ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಜನರು ಚಿನ್ನದ ಮೇಲೆ ಡಿಜಿಟಲ್ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹೂಡಿಕೆಯನ್ನು ಈಕ್ವಿಟಿಗಳಿಗೆ ಸೀಮಿತಗೊಳಿಸದೆ ಜನ ತಮ್ಮ ಹೂಡಿಕೆಯ ಆಯ್ಕೆಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಅನೇಕರು ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡಲು ಸ್ವಲ್ಪ ಮೊತ್ತವನ್ನು ಮೀಸಲಿಡುತ್ತಿದ್ದಾರೆ.
ಹೀಗೆ ಚಿನ್ನ ಮತ್ತು ಬೆಳ್ಳಿಯಲ್ಲಿ ಹಣ ಹೂಡಬಯಸುವ ಹೂಡಿಕೆದಾರರಿಗೆ, ಮೋತಿಲಾಲ್ ಓಸ್ವಾಲ್ ಮ್ಯೂಚುಯಲ್ ಫಂಡ್ ಇತ್ತೀಚೆಗೆ ಮೋತಿಲಾಲ್ ಓಸ್ವಾಲ್ ಗೋಲ್ಡ್ ಮತ್ತು ಸಿಲ್ವರ್ ಎಕ್ಸಚೇಂಜ್ ಟ್ರೇಡೆಡ್ ಫಂಡ್ಗಳನ್ನು (ಇಟಿಎಫ್) ಬಿಡುಗಡೆ ಮಾಡಿದೆ. ಈ ಯೋಜನೆಯ NFO ನವೆಂಬರ್ 7 ರಂದು ಕೊನೆಗೊಳ್ಳಲಿದೆ. ಅಭಿರುಪ್ ಮುಖರ್ಜಿ ನಿಧಿ ವ್ಯವಸ್ಥಾಪಕರಾಗಿದ್ದು, ಈ NFO ನಲ್ಲಿ ಕನಿಷ್ಠ ಹೂಡಿಕೆಯನ್ನು ರೂ. 500 ಎಂದು ನಿಗದಿಪಡಿಸಲಾಗಿದೆ. ಈ ಯೋಜನೆಯಡಿಯಲ್ಲಿ, ಇತರ ಮ್ಯೂಚುವಲ್ ಫಂಡ್‌ಗಳ ಚಿನ್ನ ಮತ್ತು ಬೆಳ್ಳಿ ಇಟಿಎಫ್‌ಗಳನ್ನು ಸಹ ಇಲ್ಲಿ ಖರೀದಿಸಬಹುದು.
ಚಿನ್ನದ ಹೂಡಿಕೆಯ ಆಯ್ಕೆಗಳಲ್ಲಿ ಐಸಿಐಸಿಐ ಪ್ರುಡೆನ್ಶಿಯಲ್ ಗೋಲ್ಡ್ ಇಟಿಎಫ್, ನಿಪ್ಪಾನ್ ಇಂಡಿಯಾ ಇಟಿಎಫ್ ಗೋಲ್ಡ್ ಬೀಸ್, ಎಸ್‌ಬಿಐ-ಇಟಿಎಫ್ ಗೋಲ್ಡ್, ಕೋಟಕ್ ಗೋಲ್ಡ್ ಇಟಿಎಫ್ ಮತ್ತು ಎಚ್‌ಡಿಎಫ್‌ಸಿ ಗೋಲ್ಡ್ ಇಟಿಎಫ್ ಸೇರಿವೆ. ಬೆಳ್ಳಿಯ ಮೇಲೆ ಹೂಡಿಕೆಗಾಗಿ ಐಸಿಐಸಿಐ ಪ್ರುಡೆನ್ಶಿಯಲ್ ಸಿಲ್ವರ್ ಇಟಿಎಫ್, ನಿಪ್ಪಾನ್ ಇಂಡಿಯಾ ಸಿಲ್ವರ್ ಇಟಿಎಫ್ ಮತ್ತು ಆದಿತ್ಯ ಬಿರ್ಲಾ ಸಿಲ್ವರ್ ಇಟಿಎಫ್ ಮುಂತಾದುವುಗಳನ್ನು ಪರಿಗಣಿಸಬಹುದು.