ಕರ್ನಾಟಕ

karnataka

ETV Bharat / business

ಬ್ಯಾಂಕ್‌ ಸ್ವತ್ತುಗಳ ನಿವ್ವಳ ಕಾರ್ಯಕ್ಷಮತೆಯ ಅನುಪಾತ ಶೇ 5.9ಕ್ಕೆ ಇಳಿಕೆ

ಕೋವಿಡ್​-19 ಕಾಲಾವಧಿಯಲ್ಲಿ ದೇಶದ ಹಣಕಾಸು ನಿಯಂತ್ರಕ ಆರ್​ಬಿಐ ಕೈಗೊಂಡ ಬೆಂಬಲದ ಕ್ರಮಗಳಿಂದ, ನಿಯಂತ್ರಕ ಪರಿಹಾರಗಳನ್ನು ಹಿಂಪಡೆದ ನಂತರವೂ ಶೆಡ್ಯೂಲ್ಡ್​ ಕಮರ್ಶಿಯಲ್ ಬ್ಯಾಂಕ್​ಗಳ ಸ್ವತ್ತುಗಳ ನಿವ್ವಳ ಕಾರ್ಯಕ್ಷಮತೆಯ ಅನುಪಾತವನ್ನು (GNPA ratios) ನಿಯಂತ್ರಣದಲ್ಲಿಡಲು ಸಹಾಯಕವಾದವು ಎಂದು ಆರ್​ಬಿಐ ವರದಿ ಮಾಹಿತಿ ನೀಡಿದೆ.

Gross NPA ratio of banks fell to six-year low of 5.9% in March: RBI
Gross NPA ratio of banks fell to six-year low of 5.9% in March: RBI

By

Published : Jul 4, 2022, 2:13 PM IST

ಮುಂಬೈ: ಸಾಕಷ್ಟು ಕಾಯ್ದಿಟ್ಟ ಬಂಡವಾಳ ನಿಧಿ ಮತ್ತು ಆಸ್ತಿಗಳ ಗುಣಮಟ್ಟ ಸುಧಾರಣೆಯ ಹಿನ್ನೆಲೆಯಲ್ಲಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ಅವಕಾಶದ ಘಟ್ಟದಲ್ಲಿದೆ ಎಂದು ಆರ್​ಬಿಐ ಜೂನ್‌ನ ತನ್ನ ಹಣಕಾಸು ಸ್ಥಿರತೆಯ ವರದಿಯಲ್ಲಿ ಹೇಳಿದೆ.

ಮಾರ್ಚ್​ 2022ರಲ್ಲಿ ಸ್ವತ್ತುಗಳ ನಿವ್ವಳ ಕಾರ್ಯಕ್ಷಮತೆಯ ಅನುಪಾತ ಕಳೆದ 6 ವರ್ಷದ ಕನಿಷ್ಠ ಮಟ್ಟವಾದ ಶೇ 5.9ಕ್ಕೆ ಇಳಿದಿದೆ ಎಂದು ಆರ್​ಬಿಐ ವರದಿ ತಿಳಿಸಿದೆ.

ಸುದೀರ್ಘ ಕಾಲಾವಧಿಯ ನಂತರ ಬ್ಯಾಂಕ್​ಗಳ ಸಾಲದ ಮೊತ್ತವು ಎರಡಂಕಿಯಲ್ಲಿ ಬೆಳೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೋವಿಡ್​-19 ಕಾಲಾವಧಿಯಲ್ಲಿ ದೇಶದ ಹಣಕಾಸು ನಿಯಂತ್ರಕ ಆರ್​ಬಿಐ ಕೈಗೊಂಡ ಬೆಂಬಲದ ಕ್ರಮಗಳಿಂದ, ನಿಯಂತ್ರಕ ಪರಿಹಾರಗಳನ್ನು ಹಿಂಪಡೆದ ನಂತರವೂ ಶೆಡ್ಯೂಲ್ಡ್​ ಕಮರ್ಶಿಯಲ್ ಬ್ಯಾಂಕ್​ಗಳ ಸ್ವತ್ತುಗಳ ನಿವ್ವಳ ಕಾರ್ಯಕ್ಷಮತೆಯ ಅನುಪಾತವನ್ನು (GNPA ratios) ನಿಯಂತ್ರಣದಲ್ಲಿಡಲು ಸಹಾಯಕವಾದವು ಎಂದು ಆರ್​ಬಿಐ ವರದಿ ಮಾಹಿತಿ ನೀಡಿದೆ.

ಆರ್​ಬಿಐ ನಡೆಸಿದ ಒತ್ತಡ ಪರೀಕ್ಷೆಗಳ ಪ್ರಕಾರ, 2023ರ ವೇಳೆಗೆ ಸ್ವತ್ತುಗಳ ನಿವ್ವಳ ಕಾರ್ಯಕ್ಷಮತೆಯ ಅನುಪಾತವು, ಬ್ಯಾಂಕ್​ಗಳ ಸಾಲ ಬೇಡಿಕೆಗಳ ಪ್ರಮಾಣ ಹೆಚ್ಚಳವಾಗುವ ಹಾಗೂ ಇಳಿಕೆಯ ಹಾದಿಯಲ್ಲಿ ಸ್ವತ್ತುಗಳ ನಿವ್ವಳ ಕಾರ್ಯಕ್ಷಮತೆಯ ಅನುಪಾತ ಶೇ 5.3ಕ್ಕೆ ಹೆಚ್ಚಳವಾಗಬಹುದು.

ABOUT THE AUTHOR

...view details