ರಾಜ್ಯದ ಹಲವು ನಗರಗಳಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಕಂಡಿದೆ. ಈಗ ಮದುವೆಯ ಸೀಸನ್ ಆಗಿದ್ದು ಹಳದಿ ಲೋಹಕ್ಕೆ ಡಿಮಾಂಡ್ ಹೆಚ್ಚಿದೆ. ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಚಿನ್ನ ಬೆಳ್ಳಿ ದರ ವಿವರ ಇಲ್ಲಿದೆ.
ಮೈಸೂರಿನಲ್ಲಿ ಚಿನ್ನ ಬೆಳ್ಳಿ ದರ: 22 ಕ್ಯಾರೆಟ್ ಚಿನ್ನದ ದರ -5140 ಇದ್ದು, ಇಂದು ಗ್ರಾಂ ಗೆ 10 ರೂಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ದರವು -5,781 ಆಗಿದ್ದು ಒಂದು ಗ್ರಾಮ್ಗೆ 6 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ದರ ಪ್ರತಿ ಗ್ರಾಂ ಗೆ -70.20 ರೂ ಇದೆ.
ದಾವಣಗೆರೆ ಚಿನ್ನ-ಬೆಳ್ಳಿ ದರ:22 ಕ್ಯಾರೆಟ್ ಚಿನ್ನದ ದರ - 5145 ಆಗಿದ್ದು 10 ರೂಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ದರ -5612 ಇದ್ದು 11 ರೂಪಾಯಿ ಏರಿಕೆ ಆಗಿದೆ. ಬೆಳ್ಳಿ ದರ ಪ್ರತಿ ಗ್ರಾಂ ಗೆ -74 ರೂಪಾಯಿ ಇದ್ದು ಯಥಾಸ್ಥಿತಿಯಲ್ಲಿದೆ.
ಮಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ:22 ಕ್ಯಾರೆಟ್ ಚಿನ್ನದ ದರ -5145 ಇದ್ದು, 10 ರೂಪಾಯಿ ಹೆಚ್ಚಳವಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 5612 ಇದ್ದು 11 ರೂ ಹೆಚ್ಚಳವಾಗಿದೆ. ಬೆಳ್ಳಿ ದರ ಪ್ರತಿ ಗ್ರಾಂ ಗೆ -74 ರೂಪಾಯಿ ಇದ್ದು ಯಥಾಸ್ಥಿತಿಯಲ್ಲಿದೆ.
ಶಿವಮೊಗ್ಗದದಲ್ಲಿ ಚಿನ್ನ- ಬೆಳ್ಳಿ ದರ: 22 ಕ್ಯಾರೆಟ್ ಚಿನ್ನದ ದರವು 5140 ರೂಪಾಯಿ ಇದೆ. ಹಾಗೆ 24 ಕ್ಯಾರೆಟ್ ಚಿನ್ನದ ದರ 5611 ರೂಪಾಯಿ ಇದೆ. ಹಾಗೆ ಬೆಳ್ಳಿಗೆ ಕೆ.ಜಿ. ಗೆ 69,600 ರೂಪಾಯಿ ಇದೆ.