ನವದೆಹಲಿ: ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಸೆಪ್ಟೆಂಬರ್‌ನಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ವಿಶೇಷವಾಗಿ ಅದರಲ್ಲೂ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. ದೇಶೀಯ ಲಭ್ಯತೆ ಹೆಚ್ಚಿಸಲು ಮತ್ತು ಅಗತ್ಯ ಆಹಾರ ವಸ್ತುಗಳ ಬೆಲೆಗಳನ್ನು ಸ್ಥಿರಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಇದು ಸಾಧ್ಯವಾಗಿದೆ ಎಂದು ಇಲಾಖೆ ತಿಳಿಸಿದೆ.
ಈ ಹಿಂದಿನ ಬೆಲೆಗಳನ್ನು ಗಮನಿಸಿದಾಗ ಅಂದರೆ ಆಗಸ್ಟ್‌ನಿಂದ ಡಿಸೆಂಬರ್‌ವರೆಗಿನ ಹಬ್ಬದ ಋತುಗಳ ಹಿಂದಿನ ಅವಧಿಯಲ್ಲಿ ಖಾದ್ಯ ತೈಲಗಳ ಬೆಲೆಗಳಲ್ಲಿ ಹೆಚ್ಚಳವಾಗಿರುವುದ ಅಂಕಿ- ಅಂಶಗಳಿಂದ ಗೊತ್ತಾಗುತ್ತದೆ. 2020 ರಲ್ಲಿ, ಖಾದ್ಯ ತೈಲಗಳ ಬೆಲೆಯಲ್ಲಿ ಶೇ 7-12ರಷ್ಟು ಹೆಚ್ಚಾಗಿತ್ತು. 2019 ರಲ್ಲಿ ಅದು ಶೇ 3-8ರ ವ್ಯಾಪ್ತಿಯಲ್ಲಿತ್ತು. ಆದಾಗ್ಯೂ ಪ್ರಸಕ್ತ ವರ್ಷದಲ್ಲಿ ಆಗಸ್ಟ್ 2022 ರಲ್ಲಿ ದೇಶೀಯ ಬೆಲೆಗಳು ಶೇ 2-9 ರಷ್ಟು ಕುಸಿತ ಕಂಡಿವೆ.
ಕಳೆದ ಎರಡು ತಿಂಗಳುಗಳಲ್ಲಿ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ 1 ಲೀಟರ್ ಪ್ಯಾಕ್‌ನ ಅಖಿಲ ಭಾರತ ಸರಾಸರಿ ದೇಶೀಯ ಚಿಲ್ಲರೆ ಮಾರಾಟವು ರೂ. 168 ರಿಂದ ರೂ. 187 ಆಸುಪಾಸಿನಲ್ಲಿದೆ. ಇನ್ನು ಸಂಸ್ಕರಿಸಿದ ಸೋಯಾಬೀನ್ 1 ಲೀಟರ್ ಪ್ಯಾಕ್‌ಗೆ ರೂ. 158 ರಿಂದ ರೂ. 150 ಕ್ಕೆ ಮಾರಾಟವಾಗುತ್ತಿದೆ.