ಕರ್ನಾಟಕ

karnataka

ETV Bharat / business

ತ್ವರಿತ ಪಾವತಿಗಾಗಿ UPI LITE ಹೊರತಂದ ಗೂಗಲ್ ಪೇ - Google Pay launched UPI LITE

ಗೂಗಲ್ ಪ್ಲೇ ತನ್ನ ಪ್ಲೇ ಸ್ಟೋರ್​ನಲ್ಲಿ ಯುಪಿಐ ಲೈಟ್​ ಎಂಬ ಆ್ಯಪ್ ಪರಿಚಯಿಸಿದೆ. ಇದರ ಮೂಲಕ ಬಳಕೆದಾರರು ತ್ವರಿತವಾಗಿ ಪಾವತಿಗಳನ್ನು ಮಾಡಬಹುದು.

Google Pay introduces UPI LITE in India for faster transactions
Google Pay introduces UPI LITE in India for faster transactions

By

Published : Jul 13, 2023, 6:51 PM IST

ನವದೆಹಲಿ : ಯುಪಿಐ ಪಿನ್ ನಮೂದಿಸುವ ಅಗತ್ಯವಿಲ್ಲದೇ ಅತ್ಯಂತ ತ್ವರಿತವಾಗಿ ಮತ್ತು ಒಂದೇ ಕ್ಲಿಕ್ ಮೂಲಕ ಯುಪಿಐ ವಹಿವಾಟು ನಡೆಸಲು ಅನುಕೂಲ ಕಲ್ಪಿಸುವ ಯುಪಿಐ ಲೈಟ್ (UPI LITE) ಆ್ಯಪ್​ ಅನ್ನು ಗೂಗಲ್ ಪೇ ಗುರುವಾರ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯಿಸಿದೆ. ಲೈಟ್ ಖಾತೆಯು ಬಳಕೆದಾರರ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆ, ಆದರೆ, ಅವರ ಬ್ಯಾಂಕ್‌ನ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೈಜ ಸಮಯದಲ್ಲಿ ಅವಲಂಬಿಸಿರುವುದಿಲ್ಲ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಯುಪಿಐ ಲೈಟ್ ಖಾತೆಯನ್ನು ದಿನಕ್ಕೆ ಎರಡು ಬಾರಿ ರೂ 2,000 ವರೆಗೆ ಲೋಡ್ ಮಾಡಬಹುದು ಮತ್ತು ರೂ 200 ವರೆಗೆ ತ್ವರಿತ ಯುಪಿಐ ವಹಿವಾಟುಗಳನ್ನು ನಡೆಸಬಹುದು. “ವಿಶಿಷ್ಟ ಕೊಡುಗೆಗಳು ಮತ್ತು ಬಳಕೆಯ ವಿಧಾನಗಳು ದೇಶದಲ್ಲಿ ಡಿಜಿಟಲ್ ಪಾವತಿಗಳ ಅಳವಡಿಕೆಯ ವಿಚಾರದಲ್ಲಿ ಪ್ರಮುಖ ವಿಷಯಗಳಾಗಿವೆ ಮತ್ತು ಗೂಗಲ್ ಪ್ಲೇ ನಲ್ಲಿ ಯುಪಿಐ ಲೈಟ್ ಅನ್ನು ಪರಿಚಯಿಸುವುದರೊಂದಿಗೆ ಬಳಕೆದಾರರಿಗೆ ಅನುಕೂಲಕರ, ಕಾಂಪ್ಯಾಕ್ಟ್ ಮತ್ತು ಸೂಪರ್‌ಫಾಸ್ಟ್ ಪಾವತಿಗಳ ಅನುಭವ ನೀಡುವ ಮತ್ತು ಸಣ್ಣ-ಮೌಲ್ಯದ ವಹಿವಾಟುಗಳನ್ನು ಸರಳಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಗೂಗಲ್‌ನ ಉತ್ಪನ್ನ ನಿರ್ವಹಣೆಯ ವಿಪಿ ಅಂಬರೀಷ್ ಕೆಂಗೆ ಹೇಳಿದರು.

