ಕರ್ನಾಟಕ

karnataka

ETV Bharat / business

ಡಿಸೆಂಬರ್ 2022ರಲ್ಲಿ ಸುಮಾರು 15 ಲಕ್ಷ ಸದಸ್ಯರು ಇಪಿಎಫ್​ಒಗೆ ಸೇರ್ಪಡೆ.. ಕರ್ನಾಟಕಕ್ಕೆ ಎಷ್ಟನೇ ಸ್ಥಾನ ಗೊತ್ತಾ? - ಇಪಿಎಫ್‌ಒ ಸದಸ್ಯತ್ವದಿಂದ ನಿರ್ಗಮ

ಇಪಿಎಫ್‌ಒನ ಪ್ರಾಥಮಿಕ ವೇತನದಾರರ ದತ್ತಾಂಶ ಬಿಡುಗಡೆಯಾಗಿದ್ದು, ಡಿಸೆಂಬರ್, 2022 ರಲ್ಲಿ ಸದಸ್ಯರ ಸಂಖ್ಯೆಯಲ್ಲಿ 14.93 ಲಕ್ಷ ಹೆಚ್ಚಳವಾಗಿದೆ ಎಂದು ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದೆ.

EPFO adds minimum 15L members in Dec 2022  EPFO members list  Employees Provident Fund Organisation  lakh members in the month of December last year  provisional payroll data of the EPFO released  15 ಲಕ್ಷ ಸದಸ್ಯರು ಇಪಿಎಫ್​ಒಗೆ ಸೇರ್ಪಡೆ  2022ರಲ್ಲಿ ಸುಮಾರು 15 ಲಕ್ಷ ಸದಸ್ಯರು ಇಪಿಎಫ್​ಒಗೆ  ಕರ್ನಾಟಕಕ್ಕೆ ಎಷ್ಟನೇ ಸ್ಥಾನ  ಇಪಿಎಫ್‌ಒನ ಪ್ರಾಥಮಿಕ ವೇತನದಾರರ ದತ್ತಾಂಶ  ಕಾರ್ಮಿಕ ಸಚಿವಾಲಯ ಮಾಹಿತಿ  ಇಪಿಎಫ್‌ಒದ ತಾತ್ಕಾಲಿಕ ವೇತನದಾರರ ದತ್ತಾಂಶ  ವೇತನದಾರರ ದತ್ತಾಂಶದ ಲಿಂಗ ವಾರು ವಿಶ್ಲೇಷಣೆ  ಇಪಿಎಫ್‌ಒ ಸದಸ್ಯತ್ವದಿಂದ ನಿರ್ಗಮ  ಮತ್ತೆ ಸೇರಿದ್ದಾರೆ ಎಂದು ಡೇಟಾ ಬಹಿರಂಗ
ಡಿಸೆಂಬರ್ 2022ರಲ್ಲಿ ಸುಮಾರು 15 ಲಕ್ಷ ಸದಸ್ಯರು ಇಪಿಎಫ್​ಒಗೆ ಸೇರ್ಪಡೆ

By

Published : Feb 21, 2023, 2:23 PM IST

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕಳೆದ ವರ್ಷ ಡಿಸೆಂಬರ್‌ನಲ್ಲಿ ಒಟ್ಟು 14.93 ಲಕ್ಷ ಸದಸ್ಯರನ್ನು ಸೇರಿಸಿದೆ. ವೇತನದಾರರ ಡೇಟಾವನ್ನು 2021 ವರ್ಷ ಡಿಸೆಂಬರ್​ನಿಂದ ಡಿಸೆಂಬರ್ 2022 ರವರೆಗೆ ಹೊಲಿಸಿದ್ರೆ ನಿವ್ವಳ ಸದಸ್ಯತ್ವ ಸೇರ್ಪಡೆಯಲ್ಲಿ 32,635 ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ.

