ನವದೆಹಲಿ:ಇತ್ತೀಚಿನ ದಿನಗಳಲ್ಲಿ ಹೊಸ ಪಿಂಚಣಿ ಯೋಜನೆ ಮತ್ತು ಹಳೆಯ ಪಿಂಚಣಿ ಯೋಜನೆ ಭಾರೀ ವಿವಾದಾತ್ಮಕ ವಿಷಯವಾಗಿ ಮಾರ್ಪಾಡಾಗಿದೆ. ಹೌದು, ಕೆಲವು ರಾಜ್ಯ ಸರ್ಕಾರಗಳು ತಮ್ಮ ಉದ್ಯೋಗಿಗಳಿಗೆ ಜನಪ್ರಿಯವಾದ ಹಳೆಯ ಪಿಂಚಣಿ ಯೋಜನೆಯನ್ನು ಹಿಂಪಡೆಯುವ ಭರವಸೆ ನೀಡಿವೆ. ಇದರರ್ಥ 2004 ಜನವರಿ 1ರ ನಂತರ ಕೇಂದ್ರ ಸರ್ಕಾರದ ಸೇವೆಗೆ ಪ್ರವೇಶಿಸಿದ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗಾಗಿ ಜಾರಿಗೆ ತಂದ ಹೊಸ ಪಿಂಚಣಿ ಯೋಜನೆಯನ್ನು ಕೈಬಿಡುವ ಸಾಧ್ಯತೆಯಿದೆ.
ಹಳೆಯ ಪಿಂಚಣಿ ಯೋಜನೆಗಿಂತ ಭಿನ್ನವಾಗಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ಕಾರ್ಪಸ್ ಅಥವಾ ಪಿಂಚಣಿ ನಿಧಿಗೆ ಯಾವುದೇ ಕೊಡುಗೆ ನೀಡದೇ ಜೀವಮಾನದ ಪಿಂಚಣಿ ಖಾತರಿಪಡಿಸಲಾಗಿದೆ. ಹೊಸ ಪಿಂಚಣಿ ಯೋಜನೆಯು (ಎನ್ಪಿಎಸ್) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ಉದ್ಯೋಗಿ ನೀಡಿದ ಸ್ವಯಂಪ್ರೇರಿತ ಕೊಡುಗೆ ಆಧರಿಸಿದೆ.
ಎನ್ಪಿಎಸ್ ಎಂದರೇನು?:ಹೊಸ ವ್ಯವಸ್ಥೆಯ ಅಡಿಯಲ್ಲಿ ಉದ್ಯೋಗಿಯ ಉಳಿತಾಯವನ್ನು ವೃತ್ತಿಪರ ನಿಧಿ ವ್ಯವಸ್ಥಾಪಕರು ನಿರ್ವಹಿಸುವ ನಿಧಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ), ಸರ್ಕಾರಿ ಬಾಂಡ್‌ಗಳು, ಕಾರ್ಪೊರೇಟ್ ಸಾಲ ಮತ್ತು ಸ್ಟಾಕ್ಗಳನ್ನು ಹಾಗೂ ಖಾಸಗಿ ನಿಧಿ ವ್ಯವಸ್ಥಾಪಕರು ಪಿಂಚಣಿ ವಲಯವನ್ನು ನಿಯಂತ್ರಿಸುತ್ತಾರೆ. ಹೂಡಿಕೆ ಮತ್ತು ಉಳಿತಾಯ ಸಾಧನಗಳು ಉತ್ತಮವಾಗಿವೆ ಹಾಗೂ ಸುರಕ್ಷಿತವಾಗಿವ ಎಂದು ಪರಿಗಣಿಸಲಾಗುತ್ತದೆ. ನಿವೃತ್ತಿಯ ನಂತರ ಉದ್ಯೋಗಿಯ ಉಳಿತಾಯವು ಅವರಿಗೆ ದೊರೆಯಲಿದೆ.
ಎನ್ಪಿಎಸ್ ಅಡಿ ಉದ್ಯೋಗಿಗೆ ತಮ್ಮ ಪಿಂಚಣಿ ನಿಧಿನಿಂದ ಒಂದು ದೊಡ್ಡ ಮೊತ್ತದ ಭಾಗವನ್ನು ಹಿಂತೆಗೆದುಕೊಳ್ಳುವ ಆಯ್ಕೆಯ ಜೊತೆಗೆ ಅನುಮೋದಿತ ಜೀವ ವಿಮಾ ಕಂಪನಿಯಿಂದ ಜೀವಮಾನದ ಒಟ್ಟುಮೊತ್ತ ಖರೀದಿಸಲು ಕೂಡಾ ಒಂದು ಆಯ್ಕೆಯಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಮರ್ಥನೀಯವಲ್ಲದ ಸರ್ಕಾರದ ಹೆಚ್ಚುತ್ತಿರುವ ಪಿಂಚಣಿ ಪಾವತಿ ಹೊರೆ ಕಡಿಮೆ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ನೌಕರರು ಒಪಿಎಸ್‌ಗೆ ಮರಳಲು ಏಕೆ ಒತ್ತಾಯಿಸುತ್ತಿದ್ದಾರೆ?: ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರೆಲ್ಲರೂ ಹಳೆಯ ಪಿಂಚಣಿ ಯೋಜನೆಗೆ ಮರಳಲು ಒತ್ತಾಯಿಸುತ್ತಿದ್ದಾರೆ. ಈ ಬೇಡಿಕೆ ಬಗ್ಗೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆ ಹಲವಾರು ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಗೆ ಹಿಂತಿರುಗುವುದಾಗಿ ಘೋಷಣೆ ಮಾಡಿವೆ. ಪ್ರತಿಪಕ್ಷದ ಆಡಳಿತವಿರುವ ರಾಜ್ಯಗಳಾದ ರಾಜಸ್ಥಾನ ಮತ್ತು ಛತ್ತೀಸ್‌ಗಢ ಈಗಾಗಲೇ ಅಸ್ತಿತ್ವದಲ್ಲಿರುವ ಎಲ್ಲಾ ಸರ್ಕಾರಿ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಗೆ ಹಿಂಪಡೆಯುವ ನಿರ್ಧಾರವನ್ನು ಪ್ರಕಟಿಸಿವೆ.