ನವದೆಹಲಿ:ವಿಶ್ವದ ಎಲ್ಲ ರಾಷ್ಟ್ರಗಳು ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿರುವ ಮಧ್ಯೆಯೇ ಕಚ್ಚಾತೈಲ ದರ ಪ್ರತಿ ಬ್ಯಾರಲ್ಗೆ 96.09 ಡಾಲರ್ಗೆ ಕುಸಿತ ಕಂಡಿದೆ. ಜಾಗತಿಕ ಮಟ್ಟದಲ್ಲಿ ಬೇಡಿಕೆ ಕ್ಷೀಣಿಸಿದ ಕಾರಣಕ್ಕಾಗಿ ಕಚ್ಚಾ ತೈಲ ಬೆಲೆ ಮೂರು ತಿಂಗಳ ಕನಿಷ್ಠಕ್ಕೆ ಕುಸಿದಿದೆ.
ಕಳೆದ 3 ತಿಂಗಳಲ್ಲಿ ಕಚ್ಚಾ ತೈಲ ಬೆಲೆ ಈ ಮಟ್ಟಕ್ಕೆ ಕುಸಿದಿರುವುದು ಇದೇ ಮೊದಲಾಗಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲವನ್ನು ಪ್ರತಿ ಬ್ಯಾರೆಲ್ಗೆ 96.09 ಡಾಲರ್ಗೆ ವ್ಯಾಪಾರ ನಡೆಸಿದೆ. ಇದು ಆರ್ಥಿಕ ಹೊಡೆತಕ್ಕೀಡಾದ ರಾಷ್ಟ್ರಗಳಿಗೆ ನೆರವಾಗಲಿದೆ.
ಉಕ್ರೇನ್ ಮತ್ತು ರಷ್ಯಾ ನಡುವೆ ಸಂಘರ್ಷ ಶುರುವಾದ ಬಳಿಕ ತೈಲ ಪೂರೈಕೆಗೆ ತೊಂದರೆ ಉಂಟಾಗಿತ್ತು. ಅತಿ ದೊಡ್ಡ ತೈಲ ಪೂರೈಕೆ ರಾಷ್ಟ್ರವಾದ ರಷ್ಯಾದ ಮೇಲೆ ಅಮೆರಿಕ ಸೇರದಂತೆ ಯುರೋಪಿಯನ್ ರಾಷ್ಟ್ರಗಳು ಅದರ ಕಚ್ಚಾ ತೈಲದ ಖರೀದಿಯ ಮೇಲೆ ನಿರ್ಬಂಧ ಹೇರಲಾಗಿತ್ತು. ಇದು ಕಚ್ಚಾ ತೈಲ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳಲ್ಲಿ ತ್ವರಿತ ಏರಿಕೆಗೆ ಕಾರಣವಾಗಿತ್ತು.