ನವದೆಹಲಿ:ಕಳೆದ ಒಂದು ವರ್ಷದಲ್ಲಿ ಚಿನ್ನದ ಮೇಲಿನ ಹೂಡಿಕೆಯು ಶೇಕಡಾ 21.84 ರಷ್ಟು ಹಾಗೂ ಬೆಳ್ಳಿಯ ಮೇಲಿನ ಹೂಡಿಕೆಯು ಶೇಕಡಾ 21.05 ರಷ್ಟು ಸಕಾರಾತ್ಮಕ ಆದಾಯ ನೀಡಿವೆ ಎಂದು ಮೋತಿಲಾಲ್ ಓಸ್ವಾಲ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯ ವರದಿ ತಿಳಿಸಿದೆ. ಅಕ್ಟೋಬರ್ನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಇಳಿಕೆಯ ಪ್ರವೃತ್ತಿ ಪ್ರದರ್ಶಿಸಿವೆ. ನಿಫ್ಟಿ 50 ಸೂಚ್ಯಂಕ ಶೇಕಡಾ 2.84 ರಷ್ಟು ಇಳಿಕೆಯಾಗಿದ್ದು, ಮಿಡ್-ಕ್ಯಾಪ್ 150 ಸೂಚ್ಯಂಕ ಶೇಕಡಾ 3.80 ರಷ್ಟು ಕುಸಿತ ಕಂಡಿದೆ.
ಆದರೆ, ಕಳೆದ ದೀಪಾವಳಿಯಿಂದ ಈ ವರ್ಷದ ದೀಪಾವಳಿಯವರೆಗೆ ನೋಡಿದರೆ- ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಶೇಕಡಾ 6 ಕ್ಕಿಂತ ಹೆಚ್ಚಾಗಿವೆ. ಕಳೆದೊಂದು ವರ್ಷದಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್ ಎರಡೂ ಗಣನೀಯ ಲಾಭವನ್ನು ಕಂಡಿವೆ. ಇದು ಭಾರತೀಯ ಆರ್ಥಿಕತೆಯ ದೃಢತೆ ಮತ್ತು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.
ಷೇರು ಮಾರುಕಟ್ಟೆಯಲ್ಲಿ ರಿಯಾಲ್ಟಿ ಹೊರತುಪಡಿಸಿ ಎಲ್ಲ ವಲಯಗಳು ನಕಾರಾತ್ಮಕವಾಗಿ ಚಲಿಸಿವೆ. ಲೋಹಗಳ ವಲಯವು ತೀವ್ರ ಕುಸಿತ ಕಂಡಿದ್ದು, ಶೇಕಡಾ 6 ರಷ್ಟು ಇಳಿಕೆಯಾಗಿದೆ. ಅಮೆರಿಕದಲ್ಲಿ ಎಸ್ &ಪಿ 500 ಮತ್ತು ನಾಸ್ಡಾಕ್ 100 ಎರಡೂ ಅಕ್ಟೋಬರ್ 2023 ರಲ್ಲಿ ಶೇಕಡಾ 2 ರಷ್ಟು ಕುಸಿತ ಅನುಭವಿಸಿವೆ.