ಸೋಮವಾರ ಬಿಡುಗಡೆಯಾದ ಇಪಿಎಫ್‌ಒದ ತಾತ್ಕಾಲಿಕ ವೇತನದಾರರ ದತ್ತಾಂಶವು ತಿಂಗಳಲ್ಲಿ ಸೇರ್ಪಡೆಯಾದ 14.93 ಲಕ್ಷ ಸದಸ್ಯರಲ್ಲಿ ಸುಮಾರು 8.02 ಲಕ್ಷ ಹೊಸ ಸದಸ್ಯರು ಮೊದಲ ಬಾರಿಗೆ ಇಪಿಎಫ್‌ಒದ ಸಾಮಾಜಿಕ ಭದ್ರತಾ ವ್ಯಾಪ್ತಿಗೆ ಬಂದಿದ್ದಾರೆ ಎಂದು ಎತ್ತಿ ತೋರಿಸುತ್ತಿದೆ. ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಲ್ಲಿ 2.39 ಲಕ್ಷ ಸದಸ್ಯರು 18-21 ವರ್ಷ ವಯಸ್ಸಿನವರಾಗಿದ್ದಾರೆ. ನಂತರ 22-25 ವರ್ಷ ವಯಸ್ಸಿನವರು 2.08 ಲಕ್ಷ ಸದಸ್ಯರು ಸೇರಿದ್ದಾರೆ. ಡಿಸೆಂಬರ್‌ನಲ್ಲಿ ಒಟ್ಟು ಹೊಸ ಸದಸ್ಯರಲ್ಲಿ 55.64 ಪ್ರತಿಶತ 18-25 ವರ್ಷ ವಯಸ್ಸಿನವರಾಗಿದ್ದಾರೆ. ಇಪಿಎಫ್‌ಒಗೆ ಸೇರುವ ಹೆಚ್ಚಿನ ಸದಸ್ಯರು ದೇಶದ ಸಂಘಟಿತ ವಲಯದ ಉದ್ಯೋಗಿಗಳಿಗೆ ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಾಗಿದ್ದಾರೆ.

ಸುಮಾರು 3.84 ಲಕ್ಷ ಸದಸ್ಯರು ನಿರ್ಗಮಿಸಿದ್ದಾರೆ. 10.74 ಲಕ್ಷ ಸದಸ್ಯರು ಇಪಿಎಫ್‌ಒ ಸದಸ್ಯತ್ವದಿಂದ ನಿರ್ಗಮಿಸಿದ್ದಾರೆ ಮತ್ತು ಮತ್ತೆ ಸೇರಿದ್ದಾರೆ ಎಂದು ಡೇಟಾ ಬಹಿರಂಗಪಡಿಸಿದೆ. ಈ ಸದಸ್ಯರು ತಮ್ಮ ಉದ್ಯೋಗಗಳನ್ನು ಬದಲಾಯಿಸಿರಬಹುದಾಗಿದೆ ಮತ್ತು ಇಪಿಎಫ್‌ಒ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳಿಗೆ ಮರು-ಸೇರ್ಪಡೆಯಾಗಿರಬಹುದಾಗಿದೆ ಮತ್ತು ಅಂತಿಮ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಬದಲು ತಮ್ಮ ಸಂಚಯಗಳನ್ನು ವರ್ಗಾಯಿಸಲು ಆಯ್ಕೆ ಮಾಡಿಕೊಂಡವರು ಇದ್ದಾರೆ.

ವೇತನದಾರರ ದತ್ತಾಂಶದ ಲಿಂಗ-ವಾರು ವಿಶ್ಲೇಷಣೆಯು ಡಿಸೆಂಬರ್ 2022 ರಲ್ಲಿ ಹೊಸ ಮಹಿಳಾ ಸದಸ್ಯರ ದಾಖಲಾತಿ 2.05 ಲಕ್ಷವಾಗಿದೆ ಎಂದು ಸೂಚಿಸಿದೆ. ಒಟ್ಟು ಹೊಸ ಸೇರ್ಪಡೆಗೊಳ್ಳುವವರಲ್ಲಿ ಹೊಸ ಮಹಿಳಾ ಸದಸ್ಯರ ಶೇಕಡಾವಾರು ಪ್ರಮಾಣವು ನವೆಂಬರ್ 2022 ರಲ್ಲಿ ಶೇಕಡಾ 25.14 ರಿಂದ ಪ್ರಸ್ತುತ ತಿಂಗಳಲ್ಲಿ ಶೇಕಡಾ 25.57 ಕ್ಕೆ ಹೆಚ್ಚಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯ್ದೆ, 1952 ರ ಅಡಿಯಲ್ಲಿ ಸಾಮಾಜಿಕ ಭದ್ರತೆಯನ್ನು ಮೊದಲ ಬಾರಿಗೆ ಈ ಮಹಿಳಾ ಸದಸ್ಯರಿಗೆ ವಿಸ್ತರಿಸಲಾಗಿದೆ.

