ನವದೆಹಲಿ:ಚಿನಿವಾರ ಪೇಟೆಯಲ್ಲಿ ದರ ಇಳಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 435 ರೂಪಾಯಿ ಇಳಿಕೆ ಕಂಡು, 49,282 ರೂಪಾಯಿಗೆ ವಹಿವಾಟು ನಡೆಸಿದೆ. ಹಿಂದಿನ ಮಾರಾಟದಲ್ಲಿ ಹಳದಿ ಲೋಹದ ಬೆಲೆ ಪ್ರತಿ 10 ಗ್ರಾಂಗೆ 49,717 ರೂಪಾಯಿ ಇತ್ತು.
ಚಿನಿವಾರ ಪೇಟೆ: ₹435 ಇಳಿದ ಚಿನ್ನ, ಬೆಳ್ಳಿ ₹1600 ಅಗ್ಗ
ದಿನವೂ ಏರಿಕೆ ದಾಖಲಿಸುತ್ತಿದ್ದ ಚಿನ್ನದ ಬೆಲೆ ಇಂದು ಅಲ್ಪ ಇಳಿಕೆ ಕಂಡಿದೆ. ಬೆಳ್ಳಿ ದರವೂ ಕೂಡ ಮಾರುಕಟ್ಟೆಯಲ್ಲಿ ಇಳಿದಿರುವುದು ಗ್ರಾಹಕರಿಗೆ ತುಸು ಲಾಭ ತಂದಿತು.
ಚಿನಿವಾರ ಪೇಟೆ
ಇನ್ನು ಬೆಳ್ಳಿ ಕೂಡ ಪ್ರತಿ ಕೆಜಿಗೆ 1,600 ರೂಪಾಯಿ ಕುಸಿತ ದಾಖಲಿಸಿದೆ. ಈ ಮೂಲಕ ಅದು 54,765 ರೂಪಾಯಿಗಳಿಗೆ ವಹಿವಾಟು ನಡೆಸಿತು. "ಚಿನ್ನದ ಮೇಲಿನ ಹೂಡಿಕೆ ಭಯ ಮತ್ತು ಇಟಿಎಫ್ಗಳ ಹಿಡಿತದಿಂದ ತಪ್ಪಿಸಿಕೊಂಡ ಕಾರಣ ಚಿನ್ನದ ದರದಲ್ಲಿ ಇಳಿಕೆ ಕಂಡಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.
ಓದಿ:6 ದಿನಗಳ ನಷ್ಟದ ಸರಣಿಗೆ ಕೊನೆ.. ಏರಿಕೆಯೊಂದಿಗೆ ಆರಂಭವಾದ ಶೇರು ಸೂಚ್ಯಂಕ