ಈ ಅಪ್ಲಿಕೇಶನ್​ ಬಳಸುವುದು ಹೇಗೆ?:ಗೂಗಲ್ ಪೇ ಅಪ್ಲಿಕೇಶನ್ ಬಳಕೆದಾರರು ತಮ್ಮ ಪ್ರೊಫೈಲ್ ಪುಟಕ್ಕೆ ಹೋಗಿ UPI LITE ಅನ್ನು ಸಕ್ರಿಯಗೊಳಿಸಿ ಎಂಬುದನ್ನು ಟ್ಯಾಪ್ ಮಾಡಬಹುದು. ಲಿಂಕ್ ಮಾಡುವ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಬಳಕೆದಾರರು ತಮ್ಮ ಯುಪಿಐ ಲೈಟ್ ಖಾತೆಗೆ ರೂ 2,000 ವರೆಗೆ ಹಣವನ್ನು ಸೇರಿಸಲು ಸಾಧ್ಯವಾಗುತ್ತದೆ. ಇದರಲ್ಲಿ ದಿನಕ್ಕೆ ಗರಿಷ್ಠ ಮಿತಿ ರೂ 4,000 ಆಗಿರುತ್ತದೆ.

"ಯುಪಿಐ ಲೈಟ್ ಇದು ಲಭ್ಯವಿರುವ ಬ್ಯಾಲೆನ್ಸ್‌ ಮತ್ತು 200 ರೂ.ಗಿಂತ ಕಡಿಮೆ ವಹಿವಾಟು ಮೌಲ್ಯಗಳನ್ನು ಆಧರಿಸಿ ಯುಪಿಐ ಲೈಟ್ ಖಾತೆ ತಾನಾಗಿಯೇ ಡಿಫಾಲ್ಟ್ ಆಗಿ ಆಯ್ಕೆಯಾಗುತ್ತದೆ" ಎಂದು ಕಂಪನಿ ಹೇಳಿದೆ. ವಹಿವಾಟನ್ನು ಪೂರ್ಣಗೊಳಿಸಲು ಬಳಕೆದಾರರು "ಪೇ ಪಿನ್-ಫ್ರೀ" ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

ಯುಪಿಐ ವಹಿವಾಟು ಪ್ರಕ್ರಿಯೆಯನ್ನು ಸರಾಗಗೊಳಿಸುವ ಸಲುವಾಗಿ ಯುಪಿಐ ಲೈಟ್ ವೈಶಿಷ್ಟ್ಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೆಪ್ಟೆಂಬರ್ 2022 ರಲ್ಲಿ ಪ್ರಾರಂಭಿಸಿತ್ತು ಮತ್ತು ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಚಾಲನೆಗೊಳಿಸಿದೆ. ಇಲ್ಲಿಯವರೆಗೆ ಹದಿನೈದು ಬ್ಯಾಂಕ್‌ಗಳು UPI LITE ಅನ್ನು ಬೆಂಬಲಿಸುತ್ತವೆ. ಮುಂಬರುವ ತಿಂಗಳುಗಳಲ್ಲಿ ಇನ್ನೂ ಹೆಚ್ಚಿನ ಬ್ಯಾಂಕ್‌ಗಳು ಇದನ್ನು ಸಪೋರ್ಟ್ ಮಾಡಲಿವೆ.

ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಎಂಬುದು ಜನಪ್ರಿಯ ಮೊಬೈಲ್ ಪಾವತಿ ವಿಧಾನವಾಗಿದ್ದು, ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ಹಣವನ್ನು ತ್ವರಿತವಾಗಿ ಮತ್ತು ಉಚಿತವಾಗಿ ವರ್ಗಾಯಿಸಲು ಅವಕಾಶ ನೀಡುತ್ತದೆ. ಯುಪಿಐ ಮೂಲಕ ಹಣವನ್ನು ವರ್ಗಾಯಿಸಲು ಪ್ರತಿಯೊಬ್ಬ ಬಳಕೆದಾರರು UPI ID ಎಂದು ಕರೆಯಲ್ಪಡುವ ಐಡಿಯನ್ನು ಹೊಂದಿರಬೇಕು. ಯುಪಿಐ ಐಡಿಯು ಒಂದು ಬ್ಯಾಂಕ್ ಖಾತೆಗೆ ಒಂದು ಅನನ್ಯ ಐಡಿ ಆಗಿದ್ದು, ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ಹಣ ಕಳುಹಿಸಲು ಮತ್ತು ಸ್ವೀಕರಿಸಲು ಬಳಸಲಾಗುತ್ತದೆ.

ಇದನ್ನೂ ಓದಿ :ಶಾಸಕರನ್ನು ಎತ್ತಿ, ಎಳೆದು ಅಸೆಂಬ್ಲಿಯಿಂದ ಹೊರ ಹಾಕಿದ ಮಾರ್ಷಲ್​ಗಳು! ವಿಡಿಯೋ ನೋಡಿ

ABOUT THE AUTHOR

...view details