ಕರ್ನಾಟಕಕ್ಕೆ ನಾಲ್ಕನೇ ಸ್ಥಾನ.. ರಾಜ್ಯವಾರು ವೇತನದಾರರ ಅಂಕಿ-ಅಂಶಗಳು ನಿವ್ವಳ ಸದಸ್ಯ ಸೇರ್ಪಡೆಯ ವಿಷಯದಲ್ಲಿ ಅಗ್ರ ಐದು ರಾಜ್ಯಗಳು ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಕರ್ನಾಟಕ ಮತ್ತು ಹರಿಯಾಣಗಳಾಗಿವೆ. ಈ ರಾಜ್ಯಗಳು ಒಟ್ಟಾಗಿ ತಿಂಗಳ ಅವಧಿಯಲ್ಲಿ ನಿವ್ವಳ ಸದಸ್ಯರ ಸೇರ್ಪಡೆಯ ಶೇಕಡಾ 60.08 ರಷ್ಟಿದೆ. ಎಲ್ಲಾ ರಾಜ್ಯಗಳಲ್ಲಿ, ಒಟ್ಟಾರೆ ಸದಸ್ಯರ ಸೇರ್ಪಡೆಯಲ್ಲಿ 24.82 ಪ್ರತಿಶತವನ್ನು ಸೇರಿಸುವ ಮೂಲಕ ಮಹಾರಾಷ್ಟ್ರವು ಮುಂಚೂಣಿಯಲ್ಲಿದೆ ಮತ್ತು ತಮಿಳುನಾಡು ರಾಜ್ಯವು ತಿಂಗಳ ಅವಧಿಯಲ್ಲಿ 10.08 ಪ್ರತಿಶತವನ್ನು ಹೊಂದಿದೆ.

ಉದ್ಯಮ-ವಾರು ವೇತನದಾರರ ದತ್ತಾಂಶದ ವರ್ಗೀಕರಣವು 'ತಜ್ಞ ಸೇವೆಗಳು' (ಮಾನವಶಕ್ತಿ ಪೂರೈಕೆದಾರರು, ಸಾಮಾನ್ಯ ಗುತ್ತಿಗೆದಾರರು, ಭದ್ರತಾ ಸೇವೆಗಳು, ವಿವಿಧ ಚಟುವಟಿಕೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ) ತಿಂಗಳ ಒಟ್ಟು ಸದಸ್ಯರ ಸೇರ್ಪಡೆಯ ಶೇಕಡಾ 38.22 ರಷ್ಟಿದೆ ಎಂದು ಸೂಚಿಸುತ್ತದೆ. ಉದ್ಯಮವಾರು ದತ್ತಾಂಶವನ್ನು ಹಿಂದಿನ ತಿಂಗಳಿಗೆ ಹೋಲಿಸಿದರೆ ಕೈಗಾರಿಕೆಗಳಲ್ಲಿ ಹೆಚ್ಚಿನ ದಾಖಲಾತಿಗಳನ್ನು ಗಮನಿಸಲಾಗಿದೆ. ಅಂದರೆ 'ಹಣಕಾಸು ಸ್ಥಾಪನೆ', 'ಬೀಡಿ ತಯಾರಿಕೆ', 'ವ್ಯಾಪಾರ - ವಾಣಿಜ್ಯ ಸಂಸ್ಥೆಗಳು', 'ಟ್ರಾವೆಲ್ ಏಜೆನ್ಸಿಗಳು', ಇತ್ಯಾದಿ ಕೈಗಾರಿಕಾ ವಲಯಗಳು ಒಳಗೊಂಡಿವೆ.

ಓದಿ:ಪಿಎಫ್​ ಸದಸ್ಯರಿಗೆ ಗುಡ್​ನ್ಯೂಸ್​.. ನಿವೃತ್ತಿಗೆ 6 ತಿಂಗಳ ಮೊದಲೇ ಪಿಂಚಣಿ ಹಣ ಪಡೆಯಲು ಅವಕಾಶ

ABOUT THE AUTHOR

...view details