ನವದೆಹಲಿ: 2021-22ರ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿಯು ಶೇ.4.1ರಷ್ಟು ಏರಿಕೆಯಾಗಿದೆ. ಇದರಿಂದ ಈ ವಾರ್ಷಿಕದಲ್ಲಿ ಆರ್ಥಿಕ ಬೆಳವಣಿಗೆಯ ದರ ಶೇ.8.7ಕ್ಕೆ ತಲುಪಿದೆ. ಇದರ ಹಿಂದಿನ ತ್ರೈಮಾಸಿಕದಲ್ಲಿ ಶೇ.5.4ರಷ್ಟು ಏರಿಕೆಯಾಗಿತ್ತು.
ಮಂಗಳವಾರ ಬಿಡುಗಡೆಯಾದ ರಾಷ್ಟ್ರೀಯ ಅಂಕಿ-ಅಂಶಗಳ ಮಾಹಿತಿಯ ಪ್ರಕಾರ, 2020-21ರ ಜನವರಿ-ಮಾರ್ಚ್ ಅವಧಿಯಲ್ಲಿ ಒಟ್ಟು ಜಿಡಿಪಿ ಶೇ.2.5ರಷ್ಟು ವಿಸ್ತರಿಸಿದೆ. ಕಳೆದ 2020-21ರಲ್ಲಿ ಜಿಡಿಪಿ ಶೇ.6.6ರಷ್ಟು ಇತ್ತು.