ಮುಂಬೈ(ಮಹಾರಾಷ್ಟ್ರ):ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಜಾಗತಿಕ ಮಾರುಕಟ್ಟೆ ಪರಿಣಾಮ ಉಂಟಾಗಿದ್ದು, ಬಿಎಸ್‌ಇ ಸೆನ್ಸೆಕ್ಸ್ 350 ಪಾಯಿಂಟ್‌ಗಳ ಕುಸಿತದೊಂದಿಗೆ 59,240ಕ್ಕೆ ತಲುಪಿದೆ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ 100 ಪಾಯಿಂಟ್‌ಗಳಷ್ಟು ಕಡಿಮೆಯಾಗಿ 17,700 ಮಟ್ಟದಲ್ಲಿದೆ.
ಹೆಚ್‌ಡಿಎಫ್‌ಸಿ, ಮಾರುತಿ, ಟೈಟಾನ್, ವಿಪ್ರೋ, ರಿಲಯನ್ಸ್, ಟಿಸಿಎಸ್, ಕೊಟಕ್ ಬ್ಯಾಂಕ್ ಮತ್ತು ಇನ್ಫೋಸಿಸ್ನ ಕಂಪ ಸೆನ್ಸೆಕ್ಸ್ ಶೇಕಡಾ 2ರವರೆಗೆ ಕುಸಿತ ಕಂಡಿವೆ. ಒಎನ್‌ಜಿಸಿ, ಯುಪಿಎಲ್ ಕಂಪನಿಗಳು ನಿಫ್ಟಿಯಲ್ಲಿ ಅತ್ಯಂತ ದೊಡ್ಡ ಮೊತ್ತದಲ್ಲಿ ಕುಸಿತ ಕಂಡಿವೆ. ಮತ್ತೊಂದೆಡೆ, ಡಾ.ರೆಡ್ಡೀಸ್, ಏಷ್ಯನ್ ಪೇಂಟ್ಸ್, ಸನ್ ಫಾರ್ಮಾ, ಟಾಟಾ ಸ್ಟೀಲ್, ಸಿಪ್ಲಾ ಮತ್ತು ಡಿವಿಸ್ ಲ್ಯಾಬ್ಸ್, ಎಚ್‌ಯುಎಲ್, ಎನ್‌ಟಿಪಿಸಿ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಗಳು ಅತಿ ಹೆಚ್ಚು ಗಳಿಸಿವೆ.
ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಕಂಪನಿಗಳ ಸೂಚ್ಯಂಕಗಳು ಸಕಾರಾತ್ಮಕವಾಗಿದ್ದು, ಶೇಕಡಾ 0.5ರಷ್ಟು ಬೆಳವಣಿಗೆ ಕಂಡಿವೆ. ವಲಯವಾರು ನೋಡುವುದಾದರೆ ನಿಫ್ಟಿಯಲ್ಲಿ ಹಣಕಾಸು, ಐಟಿ, ಬ್ಯಾಂಕ್‌ಗಳು ಮತ್ತು ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡುಬಂದಿದೆ. ಫಾರ್ಮಾ ಮತ್ತು ಎಫ್‌ಎಂಸಿಜಿ ಪ್ಯಾಕ್ ಬೆಳವಣಿಗೆ ಕಂಡಿವೆ.