ಕರ್ನಾಟಕ

karnataka

ETV Bharat / business

ಚಿನ್ನದ ಮೇಲಿನ ಹೂಡಿಕೆಗಿಂತ ಗೋಲ್ಡ್​ ಇಟಿಎಫ್​ ಲಾಭದಾಯಕ; ಹೇಗಂತಿರಾ..? - ಚಿನ್ನದ ಬೆಲೆಗಳ ಏರಿಳಿತ

ಚಿನ್ನದ ಮೇಲಿನ ಹೂಡಿಕೆ ಸದಾ ಸುರಕ್ಷಿತ. ಬಂಗಾರವನ್ನು ನೇರವಾಗಿ ಕೊಂಡು ಅದನ್ನು ಜೋಪಾನ ಮಾಡುವುದು ಸುಲಭವಲ್ಲ. ಈ ಸಮಸ್ಯೆಗಳಿಗೆ ಪರಿಹಾರವಾಗಿ ಗೋಲ್ಡ್​ ಇಟಿಎಫ್​ ಇದೆ. ಹೆಚ್ಚು ಲಾಭದಾಯಕವಾಗಿರುವ ಈ ಯೋಜನೆಯ ಮಾಹಿತಿ ಇಲ್ಲಿದೆ.

ಚಿನ್ನದ ಮೇಲಿನ ಹೂಡಿಕೆಗಿಂತ ಗೋಲ್ಡ್​ ಇಟಿಎಫ್​ ಲಾಭದಾಯಕ; ಇಲ್ಲಿದೆ ಸಂಪೂರ್ಣ ಮಾಹಿತಿ
gold-etf-is-profitable-from-investing-in-gold-here-is-the-complete-information

By

Published : Feb 15, 2023, 10:59 AM IST

ಹೈದರಾಬಾದ್​: ಹಬ್ಬ-ಹರಿದಿನ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಬಂಗಾರ ಖರೀದಿಸುವುದು ಉತ್ತಮ ಎಂದು ಚಿಂತಿಸುತ್ತೇವೆ. ಈ ರೀತಿ ಚಿನ್ನದ ಖರೀದಿ ಮಾಡುವ ಮೂಲಕ ಹೂಡಿಕೆಯನ್ನು ಮಾಡುತ್ತೇವೆ. ಹಣದುಬ್ಬರ ಏರಿಳಿತದ ನಡುವೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂಬುದನ್ನು ಪ್ರಪಂಚದಾದ್ಯಂತ ನಂಬುತ್ತಾರೆ. ಇತ್ತೀಚಿನ ದಿನದಲ್ಲಿ ಬಂಗಾರದ ದರ ಏರಿಕೆ ಕಂಡಿದ್ದು, ಹಳದಿ ಲೋಹದ ಮೇಲೆ ಹೆಚ್ಚಿನ ಜನರು ಹೂಡಿಕೆ ಮಾಡುತ್ತಿದ್ದಾರೆ. ಈ ಚಿನ್ನ ಬಂಗಾರ ವಿನಿಮಯ ವ್ಯಾಪಾರ ನಿಧಿ (Gold ETFs)ಯಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಲಾಭ ಏನು ಎಂಬುದು ಅರಿಯುವುದು ಅವಶ್ಯವಾಗಿದೆ.

ಬುದ್ಧಿವಂತಿಕೆಯ ಹೂಡಿಕೆ ಎಂಬ ಪ್ರಶ್ನೆ ಬಂದಾಗ ಚಿನ್ನ ಪ್ರಮುಖ ಪಾತ್ರವಹಿಸುತ್ತದೆ. ವಿಶೇಷ ಸಂದರ್ಭದಲ್ಲಿ ಚಿನ್ನ ಅಗತ್ಯತೆಯನ್ನು ಪರಿಗಣಿಸಿ ಕೆಲವು ನೇರವಾಗಿ ಕೊಳ್ಳುತ್ತಾರೆ. ಕೆಲವು ಅಂದಾಜಿನ ಪ್ರಕಾರ, ದೇಶದಲ್ಲಿ 27 ಸಾವಿರ ಟನ್​ ಹಳದಿ ಲೋಹವಿದೆ. ಪ್ರಸ್ತುತ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆದಾರರ ಚಿಂತನೆಯಲ್ಲಿ ಬದಲಾವಣೆ ಕಾಣಬಹುದಾಗಿದೆ.

