ವಾಷಿಂಗ್ಟನ್:ನಕಲಿ ಟ್ವಿಟರ್ ಖಾತೆ ಬಳಕೆದಾರರ ಸಂಖ್ಯೆಯ ಬಗ್ಗೆ ಟೆಸ್ಲಾ ಸಿಇಒ, ವಿಶ್ವದ ನಂ.1 ಧನಿಕ ಎಲಾನ್ ಮಸ್ಕ್ ಮತ್ತು ಟ್ವಿಟ್ಟರ್ ಸಿಇಒ ಪರಾಗ್ ಅನುರಾಗ್ ಮಧ್ಯೆ ಟ್ವೀಟ್ ವಾರ್ ನಡೆದಿದೆ. ನಕಲಿ ಖಾತೆಗಳ ಸಂಖ್ಯೆಯನ್ನು ಘೋಷಿಸುವವರೆಗೆ ಟ್ವಿಟರ್ ಸಂಸ್ಥೆ ಖರೀದಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗುವುದು. ಈ ಬಗ್ಗೆ ಸಂಸ್ಥೆ ನಿಖರ ಮಾಹಿತಿ ನೀಡಬೇಕು ಎಂದು ಎಲಾನ್ ಮಸ್ಕ್ ಕೋರಿದ್ದಾರೆ. ಇದಕ್ಕೆ ಪ್ರತಿಯಾಗಿ ಎಲಾನ್ ಮಸ್ಕ್ ಹೇಳಿರುವಷ್ಟು ಪ್ರಮಾಣದಲ್ಲಿ ನಕಲಿ ಖಾತೆಗಳು ಇಲ್ಲ ಎಂದು ಪರಾಗ್ ಅನುರಾಗ್ ವಾದಿಸಿದ್ದಾರೆ.
ಎಲಾನ್ ಆಕ್ಷೇಪವೇನು?:ಈಚೆಗಷ್ಟೇ 44 ಶತಕೋಟಿ ಡಾಲರ್ಗೆ ಟ್ವಿಟರ್ ಸಂಸ್ಥೆಯನ್ನು ಖರೀದಿ ಮಾಡಿದ್ದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಬಳಕೆಯಾಗುತ್ತಿರುವ ಖಾತೆಗಳಿಗಿಂತ ಶೇ.5 ರಷ್ಟು ನಕಲಿ ಖಾತೆಗಳೇ ಇವೆ ಎಂದು ಅನುಮಾನಿಸಿದ್ದಾರೆ. ಕಾರಣ ಗಣ್ಯ ವ್ಯಕ್ತಿಗಳೇ ಟ್ವಿಟರ್ ಅನ್ನು ಬಹುವಾಗಿ ಉಪಯೋಗಿಸುತ್ತಿಲ್ಲ. ಇನ್ನು ಸಣ್ಣಪುಟ್ಟ ಖಾತೆಗಳು ಎಷ್ಟು ನಕಲಿಯಾಗಿವೆ ಎಂಬುದನ್ನು ಊಹಿಸಿ ಎಂದು ಟ್ವೀಟ್ ಮೂಲಕವೇ ತಕರಾರು ತೆಗೆದಿದ್ದಾರೆ.
ಅಲ್ಲದೇ ಸಂಸ್ಥೆಯನ್ನು ನಾನು ಖರೀದಿ ಮಾಡಬೇಕಾದರೆ, ನಕಲಿ ಖಾತೆಗಳು ಎಷ್ಟಿವೆ ಎಂಬ ಬಗ್ಗೆ ನಿಖರ ಮಾಹಿತಿಯನ್ನು ನೀಡಬೇಕು ಎಂದು ಟ್ವಿಟರ್ ಸಿಇಒ ಪರಾಗ್ ಅನುರಾಗ್ರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದರು.