ವಿಶ್ವದ ನಂ.1 ಧನಿಕ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ಅನ್ನು ಖರೀದಿಸಿದ ಬಳಿಕ ಕೋಕಾ ಕೋಲಾ ಕಂಪನಿಯನ್ನು ಖರೀದಿ ಮಾಡಲಿದ್ದಾರಾ?. ಹೀಗೊಂದು ಊಹೆಯನ್ನು ಸ್ವತಃ ಎಲಾನ್ ಮಸ್ಕ್ ಅವರೇ ತೇಲಿಬಿಟ್ಟಿದ್ದಾರೆ.
ಈ ಬಗ್ಗೆ ಎಲಾನ್ ಮಸ್ಕ್ ಮಾಡಿರುವ ಟ್ವೀಟ್ ಈ ಪ್ರಶ್ನೆಯನ್ನು ಹುಟ್ಟು ಹಾಕಿದೆ. 'ನಾನೀಗ ಕೋಕಾ ಕೋಲಾ ಕಂಪನಿಯನ್ನು ಖರೀದಿ ಮಾಡುವೆ' ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದರ ಬಳಿಕ ಟ್ವಿಟರ್ ಅನ್ನು ಗರಿಷ್ಠ ಪ್ರಮಾಣದಲ್ಲಿ ಮೋಜು ಮಾಡಲು ಬಳಸುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದೆ ಅವರು ಮೆಕ್ಡೊನಾಲ್ಡ್ ಕಂಪನಿಯನ್ನು ಖರೀದಿಸಿ, ಅಲ್ಲಿ ಐಸ್ಕ್ರೀಮ್ ಯಂತ್ರಗಳನ್ನು ಅಳವಡಿಸುವೆ ಎಂದು ಬರೆದಿದ್ದ ಟ್ವೀಟ್ಗೆ ಟ್ಯಾಗ್ ಮಾಡಿ 'ನಾನು ಪವಾಡಗಳನ್ನು ಮಾಡಲು ಸಾಧ್ಯವಿಲ್ಲ' ಎಂದೂ ಟ್ವೀಟ್ ಮಾಡಿದ್ದಾರೆ. 'ಕೊಕೇನ್ ಅನ್ನು ಮತ್ತೆ ಶುರು ಮಾಡಲು ನಾನು ಕೋಕಾ-ಕೋಲಾವನ್ನು ಖರೀದಿಸುತ್ತಿದ್ದೇನೆ' ಎಂದು ಎಲಾನ್ ಮಸ್ಕ್ ಸರಣಿ ಟ್ವೀಟ್ ಮಾಡಿದ್ದಾರೆ.
ಈ ವಾರ ಮೈಕ್ರೋಬ್ಲಾಗಿಂಗ್ ವೆಬ್ಸೈಟ್ ಟ್ವಿಟರ್ ಅನ್ನು 44 ಶತಕೋಟಿ ಡಾಲರ್ಗೆ ಖರೀದಿ ಮಾಡಿದ ನಂತರ ಇನ್ನೊಂದು ಕಂಪನಿ ಖರೀದಿಗೆ ಕೈ ಹಾಕಲಿದ್ದಾರಾ ಅಥವಾ ತಮಾಷೆ ಮಾಡುತ್ತಿದ್ದಾರೆಯೇ ಎಂಬುದು ಮಸ್ಕ್ ಅವರೇ ಸ್ಪಷ್ಟನೆ ನೀಡಬೇಕಿದೆ.
ಇದನ್ನೂ ಓದಿ:ದೇವಸ್ಥಾನಕ್ಕೆ 101 ಕೆಜಿ ಬೆಳ್ಳಿ ಬಾಗಿಲು ಅರ್ಪಿಸಿದ ಭಕ್ತ!