ನೀವು ಚಿನ್ನದ ಮೇಲಿನ ಹೂಡಿಕೆಯನ್ನು ಕೇವಲ ಆಭರಣ ಅಥವಾ ಕಾಯಿನ್​ ಬದಲಾಗಿ ಗೋಲ್ಡ್​​ ಇಟಿಎಫ್​ ಆಗಿ ಕೂಡ ಮಾಡಬಹುದಾಗಿದೆ. ಈ ಯೋಜನೆಗಳನ್ನು ಮ್ಯೂಚಯಲ್​ ಫಂಡ್​ ಕಂಪನಿಗಳು ಮಾಡುತ್ತದೆ. ಇಲ್ಲಿ ಚಿನ್ನದ ಇಟಿಎಫ್ ಘಟಕದ ಬೆಲೆಯನ್ನು ಒಂದು ಗ್ರಾಂ ಚಿನ್ನ ಅಥವಾ ನಿಗದಿತ ಮೊತ್ತಕ್ಕೆ ಸರಿಹೊಂದುವಂತೆ ಹೊಂದಿಸಲಾಗಿದೆ. ಇವುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಖರೀದಿಸುವುದು ಮತ್ತು ಮಾರಾಟ ಮಾಡುವುದು ಸುಲಭ ನಿರ್ವಹಣೆಯ ಅನುಕೂಲವನ್ನು ಒದಗಿಸುತ್ತದೆ.

ಶುದ್ಧತೆ ಬಗ್ಗೆ ಅನುಮಾನವಿಲ್ಲ: ನೇರವಾಗಿ ಚಿನ್ನವನ್ನು ಖರೀದಿಸುವಾಗ ಅದರ ಶುದ್ಧತೆ ಬಗ್ಗೆ ಕೆಲವೊಮ್ಮೆ ಅನುಮಾನ ವ್ಯಕ್ತವಾಗಬಹುದು. ಚಿನ್ನದ ಇಟಿಎಫ್​ ಬಂಗಾರದ ಬೆಲೆಯನ್ನು ಶೇ 99ರಷ್ಟು ಶುದ್ಧತೆಯೊಂದಿಗೆ ಪರಿಶೀಲಿಸುತ್ತದೆ. ಹಾಗಾಗಿ ಇದರಲ್ಲಿ ಶುದ್ಧತೆ ಬಗ್ಗೆ ಯಾವುದೇ ಚಿಂತೆ ಬೇಡ. ಚಿನ್ನ ಖರೀದಿಸಿದ ಬಳಿಕ ಅದನ್ನು ಸುರಕ್ಷಿತವಾಗಿ ಇಡುವುದು ಕೂಡ ದೊಡ್ಡ ಸಮಸ್ಯೆ. ಲಾಕರ್​ನಂತಹ ವ್ಯವಸ್ಥೆ ಮತ್ತಷ್ಟು ವೆಚ್ಚಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೇ, ಇದು ಶುಲ್ಕ ಸೇರಿದಂತೆ ಇನ್ನಿತರೆ ವೆಚ್ಚಗಳನ್ನು ಹೊಂದಿರುತ್ತದೆ. ಇಟಿಎಫ್​​​ನಲ್ಲಿ ಈ ಸಮಸ್ಯೆ ಕಡಿಮೆ. ಚಿನ್ನದ ಇಟಿಎಫ್​ ಡಿಮ್ಯಾಟ್​ ಫಾರ್ಮ್​​ ಅಲ್ಲಿ ಇರುವುದರಿಂದ ಇದರ ಸುರಕ್ಷತೆ ಬಗ್ಗೆ ಚಿಂತೆ ಬೇಡ.

