ಹೈದರಾಬಾದ್:ದಶಕಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ ನಂತರ ನಿವೃತ್ತಿಯಾಗುವ ಜನರ ಮನಸ್ಸಿನಲ್ಲಿ ಉಳಿತಾಯದ ಪ್ರಶ್ನೆಗಳು ಉಳಿದುಕೊಂಡಿರುತ್ತವೆ. ತಾವು ನಿವೃತ್ತಿಯಾದ ಬಳಿಕ ಮುಂದಿನ ಜೀವನ, ಮಕ್ಕಳ ಶಿಕ್ಷಣ, ಹೂಡಿಕೆ ಮಾಡುವುದು ಹೇಗೆ, ಯಾವ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ನನ್ನ ಉತ್ತರಾಧಿಕಾರಿಗಳ ಜೀವನಕ್ಕಾಗಿ ಹಣ ಕೂಡಿಡುವುದು ಹೇಗೆ ಎಂಬೆಲ್ಲಾ ಯೋಚನೆಗಳು ಸುಳಿದಾಡುತ್ತವೆ.
ನಿಮ್ಮ ಹಣಕಾಸಿನ ಮೌಲ್ಯವನ್ನು ಲೆಕ್ಕ ಹಾಕಿ:ಕಷ್ಟವಾದರೂ ಸರಿಯೇ, ನಿಮ್ಮ ಹಣದ ಮೌಲ್ಯವನ್ನು ನೀವು ಲೆಕ್ಕ ಹಾಕಲೇಬೇಕು. ಅದಕ್ಕಾಗಿ ನೀವು ಗಳಿಸಿದ ಪ್ರತಿ ರೂಪಾಯಿಯನ್ನು ಲೆಕ್ಕ ಹಾಕಬೇಕು. ನೀವು ಹೂಡಿಕೆ ಮಾಡಿದ ಷೇರುಗಳು, ಮ್ಯೂಚುವಲ್ ಫಂಡ್ಗಳು, ಜೀವ ವಿಮಾ ಪಾಲಿಸಿಗಳು, ರಿಯಲ್ ಎಸ್ಟೇಟ್, ಠೇವಣಿ ಮತ್ತು ಕೈಯಲ್ಲಿರುವ ನಗದು ಮುಂತಾದ ಹಣಕಾಸಿನ ವಿವರಗಳನ್ನು ಬರೆದು ಲೆಕ್ಕ ಹಾಕಿಕೊಳ್ಳಬೇಕು.
ಇದಲ್ಲದೇ, ನೀವು ಪೂರೈಸಬೇಕಾದ ಜವಾಬ್ದಾರಿಗಳನ್ನು ನೆನಪಿಟ್ಟುಕೊಳ್ಳಿ. ನಿಮಗೆ ಬರುವ ಪಿಂಚಣಿ, ಮನೆ ಬಾಡಿಗೆ ಮತ್ತು ದೀರ್ಘಕಾಲದ ಯೋಜನೆಗಳಂತಹ ನಿಯಮಿತ ಆದಾಯವನ್ನು ಲೆಕ್ಕ ಹಾಕಿ. ಈ ಎಲ್ಲಾ ಗಳಿಕೆಗಳನ್ನು ನೀವು ಸಂಯೋಜಿಸಿದಾಗ, ನಿವ್ವಳ ಆರ್ಥಿಕ ಮೌಲ್ಯವನ್ನು ನೀವು ಗೊತ್ತು ಮಾಡಿಕೊಳ್ಳಬಹುದು. ಈ ವೇಳೆ ನಿಮಗೆ ಬರುವ ಆದಾಯವು ಹೆಚ್ಚಿದ್ದು, ಖರ್ಚು ಕಡಿಮೆಯಾಗಿದ್ದರೆ ಶಾಂತಿಯುತ, ನೆಮ್ಮದಿಯ ನಿವೃತ್ತಿಯ ಜೀವನವನ್ನು ಕಳೆಯಬಹುದಾಗಿದೆ.
ಹೂಡಿಕೆಯಲ್ಲಿ ಆತುರ ಬೇಡ:ಅನೇಕ ಜನರು ತಮ್ಮ ಎಲ್ಲಾ ನಿವೃತ್ತಿ ಪ್ರಯೋಜನಗಳನ್ನು ಉಳಿತಾಯ ಯೋಜನೆಗೆ ತಳುಕು ಹಾಕುತ್ತಾರೆ. ಇದು ಉತ್ತಮ ಅಭ್ಯಾಸವಲ್ಲ. ಮೊದಲಿಗೆ ನೀವು 15 ರಿಂದ 20 ವರ್ಷಗಳವರೆಗೆ ನಿಮ್ಮ ಅವಶ್ಯಕತೆಗಳನ್ನು ಅಂದಾಜು ಮಾಡಬೇಕು. ಅದಕ್ಕೆ ಅನುಗುಣವಾಗಿ ಸಣ್ಣ, ಮಧ್ಯಮ ಮತ್ತು ದೀರ್ಘಾವಧಿಯ ಹೂಡಿಕೆಗಳನ್ನು ಯೋಜಿಸಬೇಕು. 15 ವರ್ಷಗಳ ನಂತರದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ದೀರ್ಘಾವಧಿಯ ಈಕ್ವಿಟಿ ಅಥವಾ ಹೈಬ್ರಿಡ್ ಮ್ಯೂಚುವಲ್ ಫಂಡ್ಗಳಲ್ಲಿ ಮಾಡಿದ ಹೂಡಿಕೆಗಳು ಉತ್ತಮ ಆದಾಯವನ್ನು ದೊರಕಿಡಿಕೊಡುತ್ತವೆ ಎಂಬುದನ್ನು ಮರೆಯಬಾರದು.