಗಳಿಸುವ ವ್ಯಕ್ತಿ ಗಾಯಗೊಂಡರೆ ಮತ್ತು ಗಳಿಸುವ ಶಕ್ತಿಯನ್ನು ಕಳೆದುಕೊಂಡರೆ ಏನು ಮಾಡುವುದು? ಅಥವಾ ದೀರ್ಘಕಾಲದ ಕಾಯಿಲೆಗಳಿಂದ ಅನಾರೋಗ್ಯಕ್ಕೆ ಒಳಗಾದರೆ, ಶಾಶ್ವತವಾಗಿ ಅಂಗವಿಕಲರಾದರೆ ಮತ್ತು ಇನ್ನು ಮುಂದೆ ಕೆಲಸ ಮಾಡುವ ಸಾಮರ್ಥ್ಯ ಕಳೆದುಕೊಕೊಂಡರೆ ಏನು ಮಾಡಬಹುದು ಎಂಬ ಬಗ್ಗೆ ಅನೇಕರು ಯೋಚಿಸುವುದಿಲ್ಲ. ಆದರೆ ನಾವು ಇಂಥ ಸಾಧ್ಯತೆಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. ಅದಕ್ಕಾಗಿಯೇ ನಾವು ತಾತ್ಕಾಲಿಕ ಅಥವಾ ಶಾಶ್ವತವಾಗಿ ಆದಾಯ ಕಳೆದುಕೊಂಡರೂ ನಮ್ಮ ರಕ್ಷಣೆಗೆ ಬರುವ ರೀತಿಯಲ್ಲಿ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳಬೇಕು.

ಸಪ್ಲಿಮೆಂಟರಿ ರೈಡರ್ ಪಾಲಿಸಿ ಅಂದರೇನು: ಈ ನಿಟ್ಟಿನಲ್ಲಿ ಪ್ರೈಮರಿ ಟರ್ಮ್ ಪಾಲಿಸಿಗಳನ್ನು ಹೊಂದಿರುವವರಿಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸಲು ಸಪ್ಲಿಮೆಂಟರಿ ರೈಡರ್ ಪಾಲಿಸಿಗಳು (supplementary rider policies ) ಸೂಕ್ತವಾಗಿವೆ. ಮುಖ್ಯ ಟರ್ಮ್ ಪಾಲಿಸಿಗಳ ಜೊತೆಗೆ ವಿಮಾ ಕಂಪನಿಗಳು ಈ ಸಪ್ಲಿಮೆಂಟರಿ ಪಾಲಿಸಿಗಳನ್ನು ಒದಗಿಸುತ್ತವೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗಾಗಿ ಇಂಥ ಒಂದು ಅಥವಾ ಅದಕ್ಕೂ ಹೆಚ್ಚಿನ ರೈಡರ್ ಪಾಲಿಸಿಗಳನ್ನು ಆಯ್ಕೆಮಾಡುವ ಮೊದಲು ಸಾಕಷ್ಟು ಯೋಚಿಸಿ ಮುಂದುವರೆಯಿರಿ.

ಆಕ್ಸಲರೇಟೆಡ್ ಡೆತ್ ಬೆನಿಫಿಟ್ ರೈಡರ್:ಪ್ರೈಮರಿ ಟರ್ಮ್ ಪಾಲಿಸಿಯು ಪಾಲಿಸಿದಾರನ ಮರಣದ ನಂತರ ಮಾತ್ರ ಪರಿಹಾರವನ್ನು ನೀಡುತ್ತದೆ. 'ಆಕ್ಸಲರೇಟೆಡ್ ಡೆತ್ ಬೆನಿಫಿಟ್ ರೈಡರ್' (ಎಡಿಬಿ) (accelerated death benefit rider) ಇದ್ದರೆ, ಆಯಾ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ನೀಡಲಾಗುತ್ತದೆ. ಉದಾಹರಣೆಗೆ, ಟರ್ಮ್ ಪಾಲಿಸಿಯು ರೂ.15 ಲಕ್ಷದ ರೈಡರ್ ಪ್ಲಾನ್ ಜೊತೆಗೆ ರೂ.25 ಲಕ್ಷದ ಕವರ್ ಹೊಂದಿದ್ದರೆ, ಪಾಲಿಸಿದಾರನು ಅಪಘಾತದಲ್ಲಿ ಮರಣಹೊಂದಿದರೆ ನಾಮಿನಿಗೆ ರೂ. 40 ಲಕ್ಷ ಸಿಗುತ್ತದೆ. ಎಷ್ಟೋ ಜನರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವುದನ್ನು ನಾವು ನೋಡುತ್ತೇವೆ. ಹೀಗಾಗಿ ಅಂಥ ಸಂದರ್ಭಗಳಲ್ಲಿ ನೆರವಾಗಲು ಆರ್ಥಿಕ ಭದ್ರತೆಯನ್ನು ಖಾತರಿಪಡಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ: ಅವಧಿ ಮೀರಿದ ಕಾರು ಮತ್ತು ಬೈಕ್​ಗಳ ವಿಮಾ ಪಾಲಿಸಿಗಳನ್ನು ನವೀಕರಿಸುವುದು ಹೇಗೆ?