ಚಿನ್ನದ ಇಟಿಎಫ್​ ಅನ್ನು ಸುಲಭವಾಗಿ ಕೊಳ್ಳಬಹುದು. ಘಟಕಗಳನ್ನು ಷೇರು ಮಾರುಕಟ್ಟೆಯ ಅವಧಿಯಲ್ಲಿ ಯಾವಾಗ ಬೇಕಾದರೂ ಕೊಂಡು, ಮಾರಾಟ ಮಾಡಬಹುದು. ಒಮ್ಮೆಯೇ ದೊಡ್ಡ ಮೊತ್ತದ ಹಣ ನೀಡುವ ಬದಲು ಹಂತ ಹಂತವಾಗಿ ಪ್ರತಿ ತಿಂಗಳು ಹೂಡಿಕೆ ಮಾಡಬಹುದು. ಡಿಮ್ಯಾಟ್​ ಅಕೌಂಟ್​ ಇಲ್ಲದವರೂ ಕೂಡ ಈ ಚಿನ್ನದ ನಿಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಪಾರದರ್ಶಕತೆ: ಚಿನ್ನದ ಇಟಿಎಫ್​ನ ಮತ್ತೊಂದು ಪ್ರಯೋಜನ ಎಂದರೆ ಪಾರದರ್ಶಕತೆ. ಚಿನ್ನದ ಬೆಲೆಗಳ ಏರಿಳಿತದ ಹೊರತಾಗಿ, ಚಿನ್ನದ ಘಟಕಗಳ ಬೆಲೆಗಳು ಮುಖ್ಯವಾಗುತ್ತದೆ. ಚಿನ್ನವನ್ನು ಕೊಳ್ಳುವಾಗ ಮತ್ತು ಮಾರಾಟ ಮಾಡುವಾಗ ಸುಲಭವಾಗಿ ಅದರ ಮೊತ್ತವನ್ನು ತಿಳಿಯಬಹುದು. ಬಂಗಾರವನ್ನು ಮಾರಾಟ ಮಾಡುವಾಗ ವಿವಿಧ ದರಗಳನ್ನು ನಿಗದಿಸಲಾಗುತ್ತದೆ. ಆದರೆ, ಚಿನ್ನದ ಇಟಿಎಫ್​​ನ್ನು ಮೂರು ವರ್ಷಗಳ ಇಟ್ಟುಕೊಂಡರೆ ಇದನ್ನು ದೀರ್ಘಾವಧಿ ಬಂಡವಾಳದ ಲಾಭ ಪಡೆಯಬಹುದು. ಹಣದುಬ್ಬರದ ಸರಿ ಹೊಂದಿಸಲಾಗಿದ್ದು, ಲಾಭದಲ್ಲಿ ಶೇ 20ರಷ್ಟನ್ನು ತೆರಿಗೆ ಪಾವತಿಸಬಹುದು. ಮೂರು ವರ್ಷಕ್ಕೆ ಮೊದಲೇ ಮಾರಾಟ ಮಾಡುವುದಾದರೆ, ಕಡಿಮೆ ಅವಧಿಯ ಬಂಡವಾಳದ ಲಾಭ ಪಡೆಯಬಹುದು. ಬಂಗಾರದ ಖರೀದಿ ಸೂಕ್ತ ಎಂದು ಬಯಸುವವರು, ಚಿನ್ನದ ಇಟಿಎಫ್‌ಗಳನ್ನು ಮೇಲಿನ ಹೂಡಿಕೆಯತ್ತ ಗಮನ ಹರಿಸಬಹುದಾಗಿದೆ. ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಇದನ್ನು ವಿಶ್ವಾಸಾರ್ಹ ಆಸ್ತಿಯಾಗಿ ಕಾಣಬಹುದಾಗಿದೆ.

ಇದನ್ನೂ ಓದಿ: 600 ಅಂಕಗಳ ಜಿಗಿತ ಕಂಡ ಸೆನ್ಸೆಕ್ಸ್​: ಶೇ 3.88ರಷ್ಟು ಏರಿಕೆಯಾದ ಅದಾನಿ ಷೇರುಗಳು

ABOUT THE AUTHOR

...view details