ಹೈದರಾಬಾದ್: ಭಾರತದಲ್ಲಿ ಸಾಮಾನ್ಯವಾಗಿ ವಿಮೆ ಮಾಡಿಸುವುದು ಸ್ವಲ್ಪ ಕಡಿಮೆಯೇ ಇದೆ. ಇದಕ್ಕೆ ಮುಖ್ಯ ಕಾರಣ ತಿಳಿವಳಿಕೆಯ ಕೊರತೆ ಕಾರಣ. ಅನಿರೀಕ್ಷಿತ ಅಪಘಾತಗಳ ಸಂದರ್ಭದಲ್ಲಿ ಒಬ್ಬ ವ್ಯಕ್ತಿಗೆ ಆರ್ಥಿಕ ರಕ್ಷಣೆ ನೀಡಲು ಹಲವು ನೀತಿಗಳಿವೆ. ಆರೋಗ್ಯ ವಿಮೆ ತೆಗೆದುಕೊಳ್ಳುವಾಗ, ಯಾವಾಗಲೂ ನಗದು ರಹಿತ ಕ್ಲೈಮ್‌ಗೆ ಹೋಗುವುದೇ ಉತ್ತಮ. ಅದನ್ನು ಹೇಗೆ ಬಳಸುವುದು? ತೊಂದರೆ ತಪ್ಪಿಸಲು ಯಾವ ಮುನ್ನೆಚ್ಚರಿಕೆಗಳ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.
ಆರೋಗ್ಯ ವಿಮಾ ಪಾಲಿಸಿಗಳಲ್ಲಿನ ಕ್ಲೈಮ್‌ಗಳು ಸಾಮಾನ್ಯವಾಗಿ ಎರಡು ವಿಧಗಳಾಗಿವೆ. ಮೊದಲನೆಯದು ವಿಮಾ ಕಂಪನಿ ಗುರುತಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು. ಇದು ಪಾಲಿಸಿದಾರರಿಗೆ ಯಾವುದೇ ಖರ್ಚು ಉಂಟು ಮಾಡುವುದಿಲ್ಲ. ಇದನ್ನೇ ನಗದು ರಹಿತ ಚಿಕಿತ್ಸೆ ಎನ್ನುತ್ತಾರೆ. ಆಸ್ಪತ್ರೆಯವರು ಪಾಲಿಸಿಯ ಒಟ್ಟು ಮೊತ್ತದಲ್ಲೇ ನಿಮ್ಮ ವೆಚ್ಚವನ್ನು ಭರಿಸುತ್ತದೆ. ಎರಡನೆಯ ವಿಧಾನವು ಚಿಕಿತ್ಸೆಯ ವೆಚ್ಚವನ್ನು ಮುಂಗಡವಾಗಿ ನಾವೇ ಪಾವತಿಸಬೇಕಾಗುತ್ತದೆ. ಆ ನಂತರ ಚಿಕಿತ್ಸೆಯ ಎಲ್ಲ ವೆಚ್ಚದ ಬಿಲ್ಗಳನ್ನು ವಿಮಾ ಕಂಪನಿಗೆ ಸಲ್ಲಿಕೆ ಮಾಡಿ ವಾಪಸ್ ಪಡೆಯುವುದು ಆಗಿರುತ್ತದೆ.
ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ನಿಮ್ಮ ಹತ್ತಿರದ ನೆಟ್‌ವರ್ಕ್ ಆಸ್ಪತ್ರೆ ಹುಡುಕಿ. ನೀವು ಅಲ್ಲಿಗೆ ಹೋದ ನಂತರ ವಿಮಾ ಕಂಪನಿಗೆ ನೀವು ದಾಖಲಾದ ಬಗ್ಗೆ ತಿಳಿಸಿ, ಆಸ್ಪತ್ರೆಗೆ ಭೇಟಿ ನೀಡುವಾಗ ನಿಮ್ಮ ಆರೋಗ್ಯ ವಿಮೆ ಗುರುತಿನ ಚೀಟಿ ಅಥವಾ ನಿಮ್ಮ ಆರೋಗ್ಯ ವಿಮಾ ಪಾಲಿಸಿ ದಾಖಲೆಯನ್ನು ಕೊಂಡೊಯ್ಯಿರಿ. ಸರ್ಕಾರ ನೀಡಿದ ಫೋಟೋ ಗುರುತಿನ ಚೀಟಿ ಆ ಸಮಯದಲ್ಲಿ ನಿಮ್ಮ ಬಳಿ ಇಟ್ಟುಕೊಂಡಿರುವುದು ಕಡ್ಡಾಯವಾಗಿದೆ.
ಸಹಾಯಕ್ಕಾಗಿ ಪ್ರತ್ಯೇಕ ವಿಭಾಗ:ಸಾಮಾನ್ಯವಾಗಿ ಪ್ರತಿ ಆಸ್ಪತ್ರೆಯು ವಿಮಾ ಪಾಲಿಸಿಗಳಿಗಾಗಿ ಪ್ರತ್ಯೇಕ ವಿಭಾಗವನ್ನು ಹೊಂದಿರುತ್ತದೆ. ನಿಮ್ಮ ಕ್ಲೈಮ್ ಪ್ರಕ್ರಿಯೆಯಲ್ಲಿ ಅವರು ನಿಮಗೆ ಸಂಪೂರ್ಣವಾಗಿ ಸಹಾಯ ಮಾಡುತ್ತಾರೆ. ಕೆಲವು ಆಸ್ಪತ್ರೆಗಳು ವಿಮಾ ಕಂಪನಿ ಅಥವಾ ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್ (TPA) ಪ್ರತಿನಿಧಿಗಳನ್ನು ಸಹ ಹೊಂದಿವೆ.