ನವದೆಹಲಿ: ದೇಶದಲ್ಲಿ ಹಣದುಬ್ಬರ, ಆಹಾರ ಸಾಮಗ್ರಿಗಳ ಬೆಲೆಗಳು ಏರಿಕೆಯಾಗುತ್ತಿರುವ ಮಧ್ಯೆಯೇ ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಅನೇಕ ಕ್ರಮ ಜಾರಿ ಮಾಡುತ್ತಿದೆ. ಇದರ ಭಾಗವಾಗಿ ವಿದೇಶಗಳಿಗೆ ಗೋಧಿ ರಫ್ತು ಮಾಡುವುದನ್ನು ನಿರ್ಬಂಧಿಸಿದೆ. ಹೀಗಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿಗೆ ಬಂಗಾರದ ಬೆಲೆ ಬಂದಿದೆ.
ಗೋಧಿ ರಫ್ತಿನ ಮೇಲೆ ಭಾರತದ ನಿಷೇಧ ಮತ್ತು ಉಕ್ರೇನ್ - ರಷ್ಯಾ ನಡುವಿನ ಯುದ್ಧ ಭೀತಿಯಿಂದಾಗಿ ಉತ್ಪಾದನೆಯಲ್ಲಿ ಕುಸಿತದ ಭೀತಿ ಎದುರಾಗಿದ್ದು, ಹೀಗಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಜಿಗಿತಕ್ಕೆ ಕಾರಣವಾಗಿದೆ ಎಂದು ವಿಶ್ವಸಂಸ್ಥೆ ಆಹಾರ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.