ಕಚ್ (ಗುಜರಾತ್):ಕಚ್ಚಾ ತೈಲ ಹೊತ್ತು ತರುತ್ತಿದ್ದ ಹಡಗಿನ ಮೇಲೆ ನಡೆದ ಡ್ರೋನ್ ದಾಳಿ ಭಾರೀ ಆತಂಕ ತಂದೊಡ್ಡಿದೆ. ಇದು ಇರಾನ್ ನಡೆಸಿದ ದಾಳಿ ಎಂದು ಹೇಳಲಾಗಿದ್ದರೂ, ಇಂತಹ ಘಟನೆಗಳು ವ್ಯಾಪಾರದ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಬಂದರುಗಳಿಂದ ನಡೆಯುವ ವ್ಯಾಪಾರ ಕುಂಠಿತಗೊಳಿಸುವ ಪರಿಣಾಮ ಬೀರಲಿದೆ.
ವಾಣಿಜ್ಯ ಸರಕು ಸಾಗಣೆ ಹಡಗಾದ ಎಂವಿ ಕೆಮ್ ಪ್ಲುಟೊ ಅರಬ್ಬಿ ಸಮುದ್ರದಲ್ಲಿ ಇತ್ತೀಚೆಗೆ ಡ್ರೋನ್ ದಾಳಿಗೀಡಾಗಿತ್ತು. ಬೆಂಕಿ ಹೊತ್ತಿಕೊಂಡು ತೀವ್ರ ಆತಂಕ ಸೃಷ್ಟಿಸಿತ್ತು. ದುರಂತವೆಂದರೆ, ಇದು ಭಾರತದ ಸಮುದ್ರ ಸೀಮೆಯಲ್ಲಿ ಈ ದಾಳಿ ನಡೆದಿತ್ತು. ಇಂತಹ ಘಟನೆಗಳು ಭಾರತದೊಂದಿಗಿನ ಸಮುದ್ರ ಮಾರ್ಗದ ವ್ಯಾಪಾರ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆಯಾ ಎಂಬ ಬಗ್ಗೆ ಅನುಮಾನ ಮೂಡಿಸಿದೆ.
ಆಮದು- ರಫ್ತಿನ ಮೇಲೆ ಪರಿಣಾಮ:ಈ ಬಗ್ಗೆ ಮುಂದ್ರಾ ಅದಾನಿ ಬಂದರಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಜೈದೀಪ್ ಶಾ ಮಾತನಾಡಿ, ಪ್ರಸ್ತುತ ಕಚ್‌ನ ಮುಂದ್ರಾದಲ್ಲಿರುವ ಅದಾನಿ ಬಂದರಿನಲ್ಲಿ ಹಡಗುಗಳ ಮೇಲಿನ ದಾಳಿಗಳ ಸಂಖ್ಯೆ ಕಡಿಮೆ ಇದೆ. ಆದ್ದರಿಂದ, ನಿಯಮಿತವಾಗಿ ವಾಪಾರ ಮುಂದುವರಿದಿದೆ. ದಿನಕ್ಕೆ ಸುಮಾರು 30 ರಿಂದ 38 ಹಡಗುಗಳು ಕಾರ್ಯಾಚರಣೆ ನಡೆಸುತ್ತವೆ. ಈಗ ನಡೆಯುತ್ತಿರುವ ದಾಳಿಗಳು ಭವಿಷ್ಯದಲ್ಲಿ ದೇಶದ ಆಮದು-ರಫ್ತು ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು. ಜೊತೆಗೆ ವಾರ್ಷಿಕವಾಗಿ 157 ಮಿಲಿಯನ್ ಮೆಟ್ರಿಕ್ ಟನ್ ಸರಕುಗಳ ಸಾಗಣೆ ಮತ್ತು ಕೋಟ್ಯಂತರ ಮೌಲ್ಯದ ವಹಿವಾಟು ಸಹ ಕುಂಠಿತ ಕಾಣಬಹುದು ಎಂದು ಅಭಿಪ್ರಾಯಪಟ್ಟರು.
ದೇಶದ ಸೀಮಾಗಡಿಯಲ್ಲಿ ದಾಳಿಗಳು ನಡೆದಾಗ ಇತರ ರಾಷ್ಟ್ರಗಳು ಭದ್ರತಾ ದೃಷ್ಟಿಯಿಂದ ಭಾರತದೊಂದಿಗೆ ವಹಿವಾಟು ನಡೆಸಲು ಹಿಂದೇಟು ಹಾಕಬಹುದು. ಆಗ ದೇಶದ ಆರ್ಥಿಕತೆ ಮತ್ತು ಸರಕುಗಳ ಸಾಗಣೆದ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ. ಇಂಥ ಕೃತ್ಯಗಳ ಮೇಲೆ ನಿಯಂತ್ರಣ ಸಾಧಿಸಬೇಕಿದೆ ಎಂದು ಅವರು ಸಲಹೆ ನೀಡಿದರು.