ಹೈದರಾಬಾದ್:ನೀವು ಆದಾಯ ತೆರಿಗೆಯನ್ನು ಪಾವತಿಸಿದ್ದೀರಾ? ಒಂದು ವೇಳೆ ನೀವು ಕಟ್ಟಬೇಕಾದ ತೆರಿಗೆಗಿಂತ ಹೆಚ್ಚಿನ ಹಣವನ್ನು ಪಾವತಿ ಮಾಡಿದ್ದರೆ, ಸೂಕ್ತವಾದ ರಿಟರ್ನ್‌ಗಳನ್ನು ಸಲ್ಲಿಸಿದ್ದರೆ, ನೀವು ಆ ಹಣವನ್ನು ರಿಫಂಡ್ ಮಾಡಿಕೊಳ್ಳಲು ಅರ್ಹರಾಗಿರುತ್ತೀರಿ. ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2020-21ರಲ್ಲಿ (2021-22 ಮೌಲ್ಯಮಾಪನ ವರ್ಷ) ಅನೇಕ ಮಂದಿ ತಮ್ಮ ರಿಟರ್ನ್‌ಗಳನ್ನು ಸಲ್ಲಿಸಿದ್ದಾರೆ ಮತ್ತು ಜೊತೆಗೆ ರಿಫಂಡ್ ಕೂಡಾ ಪಡೆದುಕೊಂಡಿರುತ್ತಾರೆ. ಆದರೆ ಕೆಲವರು ತಾಂತ್ರಿಕ ದೋಷಗಳಿಂದ ರಿಫಂಡ್ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವು ರಿಫಂಡ್ ಪಡೆದುಕೊಳ್ಳಲು ಸಾಧ್ಯವಾಗದಿದ್ದರೆ, ಈ ಕೆಳಗಿನ ಸಲಹೆಗಳನ್ನೊಮ್ಮೆ ನೋಡಿ.
ಆದಾಯ ತೆರಿಗೆ ಬಾಕಿಗಳು:ಹಿಂದಿನ ಮೌಲ್ಯಮಾಪನ ವರ್ಷಗಳಲ್ಲಿ ತೆರಿಗೆ ಬಾಕಿ ಇದ್ದರೆ, ಆದಾಯ ತೆರಿಗೆ ಇಲಾಖೆಯು ನಿಮಗೆ ಹಣವನ್ನು ರಿಫಂಡ್ ಮಾಡಲು ನಿರಾಕರಿಸಬಹುದು. ತೆರಿಗೆ ಪಾವತಿದಾರರಿಗೆ ತೆರಿಗೆ ಬಾಕಿಯಿರುವ ಬಗ್ಗೆ ನೆನಪಿಸುವ ನೋಟಿಸ್ ಅನ್ನು ತೆರಿಗೆ ಇಲಾಖೆ ನೀಡುತ್ತದೆ. ನೀವು ಸಮಯಕ್ಕೆ ಅನುಗುಣವಾಗಿ ನೋಟಿಸ್ಗೆ ಉತ್ತರಿಸಬೇಕಾಗಿರುತ್ತದೆ. ಅಂತಹ ನೋಟಿಸ್ ಅನ್ನು ನೀವು ಎಂದಾದರೂ ಪಡೆದುಕೊಂಡಿದ್ದೀರಾ ಎಂಬ ಬಗ್ಗೆ ಪರಿಶೀಲಿಸಿ, ನಿಮಗೆ ಬಂದ ನೋಟಿಸ್ಗೆ ನೀವು ನೀಡುವ ಉತ್ತರವನ್ನು ಆಧರಿಸಿ, ಆದಾಯ ತೆರಿಗೆ ಇಲಾಖೆ ರಿಫಂಡ್ ಮಾಡಿಕೊಳ್ಳಲು ಸೂಚನೆ ನೀಡುತ್ತದೆ.