ನವದೆಹಲಿ:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ 'ಜನ್ ಧನ್’‘ ದೇಶದಲ್ಲಿ ಡಿಜಿಟಲ್ ಕ್ರಾಂತಿಯನ್ನುಂಟು ಮಾಡಿದೆ ಎಂದು ಹಣಹಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ. 50 ಕೋಟಿಗೂ ಹೆಚ್ಚು ಜನರನ್ನು ಔಪಚಾರಿಕವಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ ಕರೆ ತರಲಾಗಿದೆ. ಈ ಖಾತೆಗಳಲ್ಲಿ ಸುಮಾರು 2 ಲಕ್ಷ ಕೋಟಿ ಸಂಚಿತ ಠೇವಣಿ ಇಡಲಾಗಿದೆ ಎಂಬ ವಿಚಾರವನ್ನು ನಿರ್ಮಲಾ ಸೀತಾರಾಮನ್ ಬಹಿರಂಗ ಪಡಿಸಿದ್ದಾರೆ.
ಪಿಎಂಜೆಡಿವೈ 9ನೇ ವಾರ್ಷಿಕೋತ್ಸವ: ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಉಪಕ್ರಮಗಳಲ್ಲಿ ಒಂದಾಗಿರುವ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ (ಪಿಎಂಜೆಡಿವೈ) ಒಂಬತ್ತನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಈ ಯೋಜನೆಯ ಅನ್ವಯ ಶೇ.55.5 ರಷ್ಟು ಬ್ಯಾಂಕ್ ಖಾತೆಗಳನ್ನು ಮಹಿಳೆಯರು ತೆರೆದಿದ್ದಾರೆ. ಗ್ರಾಮೀಣ, ಅರೆ-ನಗರ ಪ್ರದೇಶಗಳಲ್ಲಿ ಶೇ.67ದಷ್ಟು ಖಾತೆಗಳನ್ನು ತೆರೆಯಲಾಗಿದೆ. ಯೋಜನೆಯಡಿ ಬ್ಯಾಂಕ್ ಖಾತೆಗಳ ಸಂಖ್ಯೆ ಮಾರ್ಚ್ 2015ರಲ್ಲಿ 14.72 ಕೋಟಿ ಇದ್ದದ್ದು, ಪ್ರಸ್ತುತ 3.4 ಪಟ್ಟು ಹೆಚ್ಚಾಗಿದೆ. ಆಗಸ್ಟ್ 16, 2023ಕ್ಕೆ 50.09 ಕೋಟಿ ಖಾತೆಗಳನ್ನು ತೆರೆಯಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
34 ಕೋಟಿ ರೂ. ಕಾರ್ಡ್‌ಗಳನ್ನು ಶುಲ್ಕವಿಲ್ಲದೇ ವಿರತಣೆ: ಒಟ್ಟು ಠೇವಣಿಗಳೂ ಸಹ ಮಾರ್ಚ್ 2015ರ ವೇಳೆಗೆ 15,670 ಕೋಟಿ ರೂ. ಇತ್ತು. 2023ರ ಆಗಸ್ಟ್‌ಗೆ 2.03 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಜನ್ ಧನ್ ಖಾತೆಗಳಲ್ಲಿನ ಸರಾಸರಿ ಠೇವಣಿಗಳು ಮಾರ್ಚ್ 2015 ರಂತೆ 1,065 ರೂಪಾಯಿ ಇತ್ತು. ಆಗಸ್ಟ್ 2023 ರಲ್ಲಿ 4,063 ರೂಪಾಯಿಗೆ ತಲುಪಿದೆ. 3.8 ಪಟ್ಟು ಹೆಚ್ಚಾಗಿದೆ. ಆಗಸ್ಟ್ 2023ರಲ್ಲಿ ಈ ಖಾತೆಗಳಿಗೆ ಸುಮಾರು 34 ಕೋಟಿ ರೂಪಾಯಿ ಕಾರ್ಡ್‌ಗಳನ್ನು ಶುಲ್ಕ ಇಲ್ಲದೇ ನೀಡಲಾಗಿದೆ. ಇದು 2 ಲಕ್ಷ ರೂ. ಅಪಘಾತ ವಿಮಾ ರಕ್ಷಣೆಯನ್ನು ಸಹ ಒದಗಿಸುತ್ತದೆ.