ನವದೆಹಲಿ:2022 ನೇ ವರ್ಷಕ್ಕಾಗಿ ಫಾರ್ಚೂನ್ ಮ್ಯಾಗಜೀನ್ ಪ್ರಕಟಿಸಿದ ಇತ್ತೀಚಿನ ಜಾಗತಿಕ 500 ಕಂಪನಿಗಳ ಪಟ್ಟಿಯಲ್ಲಿ ಭಾರತದ ಖಾಸಗಿ ವಲಯದ ಕಂಪನಿಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಉನ್ನತ ಶ್ರೇಣಿಯನ್ನು ಕಾಯ್ದುಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಹಿಂದಿನ ವರ್ಷದ 155ನೇ ಶ್ರೇಯಾಂಕದಿಂದ 104 ನೇ ತನ್ನ ಶ್ರೇಯಾಂಕಕ್ಕೆ ಜಿಗಿದಿದೆ. ಇದು ಶ್ರೇಯಾಂಕ ಪಟ್ಟಿಯಲ್ಲಿ 51 ಸ್ಥಾನಗಳ ಏರಿಕೆಯಾಗಿದೆ.
ಐದು ಸಾರ್ವಜನಿಕ ವಲಯ ಮತ್ತು ನಾಲ್ಕು ಖಾಸಗಿ ವಲಯದ ಕಂಪನಿಗಳು ಸೇರಿ ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ಭಾರತದ ಒಂಬತ್ತು ಕಂಪನಿಗಳಿವೆ. ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮಾತ್ರ ಇದೇ ಮೊದಲ ಬಾರಿಗೆ ಪಟ್ಟಿಗೆ ಸೇರ್ಪಡೆಯಾಗಿದೆ. ಈ ವರ್ಷದ ಆರಂಭದಲ್ಲಿ ಐಪಿಓ ಜಾರಿ ಮಾಡಿದ್ದ ಸಾರ್ವಜನಿಕ ವಲಯದ ಕಂಪನಿಯಾಗಿರುವ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ, ಈ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ಗೂ ಮೇಲಿನ ಶ್ರೇಯಾಂಕದಲ್ಲಿ ಅಂದರೆ 98ನೇ ಸ್ಥಾನದಲ್ಲಿದೆ.