ಆಕಸ್ಮಿಕ ಅಂಗವೈಕಲ್ಯ ಪ್ರಯೋಜನ ರೈಡರ್:ಅಲ್ಲದೆ, ವಿಮಾ ಕಂಪನಿಗಳು ತಾತ್ಕಾಲಿಕ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಅಪಘಾತದಲ್ಲಿ ತೀವ್ರ ಗಾಯವಾದಾಗ ಟರ್ಮ್ ಪಾಲಿಸಿ ಹೊಂದಿರುವವರಿಗೆ ರಕ್ಷಣೆ ನೀಡಲು 'ಆಕಸ್ಮಿಕ ಅಂಗವೈಕಲ್ಯ ಪ್ರಯೋಜನ ರೈಡರ್' (accidental disability benefit rider) ಅನ್ನು ಒದಗಿಸುತ್ತವೆ. ಕೆಲವೊಮ್ಮೆ, ಒಬ್ಬ ವ್ಯಕ್ತಿಯು ಅಪಘಾತದ ನಂತರ ಹಲವಾರು ದಿನಗಳವರೆಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಕೈ, ಕಾಲು ಅಥವಾ ದೃಷ್ಟಿ ನಷ್ಟದಿಂದಾಗಿ ಶಾಶ್ವತ ಅಂಗವೈಕಲ್ಯ ಬರಬಹುದು. ಕೆಲವು ಕಂಪನಿಗಳು ಇಂಥ ಎಲ್ಲ ಸಂದರ್ಭಗಳಲ್ಲಿ ಕವರೇಜ್ ನೀಡಿದರೆ ಇನ್ನು ಕೆಲ ಕಂಪನಿಗಳು ಶಾಶ್ವತ ಅಂಗವೈಕಲ್ಯದ ಸಮಯದಲ್ಲಿ ಮಾತ್ರ ಕವರೇಜ್ ನೀಡುತ್ತವೆ.

ಆದಾಯ ಲಾಭದ ರೈಡರ್:ಇಲ್ಲಿ ತಿಳಿಯಬೇಕಾದ ಮತ್ತೊಂದು ವಿಷಯವೆಂದರೆ 'ಆದಾಯ ಲಾಭದ ರೈಡರ್' (income benefit rider). ಇದು ಪಾಲಿಸಿದಾರನಿಗೆ ತನ್ನ ಕುಟುಂಬವು ಎಷ್ಟು ತಿಂಗಳುಗಳವರೆಗೆ ಆದಾಯ ಪಡೆಯಬೇಕು ಎಂಬುದನ್ನು ನಿರ್ಧರಿಸಲು ಅನುವು ಮಾಡಿಕೊಡುತ್ತದೆ. ಈ ರೈಡರ್ ಪ್ರೈಮರಿ ಟರ್ಮ್​ ಪ್ಲ್ಯಾನ್ ನೀಡುವ ಪರಿಹಾರದ ಮೇಲೆ ಹೆಚ್ಚುವರಿ ಆದಾಯವನ್ನು ನೀಡುತ್ತದೆ. ಇದು ಅನಿರೀಕ್ಷಿತ ಸಂದರ್ಭಗಳಲ್ಲಿ ಕುಟುಂಬವನ್ನು ಆರ್ಥಿಕವಾಗಿ ಬಲಪಡಿಸುತ್ತದೆ.

