ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್ ಅಚ್ಚರಿಯ ನಿರ್ಧಾರವೊಂದನ್ನು ಕೈಗೊಂಡಿದೆ. ಚಲಾವಣೆಯಲ್ಲಿರುವ 2,000 ರೂಪಾಯಿ ನೋಟುಗಳನ್ನು ಹಿಂಪಡೆಯಲು ಆರ್‌ಬಿಐ ನಿರ್ಧರಿಸಿದೆ. ನಾಲ್ಕು ತಿಂಗಳ ಅವಧಿಯಲ್ಲಿ ಈ 2,000 ಮುಖಬೆಲೆಯ ನೋಟುಗಳನ್ನು ಠೇವಣಿ ಮಾಡಲು ಸಾರ್ವಜನಿಕರಿಗೆ ಸೂಚಿಸಿದೆ. ಷೇರುಪೇಟೆಗಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದನ್ನು ತಪ್ಪಿಸಲು ಆರ್‌ಬಿಐ ಶುಕ್ರವಾರ ಸಂಜೆ ಪ್ರಕಟಿಸಿದ ನಿರ್ಧಾರವು ಅನೇಕ ಜನರನ್ನು ಆಶ್ಚರ್ಯಗೊಳಿಸಿತು. ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷವು 2016ರಲ್ಲಿ ನೋಟು ಅಮಾನ್ಯೀಕರಣ ಅಥವಾ ನೋಟು ನಿಷೇಧದ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿರಿಸಿಕೊಂಡಿದೆ ತೀವ್ರ ವಾಗ್ದಾಳಿ ನಡೆಸಿದೆ.
1934ರ ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ:1934ರ ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ ಅಡಿಯಲ್ಲಿ ನೋಟುಗಳ ಸಮಸ್ಯೆಯನ್ನು ನಿಯಂತ್ರಿಸಲು ಹಾಗೂ ದೇಶದಲ್ಲಿ ಮೀಸಲು ಇಡುವುದನ್ನು ನಿಯಂತ್ರಿಸಲು ಆರ್ಬಿಐಯನ್ನು ಸ್ಥಾಪಿಸಲಾಯಿತು. ಆರ್‌ಬಿಐ ಕಾಯ್ದೆಯ ಗುರಿಯು ಭಾರತದಲ್ಲಿ ವಿತ್ತೀಯ ಸ್ಥಿರತೆಯನ್ನು ಭದ್ರಪಡಿಸುವುದು ಮತ್ತು ಅದರ ಪ್ರಯೋಜನಕ್ಕಾಗಿ ದೇಶದ ಕರೆನ್ಸಿ ಮತ್ತು ಕ್ರೆಡಿಟ್ ವ್ಯವಸ್ಥೆಯನ್ನು ನಿರ್ವಹಿಸುವುದು ಆಗಿದೆ. ಆರ್‌ಬಿಐ ಕಾಯಿದೆಯ ಸೆಕ್ಷನ್-22 ನೋಟುಗಳನ್ನು ವಿತರಿಸುವ ಅಧಿಕಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಇಂಡಿಯಾ ಹೊಂದಿದೆ. ಆರ್‌ಬಿಐ ವಿತರಿಸಬೇಕಾದ ನೋಟುಗಳ ಮುಖಬೆಲೆಯನ್ನು ನಿರ್ಧರಿಸುತ್ತದೆ ಹಾಗೂ ಯಾವುದೇ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುತ್ತದೆ.
ಆರ್‌ಬಿಐ 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದ್ದು ಏಕೆ?:ಆರ್‌ಬಿಐ ಪ್ರಕಾರ, ರೂ. 2,000 ಮುಖಬೆಲೆಯ ನೋಟುಗಳನ್ನು ನವೆಂಬರ್ 2016ರಲ್ಲಿ ಪರಿಚಯಿಸಲಾಯಿತು. ಪ್ರಾಥಮಿಕವಾಗಿ ಆರ್ಥಿಕತೆಯ ಕರೆನ್ಸಿ ಅಗತ್ಯವನ್ನು ತ್ವರಿತವಾಗಿ ಪೂರೈಸಲು ಆ ಸಮಯದಲ್ಲಿ ಚಲಾವಣೆಯಲ್ಲಿದ್ದ ಎಲ್ಲಾ 500 ರೂ. ಮತ್ತು 1000 ರೂ. ನೋಟುಗಳನ್ನು ರದ್ದು ಪಡಿಸಲಾಗಿತ್ತು. ಆರ್‌ಬಿಐ ಪ್ರಕಾರ, ಇತರ ಮುಖಬೆಲೆಯ ಕರೆನ್ಸಿ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದರಿಂದ 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದೆ. ಆರ್‌ಬಿಐ ಈಗಾಗಲೇ 2018-19ರಿಂದ 2000 ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ.
ಜೀವನಚಕ್ರದ ಅಂತ್ಯ ತಲುಪಿದ 2,000 ರೂ. ನೋಟುಗಳು:ಆರ್‌ಬಿಐ ಪ್ರಕಾರ, 2,000 ರೂ. ಮುಖಬೆಲೆಯ ನೋಟುಗಳ ಬಹುಪಾಲು ಮಾರ್ಚ್ 2017ಕ್ಕಿಂತ ಮೊದಲು ಬಿಡುಗಡೆ ಮಾಡಲ್ಪಟ್ಟಿದೆ. ಈ ನೋಟುಗಳ ಅಂದಾಜು ಜೀವಿತಾವಧಿಯ 4ರಿಂದ 5 ವರ್ಷಗಳ ಆಗಿದೆ. ಆದ್ದರಿಂದ ಅದನ್ನು ಹಿಂತೆಗೆದುಕೊಳ್ಳಲು ಇದು ಸರಿಯಾದ ಸಮಯವಾಗಿದೆ. ಇದಲ್ಲದೆ, 2,000 ರೂ. ನೋಟುಗಳನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸುವ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಈ ನೋಟುಗಳ ಹಿಂಪಡೆಯುವಿಕೆಯು ಸಾಮಾನ್ಯ ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.