ಕರ್ನಾಟಕ

karnataka

ETV Bharat / business

ಪುರುಷ - ಮಹಿಳೆಯರ ಉದ್ಯೋಗ ಅಸಮಾನತೆಗೆ ಲಿಂಗ ತಾರತಮ್ಯವೇ ಕಾರಣ - ಆಕ್ಸ್​ಫಾಮ್​ನ ಹೊಸ ವರದಿ

ಆಕ್ಸ್‌ಫ್ಯಾಮ್ ಇಂಡಿಯಾದ ಭಾರತೀಯ ತಾರತಮ್ಯ ವರದಿ 2022 ರ ಪ್ರಕಾರ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮಾರುಕಟ್ಟೆಯಲ್ಲಿ 100 ಪ್ರತಿಶತದಷ್ಟು ಮತ್ತು ನಗರ ಪ್ರದೇಶಗಳಲ್ಲಿ 98 ಪ್ರತಿಶತದಷ್ಟು ಉದ್ಯೋಗ ಅಸಮಾನತೆಗೆ ತಾರತಮ್ಯವೇ ಕಾರಣವಾಗುತ್ತಿದೆ.

ಪುರುಷ-ಮಹಿಳೆಯರ ಉದ್ಯೋಗ ಅಸಮಾನತೆಗೆ ಲಿಂಗ ತಾರತಮ್ಯವೇ ಕಾರಣ
gender-discrimination-is-the-reason

By

Published : Sep 15, 2022, 5:27 PM IST

ನವದೆಹಲಿ: ಉದ್ಯೋಗಸ್ಥ ಪುರುಷ ಮತ್ತು ಮಹಿಳೆಯರ ಸಂಖ್ಯೆಯಲ್ಲಿನ ಅಂತರಕ್ಕೆ ಲಿಂಗ ತಾರತಮ್ಯವೇ ಶೇ 98ರಷ್ಟು ಕಾರಣ ಎಂದು ಆಕ್ಸ್​ಫಾಮ್​ನ ಹೊಸ ವರದಿಯಲ್ಲಿ ಹೇಳಲಾಗಿದೆ. ಪುರುಷರಷ್ಟೇ ವಿದ್ಯಾರ್ಹತೆ ಮತ್ತು ಕೆಲಸದ ಅನುಭವ ಹೊಂದಿದ್ದರೂ ಭಾರತದಲ್ಲಿ ಸಾಮಾಜಿಕ ಕಾರಣಗಳು ಮತ್ತು ಉದ್ಯೋಗದಾತ ಕಂಪನಿಗಳ ಪೂರ್ವಗ್ರಹದಿಂದ ಮಹಿಳೆಯರು ತಾರತಮ್ಯ ಎದುರಿಸುತ್ತಿದ್ದಾರೆ ಎಂದು ವರದಿಯು ಗಮನ ಸೆಳೆದಿದೆ.

ಆಕ್ಸ್‌ಫ್ಯಾಮ್ ಇಂಡಿಯಾದ ಭಾರತೀಯ ತಾರತಮ್ಯ ವರದಿ 2022 ರ ಪ್ರಕಾರ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮಾರುಕಟ್ಟೆಯಲ್ಲಿ 100 ಪ್ರತಿಶತದಷ್ಟು ಮತ್ತು ನಗರ ಪ್ರದೇಶಗಳಲ್ಲಿ 98 ಪ್ರತಿಶತದಷ್ಟು ಉದ್ಯೋಗ ಅಸಮಾನತೆಗೆ ತಾರತಮ್ಯ ಕಾರಣವಾಗುತ್ತಿದೆ.

ಸ್ವಯಂ ಉದ್ಯೋಗಿ ಪುರುಷರು ಮಹಿಳೆಯರಿಗಿಂತ ಎರಡೂವರೆ ಪಟ್ಟು ಹೆಚ್ಚು ಗಳಿಸುತ್ತಾರೆ. ಈ ತಾರತಮ್ಯಕ್ಕೆ ಶೇ 83 ರಷ್ಟು ಲಿಂಗ ತಾರತಮ್ಯ ಮತ್ತು ಶೇ 95 ರಷ್ಟು ಗಳಿಕೆಯಲ್ಲಿನ ವ್ಯತ್ಯಾಸಗಳು ಕಾರಣ ಎಂದು ತಿಳಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಗಳಿಸುವುದಕ್ಕಿಂತ ದುಪ್ಪಟ್ಟು ಆದಾಯವನ್ನು ಸ್ವಯಂ ಉದ್ಯೋಗಿ ಪುರುಷರು ಗಳಿಸುತ್ತಾರೆ. ಪುರುಷ ಸಾಂದರ್ಭಿಕ ಕಾರ್ಮಿಕರು ಮಹಿಳೆಯರಿಗಿಂತ ತಿಂಗಳಿಗೆ 3,000 ರೂ. ಹೆಚ್ಚು ಗಳಿಸುತ್ತಾರೆ. ಇದಕ್ಕೆ ಶೇ 96 ರಷ್ಟು ಲಿಂಗ ತಾರತಮ್ಯವೇ ಕಾರಣವಾಗಿದೆ.

ಎಲ್ಲ ಮಹಿಳೆಯರಿಗೆ ಸಮಾನ ವೇತನ ಮತ್ತು ಕೆಲಸ ಮಾಡುವ ರಕ್ಷಣೆ ಮತ್ತು ಹಕ್ಕಿಗಾಗಿ ಪರಿಣಾಮಕಾರಿ ಕ್ರಮಗಳನ್ನು ಸಕ್ರಿಯವಾಗಿ ಜಾರಿಗೊಳಿಸಲು ಆಕ್ಸ್‌ಫ್ಯಾಮ್ ಇಂಡಿಯಾ ಸರ್ಕಾರಕ್ಕೆ ಕರೆ ನೀಡಿದೆ. ಭಾರತ ಸರ್ಕಾರವು ವೇತನದಲ್ಲಿ ಹೆಚ್ಚಳ, ಕೌಶಲ್ಯ ಹೆಚ್ಚಿಸುವುದು, ಉದ್ಯೋಗ ಮೀಸಲಾತಿಗಳು ಮತ್ತು ಹೆರಿಗೆಯ ನಂತರ ಸುಲಭವಾಗಿ ಕೆಲಸಕ್ಕೆ ಮರಳುವ ಆಯ್ಕೆಗಳು ಸೇರಿದಂತೆ ಉದ್ಯೋಗಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಬೇಕು ಎಂದು ವರದಿ ಹೇಳಿದೆ.

ABOUT THE AUTHOR

...view details