ಕರ್ನಾಟಕ

karnataka

ತೆರಿಗೆ ಹೊರೆ ತಗ್ಗಿಸಲು, ದೀರ್ಘಾವಧಿ ಹೂಡಿಕೆಗೆ ಇಎಲ್ಎಸ್​ಎಸ್ ಫಂಡ್​ಗಳು ಸಹಕಾರಿ

ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ಸ್​ಗಳನ್ನು ಮ್ಯೂಚುಯಲ್ ಫಂಡ್​ಗಳು ಅಂತಾನೂ ಕರೆಯಲಾಗುತ್ತಿದೆ. ಷೇರು ಮಾರುಕಟ್ಟೆಯಲ್ಲಿ ದೀರ್ಘಾವಧಿಯ ಹೂಡಿಕೆಯ ಜತೆಗೆ ಹಣಕಾಸಿನ ಗುರಿಗಳನ್ನು ಸಾಧಿಸಲು ಇಎಲ್ಎಸ್​ಎಸ್ ಬಹಳ ಪ್ರಯೋಜನಕಾರಿ ಮಾರ್ಗವಾಗಿದೆ. ನಾವು 2022-23 ನೇ ಸಾಲಿನ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿದ್ದೇವೆ. ನಿಮ್ಮ ತೆರಿಗೆ ಹೊರೆ ಕಡಿಮೆ ಮಾಡಲು ಹಲವು ಆಯ್ಕೆಗಳು ಈಗ ಹಣಕಾಸು ಮಾರುಕಟ್ಟೆಯಲ್ಲಿ ಲಭ್ಯವಿದೆ.

By

Published : Jan 13, 2023, 9:19 PM IST

Published : Jan 13, 2023, 9:19 PM IST

ELSS to reduce tax burden
ತೆರಿಗೆ ಹೊರೆ ತಗ್ಗಿಸಲು ಇಎಲ್ಎಸ್​ಎಸ್

ಹೈದರಾಬಾದ್​: ತೆರಿಗೆ ಉಳಿತಾಯ ಮಾಡಲು ಈಗ ಸೂಕ್ತ ಕಾಲ. ನಿಮ್ಮ ಆದಾಯದ ಕೆಲ ಬಾಗ ತೆರಿಗೆ ಉಳಿಸಿ, ಮುಂದಿನ ಭವಿಷ್ಯಕ್ಕೂ ಕಾಪಿಡಲು ಹೂಡಿಕೆ ಮಾಡುವುದು ಅಗತ್ಯ. ಅದಕ್ಕೀಗ ಈ ಸಮಯ ಸಕಾಲವೂ ಹೌದು. ನಾವೀಗ 2022-23 ವಿತ್ತೀಯ ವರ್ಷದ ಕೊನೆಯ ತ್ರೈಮಾಸಿಕದಲ್ಲಿದ್ದು, ತೆರಿಗೆ ಹೊರೆ ತಗ್ಗಿಸುವುದಕ್ಕಾಗಿ ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ಸ್ (ELSS) ಫಂಡ್​ಗಳು ಲಭ್ಯ ಇವೆ.

ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ಸ್ (ELSS) ಕೂಡಾ ಉಳಿತಾಯದ ಒಂದು ಮಹತ್ವದ ಯೋಜನೆಯ ಒಂದು ಭಾಗ. ಷೇರು ಮಾರುಕಟ್ಟೆಯಲ್ಲಿ ಈ ಮೂಲಕ ಲಾಭದಾಯಕ ಹೂಡಿಕೆಗಳನ್ನು ಮಾಡಬಹುದು. ಹಣಕಾಸಿನ ಗುರಿಗಳನ್ನು ಸಾಧಿಸುವಾಗ ದೀರ್ಘಾವಧಿಯ ಹೂಡಿಕೆ ಮಾಡುವುದು ಅಗತ್ಯವಾಗಿರುತ್ತದೆ. ಹಣಕಾಸು ಯೋಜನೆಯಲ್ಲಿ ಪ್ರಮುಖ ಗುರಿಗಳಲ್ಲಿ ಒಂದು ಎಂದರೆ ಅದು ತೆರಿಗೆ ಉಳಿತಾಯ. ನೆನಪಿನಲ್ಲಿಡಬೇಕಾದ ಹಾಗೂ ಮೊದಲು ಮಾಡಬೇಕಾಗಿರುವ ಕೆಲಸ ಎಂದರೆ ಶಿಸ್ತು ಬದ್ಧ ಹೂಡಿಕೆ ಹಾಗೂ ಯೋಜನಾಬದ್ಧ ಉಳಿತಾಯ. ಇದು ಆರ್ಥಿಕ ವರ್ಷದ ಮೊದಲ ತಿಂಗಳಿನಿಂದ ಪ್ರಾರಂಭವಾಗಬೇಕು.

