ನವದೆಹಲಿ: ಮಾರ್ಚ್ 2022 ರಲ್ಲಿ ಕೊನೆಗೊಂಡ ಹಣಕಾಸು ವರ್ಷದಲ್ಲಿ ಭಾರತೀಯ ಕುಟುಂಬಗಳ ಒಟ್ಟು ಆರ್ಥಿಕ ಉಳಿತಾಯವು ಒಟ್ಟು ರಾಷ್ಟ್ರೀಯ ಆದಾಯದ (ಜಿಎನ್‌ಡಿಐ) ಶೇಕಡಾ 7.6 ಕ್ಕೆ ಇಳಿದಿದೆ. ಕೋವಿಡ್ ಅವಧಿಯಲ್ಲಿ 2020 - 21 ರ ಹಣಕಾಸು ವರ್ಷದಲ್ಲಿ ಭಾರತೀಯ ಕುಟುಂಬಗಳ ಒಟ್ಟು ಆರ್ಥಿಕ ಉಳಿತಾಯ GNDI ಯ 11.3 ಶೇಕಡಾ ಇದ್ದು, ಎರಡಂಕಿಯಲ್ಲಿತ್ತು.
ಭಾರತೀಯ ಕುಟುಂಬಗಳ ಒಟ್ಟು ಆರ್ಥಿಕ ಉಳಿತಾಯವು ಕೈಯಲ್ಲಿರುವ ಕರೆನ್ಸಿ, ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿಗಳು, ಷೇರುಗಳು ಮತ್ತು ಡಿಬೆಂಚರ್‌ಗಳಲ್ಲಿನ ಹೂಡಿಕೆಗಳು, ವಿಮಾ ನಿಧಿಗಳು, ಭವಿಷ್ಯ ನಿಧಿಗಳಲ್ಲಿನ ಹೂಡಿಕೆಗಳು ಮತ್ತು ಠೇವಣಿಗಳು ಮತ್ತು ಪಿಂಚಣಿ ನಿಧಿಗಳು ಮತ್ತು ಸರ್ಕಾರದಿಂದ ಬರಬೇಕಾದ ಬಾಕಿಗಳನ್ನು ಒಳಗೊಂಡಿರುತ್ತದೆ. ಭಾರತೀಯ ಕುಟುಂಬಗಳ ಒಟ್ಟು ಆರ್ಥಿಕ ಉಳಿತಾಯವು ಎರಡು ಕೊರತೆಯ ವಲಯಗಳಿಗೆ ಎರಡು ಪ್ರಮುಖ ನಿಧಿಗಳಿಗೆ ಮೂಲಗಳಾಗಿವೆ. ಅವು ಯಾವು - ಸಾಮಾನ್ಯ ಸರ್ಕಾರಿ ವಲಯ ಮತ್ತು ಹಣಕಾಸೇತರ ಸಂಸ್ಥೆಗಳು.
ಹಣಕಾಸು ವರ್ಷ 2018-19 ರಲ್ಲಿ ಭಾರತೀಯ ಕುಟುಂಬಗಳ ಒಟ್ಟು ಆರ್ಥಿಕ ಉಳಿತಾಯವು ರೂ 22.6 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಇದು ಮುಂದಿನ ಹಣಕಾಸು ವರ್ಷದಲ್ಲಿ ರೂ 23.3 ಲಕ್ಷ ಕೋಟಿಗೆ ಸ್ವಲ್ಪ ಹೆಚ್ಚಾಗಿದೆ. ಕೋವಿಡ್ ಅವಧಿಯಲ್ಲಿ, ಜಾಗತಿಕ ಸಾಂಕ್ರಾಮಿಕ ರೋಗದಿಂದ ಉಂಟಾದ ಅನಿಶ್ಚಿತತೆಯಿಂದಾಗಿ ಜನರು ತಮ್ಮ ಖರ್ಚುಗಳನ್ನು ಮೊಟಕುಗೊಳಿಸಿದ್ದರಿಂದ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕುಟುಂಬಗಳ ಒಟ್ಟು ಆರ್ಥಿಕ ಉಳಿತಾಯವು ಉತ್ತುಂಗದಲ್ಲಿದೆ.
ಇದರ ಪರಿಣಾಮವಾಗಿ 2020-21 ರ ಆರ್ಥಿಕ ವರ್ಷದಲ್ಲಿ ಭಾರತೀಯ ಕುಟುಂಬಗಳ ಒಟ್ಟು ಕುಟುಂಬ ಉಳಿತಾಯವು 30.6 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿತ್ತು. ಆದಾಗ್ಯೂ, ಕೋವಿಡ್ ಪ್ರೇರಿತ ಅನಿಶ್ಚಿತತೆಯ ಮೋಡಗಳು ಕಡಿಮೆಯಾಗುತ್ತಿದ್ದಂತೆ ಮತ್ತು ಭಾರತೀಯ ಕುಟುಂಬಗಳ ಹಣದ ಹರಿವು ಸುಧಾರಿಸಿದಂತೆ ಭಾರತೀಯ ಕುಟುಂಬಗಳ ಉಳಿತಾಯದ ನಡವಳಿಕೆ ಬದಲಾಯಿತು ಮತ್ತು ಒಟ್ಟು ಆರ್ಥಿಕ ಉಳಿತಾಯವು 26 ಲಕ್ಷ ಕೋಟಿ ರೂ.ಗೆ ಕುಸಿಯಿತು. ಇದು ಶೇಕಡಾ 3.7 ರಷ್ಟು ಇಳಿಕೆಯಾಗಿದೆ.