ಪ್ರೀಮಿಯಂ ಮನ್ನಾ ರೈಡರ್: ಯಾರೇ ಒಬ್ಬ ವ್ಯಕ್ತಿಯು ಇನ್ನು ಮುಂದೆ ಕೆಲಸ ಅಥವಾ ವ್ಯವಹಾರ ನಿಭಾಯಿಸಲು ಸಾಧ್ಯವಾಗದಿದ್ದಾಗ ಪ್ರೀಮಿಯಂ ಪಾವತಿಸಲು ಕಷ್ಟವಾಗುತ್ತದೆ. ಅಂಥ ಸಂದರ್ಭಗಳಿಂದ ಪಾರಾಗಲು 'ಪ್ರೀಮಿಯಂ ಮನ್ನಾ ರೈಡರ್' ('waiver of premium rider') ತೆಗೆದುಕೊಳ್ಳಬಹುದು. ಅಂಗವೈಕಲ್ಯ ಮತ್ತು ಗಂಭೀರ ಅನಾರೋಗ್ಯದ ರೈಡರ್​ಗಳಿಗೆ ಹೆಚ್ಚುವರಿಯಾಗಿ ಇದನ್ನು ತೆಗೆದುಕೊಳ್ಳಬಹುದು. ಪಾಲಿಸಿದಾರರು ಅಶಕ್ತರಾದಾಗ ಅಥವಾ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವಾಗ ಈ ರೈಡರ್​ಗಳು ಅವರ ಇತರ ಪ್ರೀಮಿಯಂಗಳನ್ನು ಪಾವತಿಸುತ್ತವೆ. ಅದೇ ಸಮಯದಲ್ಲಿ, ಮುಖ್ಯ ಟರ್ಮ್​ ಪ್ಲ್ಯಾನ್ ಪ್ರಕಾರ ಪಾಲಿಸಿದಾರನ ಮರಣದ ನಂತರ ಕುಟುಂಬಕ್ಕೆ ಸಂಪೂರ್ಣ ಪರಿಹಾರವನ್ನು ನೀಡಲಾಗುತ್ತದೆ.

ಕ್ರಿಟಿಕಲ್ ಇಲ್ನೆಸ್ ಬೆನಿಫಿಟ್ ರೈಡರ್:ಪಾಲಿಸಿದಾರರು ಕ್ಯಾನ್ಸರ್, ಕಿಡ್ನಿ ಅಥವಾ ಹೃದ್ರೋಗದಿಂದ ಅನಾರೋಗ್ಯಕ್ಕೆ ಒಳಗಾದಾಗ ವಿಮಾ ಕಂಪನಿಗಳು 'ಕ್ರಿಟಿಕಲ್ ಇಲ್ನೆಸ್ ಬೆನಿಫಿಟ್ ರೈಡರ್' (critical illness benefit rider) ಅಡಿಯಲ್ಲಿ ತ್ವರಿತ ಪರಿಹಾರವನ್ನು ನೀಡುತ್ತವೆ. ಇಂಥ ರೈಡರ್​ಗಳನ್ನು ಸಾಧ್ಯವಾದಷ್ಟು ರೋಗಗಳನ್ನು ಕವರ್ ಮಾಡಲು ತೆಗೆದುಕೊಳ್ಳಬೇಕು. ಸೂಕ್ತ ಅರಿವು ಮತ್ತು ಅತ್ಯುತ್ತಮ ವಿಮಾ ಯೋಜನೆಗಳ ಆಯ್ಕೆಯಿಂದ ಮಾತ್ರ ನಾವು ಸಂಪೂರ್ಣ ಆರ್ಥಿಕ ಭದ್ರತೆಯನ್ನು ಪಡೆಯಬಹುದು.

ಇದನ್ನೂ ಓದಿ: ವಿವಾಹಿತ ಹೆಣ್ಣು ಮಕ್ಕಳೂ ತಂದೆ ತಾಯಿಗಳ ವಿಮೆ ಪರಿಹಾರ ಪಡೆಯಲು ಅರ್ಹರು:ಹೈಕೋರ್ಟ್

For All Latest Updates

TAGGED:

ABOUT THE AUTHOR

...view details