ಆದಾಗ್ಯೂ, ಹೆಚ್ಚಿನ ಜನರು ನಾಲ್ಕನೇ ಮತ್ತು ಕೊನೆಯ ತ್ರೈಮಾಸಿಕದಲ್ಲಿ ಅಂದರೆ ಜನವರಿಯ ನಂತರವೇ ಆ ಬಗ್ಗೆ ಯೋಚಿಸುತ್ತಾರೆ. ಇಂತಹ ಸಮಯದಲ್ಲಿ ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಸಮಯವು ತುಂಬಾ ಸೀಮಿತವಾಗಿದ್ದರೂ ನೀವು ಸರಿಯಾದ ಯೋಜನೆಯನ್ನು ಆರಿಸಿಕೊಳ್ಳಬೇಕು. ಹೀಗೆ ಮಾಡಿದಲ್ಲಿ ನೀವು ಗಣನೀಯ ತೆರಿಗೆ ಪ್ರಯೋಜನ ಪಡೆಯಬಹುದು. ಆದರೆ ಈ ಬಗ್ಗೆ ತಿಳಿವಳಿಕೆ ಅತಿ ಮುಖ್ಯ.

ಇತರ ಯೋಜನೆಗಳಿಗೆ ಹೋಲಿಸಿದರೆ ELSS ಗಳು ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ನೀಡುತ್ತವೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ELSS ನಲ್ಲಿ ಮಾಡಿದ ಹೂಡಿಕೆಗೆ ತೆರಿಗೆಯಿಂದ ವಿನಾಯಿತಿ ಸಿಗುತ್ತದೆ. ವರ್ಷಕ್ಕೆ ಸುಮಾರು ಒಂದೂವರೆ ಲಕ್ಷದಷ್ಟು ಹೂಡಿಕೆ ಮಾಡಬಹುದು. ಇದು ಗರಿಷ್ಠ ಮಿತಿಯಾಗಿದೆ. ಈ ಮೇಲಿನ ಹೂಡಿಕೆಗೆ ತೆರಿಗೆ ಉಳಿತಾಯದ ಪ್ರಯೋಜನ ದೊರೆಯುವುದಿಲ್ಲ. ELSS ಗಳು ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ ಯೋಜನೆಗಳಂತೆ ಕಾರ್ಯನಿರ್ವಹಿಸುತ್ತವೆ.

ಪರಿಗಣಿಸಬೇಕಾದ ಕೆಲವು ಅಂಶಗಳೇನು?: ಇಎಲ್‌ಎಸ್‌ಎಸ್‌ಗಳಿಗೆ ಹೂಡಿಕೆಯನ್ನು ಕನಿಷ್ಠ ಮೂರು ವರ್ಷಗಳವರೆಗೆ ಮಾಡಬೇಕಾಗುತ್ತದೆ. ಹಾಗಾದರೆ ಮಾತ್ರ ಇದರಲ್ಲಿ ನಿಮಗೆ ವಿನಾಯಿತಿ ದೊರೆಯುತ್ತದೆ. ಇನ್ನು ಸೀಮಿತ ಮೊತ್ತದವರೆಗೆ ಮಾತ್ರವೇ ತೆರಿಗೆ ವಿನಾಯಿತಿ ಲಭ್ಯವಿದೆ. 3 ವರ್ಷಗಳ ಲಾಕ್-ಇನ್ ಅವಧಿಯ ನಂತರ ELSS ಗಳು ಸುಲಭವಾಗಿ ನಿಮ್ಮ ಹಣವನ್ನು ಯಾವಾಗ ಬೇಕಾದರೂ ಮರಳಿ ಪಡೆಯಬಹುದು.

