ಕರ್ನಾಟಕ

karnataka

ETV Bharat / business

ಯುಎಸ್‌ಎ ಕೇಂದ್ರ ಬ್ಯಾಂಕ್‌ನಿಂದ ಬಡ್ಡಿದರ ಹೆಚ್ಚಳ ಮುಂದುವರಿಕೆ: ಏಷ್ಯಾ ಶೇರು ಮಾರುಕಟ್ಟೆಗಳಿಗೆ ಏಟು - ಆರ್ಥಿಕ ಹಿಂಜರಿತದ ಆತಂಕ

ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಲಂಡನ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ 27 ಸೆಂಟ್‌ ಅಂದರೆ 95.89 ಯುಎಸ್​ ಡಾಲರ್​ಗೆ ಇಳಿದಿದೆ. ಇದು ಹಿಂದಿನ ಅವಧಿಯಲ್ಲಿ 1.51 ಯುಎಸ್​ ಡಾಲರ್ ಏರಿಕೆಯಾಗಿ ಪ್ರತಿ ಬ್ಯಾರೆಲ್​ಗೆ 96.16 ಯುಎಸ್​ ಡಾಲರ್ ಆಗಿತ್ತು.

ಫೆಡ್ ಬಡ್ಡಿದರ ಹೆಚ್ಚಳ ಮುಂದುವರಿಕೆ: ಏಷ್ಯಾ ಶೇರು ಮಾರುಕಟ್ಟೆಗಳಲ್ಲಿ ಕುಸಿತ
Asia stocks fall after Fed says more US rate hikes likely

By

Published : Nov 3, 2022, 12:27 PM IST

ಹಣದುಬ್ಬರ ನಿಯಂತ್ರಿಸಲು ಅಮೆರಿಕದಲ್ಲಿನ ಬಡ್ಡಿದರ ಹೆಚ್ಚಿಸುವ ಕ್ರಮಗಳನ್ನು ತಾನಿನ್ನೂ ನಿಲ್ಲಿಸಿಲ್ಲ ಎಂದು ಫೆಡರಲ್ ರಿಸರ್ವ್ ಹೇಳಿದ ನಂತರ ಆರ್ಥಿಕ ಹಿಂಜರಿತದ ಆತಂಕದಿಂದ ಗುರುವಾರ ಏಷ್ಯಾದ ಶೇರು ಮಾರುಕಟ್ಟೆಗಳು ಕುಸಿತದೊಂದಿಗೆ ವಹಿವಾಟು ನಡೆಸುತ್ತಿವೆ.

ಹಾಂಗ್ ಕಾಂಗ್‌ನ ಶೇರು ಬೆಂಚ್​ಮಾರ್ಕ್​ ಶೇಕಡಾ 3.1 ರಷ್ಟು ಕಳೆದುಕೊಂಡಿತು. ಫೆಡ್ ಬುಧವಾರ ತನ್ನ ಪ್ರಮುಖ ದರವನ್ನು 15 ವರ್ಷಗಳಲ್ಲಿ ಅತ್ಯಧಿಕ ಮಟ್ಟಕ್ಕೆ ಹೆಚ್ಚಿಸಿದ ನಂತರ ಶಾಂಘೈ, ಸಿಯೋಲ್ ಮತ್ತು ಸಿಡ್ನಿ ಕೂಡ ವಾಲ್ ಸ್ಟ್ರೀಟ್ ಮಾರುಕಟ್ಟೆಗಳು ಕೂಡ ಕುಸಿತ ಕಂಡಿವೆ. ಯೂರೋ 99 ಸೆಂಟ್ಸ್‌ಗಿಂತ ಕಡಿಮೆ ಇದ್ದು, ತೈಲ ಬೆಲೆಗಳು ಕುಸಿದಿವೆ.

ಹಾಂಗ್ ಕಾಂಗ್‌ನಲ್ಲಿನ ಹ್ಯಾಂಗ್ ಸೆಂಗ್ 488 ಪಾಯಿಂಟ್‌ ಕಳೆದುಕೊಂಡು 15,338.85 ಕ್ಕೆ ಮತ್ತು ಸಿಡ್ನಿಯ S&P-ASX 200 ಶೇಕಡಾ 1.9 ರಷ್ಟು ಕುಸಿದು 6,855.40 ಕ್ಕೆ ತಲುಪಿದೆ. ಶಾಂಘೈ ಕಾಂಪೋಸಿಟ್ ಸೂಚ್ಯಂಕವು 0.2 ರಷ್ಟು ಕುಸಿದು 2,997.46 ಕ್ಕೆ ತಲುಪಿದೆ. ಜಪಾನಿನ ಮಾರುಕಟ್ಟೆಗಳಿಗೆ ಇಂದು ರಜೆ ಇದೆ. ಸಿಯೋಲ್‌ನಲ್ಲಿನ ಕೊಸ್ಪಿ ಶೇಕಡಾ 0.6 ರಷ್ಟು ಕುಸಿದು 2,322.11 ಕ್ಕೆ ತಲುಪಿದೆ. ನ್ಯೂಜಿಲೆಂಡ್ ಮತ್ತು ಆಗ್ನೇಯ ಏಷ್ಯಾದ ಮಾರುಕಟ್ಟೆಗಳೂ ಕುಸಿದವು.

ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಲಂಡನ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ 27 ಸೆಂಟ್‌ ಅಂದರೆ 95.89 ಯುಎಸ್​ ಡಾಲರ್​ಗೆ ಇಳಿದಿದೆ. ಇದು ಹಿಂದಿನ ಅವಧಿಯಲ್ಲಿ 1.51 ಯುಎಸ್​ ಡಾಲರ್ ಏರಿಕೆಯಾಗಿ ಪ್ರತಿ ಬ್ಯಾರೆಲ್​ಗೆ 96.16 ಯುಎಸ್​ ಡಾಲರ್ ಆಗಿತ್ತು.

ಇದನ್ನೂ ಓದಿ: ಸ್ಟಾಕ್ ಮಾರ್ಕೆಟ್ ಪ್ರಾಫಿಟ್ ಹೆಸರಲ್ಲಿ ವಂಚನೆ: ಬಳ್ಳಾರಿ ಮೂಲದ ಮೂವರ ಬಂಧನ

ABOUT THE AUTHOR

...view details