ಕರ್ನಾಟಕ

karnataka

ETV Bharat / business

ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ಕರೆನ್ಸಿ ಕಾರ್ಯಾರಂಭ ಶೀಘ್ರ: ಆರ್​ಬಿಐ - ಸಿಬಿಡಿಸಿ ಪ್ರಯೋಗದ ರಿಟೇಲ್ ಹಂತ

ಸಿಬಿಡಿಸಿ ಪ್ರಯೋಗದ ರಿಟೇಲ್ ಹಂತವನ್ನು ಈ ತಿಂಗಳ ಕೊನೆಯಲ್ಲಿ ಪ್ರಾರಂಭಿಸಲಾಗುವುದು. ಒಟ್ಟಾರೆಯಾಗಿ ಸಿಬಿಡಿಸಿಯನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗುವುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ಕರೆನ್ಸಿ ಕಾರ್ಯಾರಂಭ ಶೀಘ್ರ: ಆರ್​ಬಿಐ
rbi-governor-shaktikanta-das-on-launching-of-digital-currency

By

Published : Nov 2, 2022, 12:55 PM IST

ನವದೆಹಲಿ:ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. ಅದು ತನ್ನ ವ್ಯಾಪಕ ಆರ್ಥಿಕ ಮೂಲಭೂತ ಮತ್ತು ಬಫರ್‌ಗಳಿಂದ ಬಲ ಪಡೆಯುತ್ತಿದೆ. ಐಎಂಎಫ್ ಪ್ರಕಾರ, ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ನಾವು ಹಣದುಬ್ಬರದ ಮೇಲೆ ಅರ್ಜುನ ಬಾಣದಿಂದ ಗುರಿ ಇಟ್ಟಂತೆ ನಿರಂತರ ನಿಗಾ ವಹಿಸಿದ್ದೇವೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ನಾವು ಮುಂದಿನ ದಿನಗಳಲ್ಲಿ ಸಿಬಿಡಿಸಿ (Central Bank Digital Currency -CBDC) (ಡಿಜಿಟಲ್ ಕರೆನ್ಸಿ) ಯನ್ನು ಸಂಪೂರ್ಣವಾಗಿ ಪ್ರಾರಂಭಿಸಲು ಪ್ರಯತ್ನಿಸುತ್ತೇವೆ. ಸಿಬಿಡಿಸಿ ಪ್ರಯೋಗದ ರಿಟೇಲ್ ಹಂತವನ್ನು ಈ ತಿಂಗಳ ಕೊನೆಯಲ್ಲಿ ಪ್ರಾರಂಭಿಸಲಾಗುವುದು. ಒಟ್ಟಾರೆಯಾಗಿ ಸಿಬಿಡಿಸಿಯನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗುವುದು. ಆದರೆ ಇದು ಬಹಳ ಎಚ್ಚರಿಕೆಯಿಂದ ಮುಂದುವರಿಯಬೇಕಾದ ವಿಷಯವಾಗಿದೆ ಎಂದು ಅವರು ನುಡಿದರು.

ನಿನ್ನೆ ನಾವು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಯೋಜನೆಯನ್ನು ಪರೀಕ್ಷಿಸಲು ಪ್ರಾರಂಭಿಸಿದ್ದೇವೆ. ಇಡೀ ಆರ್ಥಿಕತೆಯ ಕಾರ್ಯಚಟುವಟಿಕೆಗೆ ಸಂಬಂಧಿಸಿದಂತೆ ಇದು ಐತಿಹಾಸಿಕ ಸಾಧನೆಯಾಗಿದೆ. ಈ ಉಪಕ್ರಮವನ್ನು ಕೈಗೊಂಡಿರುವ ವಿಶ್ವದ ಕೆಲವೇ ಕೇಂದ್ರೀಯ ಬ್ಯಾಂಕುಗಳಲ್ಲಿ ರಿಸರ್ವ್ ಬ್ಯಾಂಕ್ ಒಂದಾಗಿದೆ ಎಂದು ಶಕ್ತಿಕಾಂತ್ ದಾಸ್ ಬಣ್ಣಿಸಿದರು.

ಇದನ್ನೂ ಓದಿ: ಡಿಜಿಟಲ್​ ರೂಪಾಯಿ ಎಂದರೇನು? ಅದರ ಕಾರ್ಯನಿರ್ವಹಣೆ ಹೇಗಿರುತ್ತೆ.. ಇಲ್ಲಿದೆ ಉಪಯುಕ್ತ ಮಾಹಿತಿ!

ABOUT THE AUTHOR

...view details