ಈ ELSS ಯೋಜನೆಗಳ ಅಡಿ ನೀವು ಒಂದು ದೊಡ್ಡ ಮೊತ್ತದ ಅಥವಾ ಹಂತ ಹಂತ ವಿಧಾನ ಮೂಲಕ ಹೂಡಿಕೆ ಮಾಡಬಹುದು. ಈಕ್ವಿಟಿಗಳಲ್ಲಿನ ಹೂಡಿಕೆಯನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಮುಂದುವರಿಸಿದಾಗ ಮತ್ತು ಆ ಹಣಕಾಸು ವರ್ಷದಲ್ಲಿ ಆದಾಯವು ರೂ 1 ಲಕ್ಷ ಮೀರಿದಾಗ, ಹೆಚ್ಚುವರಿ ಆದಾಯದ ಮೇಲೆ ಶೇ10 ಪ್ರತಿಶತ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ಅಂಶ ನಿಮ್ಮ ಗಮನದಲ್ಲಿರಬೇಕು.

ಸರಿಯಾದ ಮಾರ್ಗದಲ್ಲಿ ಹೂಡಿಕೆ ಮಾಡುವುದು ಅವಶ್ಯಕ:ಸಾಮಾನ್ಯವಾಗಿ ಇತರ ತೆರಿಗೆ - ಉಳಿತಾಯ ಯೋಜನೆಗಳಿಗೆ ಲಾಕ್-ಇನ್ ಅವಧಿ ಐದು ವರ್ಷಗಳು ಇರುತ್ತದೆ. ಇವುಗಳಿಗೆ ಹೋಲಿಸಿದರೆ ELSS ನ ಲಾಕ್-ಇನ್ ಕೇವಲ ಮೂರು ವರ್ಷಗಳಾಗಿವೆ. ನೀವು ಕಡಿಮೆ ಅವಧಿಯ ಯೋಜನೆಗಳನ್ನು ಬಯಸಿದರೆ ತೆರಿಗೆ ವಿನಾಯಿತಿಗಾಗಿ ನೀವು ಇವುಗಳನ್ನು ಆರಿಸಿಕೊಳ್ಳಬಹುದು. ಸಿಪ್​ ಅಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ಮೂಲಕ ಹಣ ತೊಡಗಿಸಬಹುದು.

ELSS ಹೂಡಿಕೆಗಳನ್ನು ಮೂರು ವರ್ಷಗಳ ನಂತರ ಹಿಂಪಡೆಯಬಹುದು. ಅಥವಾ ಮುಂದುವರಿಸಬಹುದು. ಮೊದಲ ತಿಂಗಳ SIP ಮೊತ್ತವನ್ನು ಯಾವುದೇ ಹೆಚ್ಚುವರಿ ಹೊರೆಯಿಲ್ಲದೇ ಮೂರು ವರ್ಷಗಳ ಅವಧಿ ಮುಗಿದ ನಂತರ ಹಿಂಪಡೆಯಬಹುದು ಮತ್ತು ಮರು ಹೂಡಿಕೆ ಮಾಡಬಹುದು. ಈ ರೀತಿಯಾಗಿ ಹೂಡಿಕೆಯ ಚಕ್ರವು ಮುಂದುವರಿಯುತ್ತದೆ. ELSS ಸ್ಕೀಮ್‌ಗಳ ವ್ಯವಸ್ಥಾಪಕರು, ದೀರ್ಘಾವಧಿಯ ಷೇರುಗಳಲ್ಲಿ ಹೂಡಿಕೆ ಮಾಡುತ್ತಾರೆ. ಹೀಗಾಗಿ, ಸ್ಥಿರ ಆದಾಯವನ್ನು ಪಡೆಯುವ ಸಾಧ್ಯತೆಗಳು ಹೆಚ್ಚು.

ಇದನ್ನೂಓದಿ:ಮಾರಾಟ ತೆರಿಗೆ ಇಲಾಖೆ ನೋಟಿಸ್​ಗಳ​ ವಿರುದ್ಧ ಹೈಕೋರ್ಟ್​ ಮೊರೆ ಹೋದ ನಟಿ ಅನುಷ್ಕಾ ಶರ್ಮಾ

ABOUT THE AUTHOR

...view details