ಹೈದರಾಬಾದ್:ಭವಿಷ್ಯದ ಹಣಕಾಸಿನ ಅಗತ್ಯಗಳ ಬಗ್ಗೆ ಯೋಚಿಸುವುದು ಮುಂದಿನ ಸುಗಮ ಬದುಕಿನ ದೃಷ್ಟಿಯಿಂದ ಅನುಕೂಲಕರ. ಮುಪ್ಪಿನ ಕಾಲದಲ್ಲಿ ಮಾಸಿಕ ಆದಾಯವನ್ನು ಪಡೆಯಲು ಆರಂಭಿಕ ಹೂಡಿಕೆಗಳನ್ನು ಮಾಡುವುದು ಉತ್ತಮವಾದ ಮಾರ್ಗವಾಗಿದೆ. ಶಿಕ್ಷಣದ ಹಣದುಬ್ಬರವು ನಿರಂತರವಾಗಿ ಏರುತ್ತಿರುವುದರಿಂದ, ಪ್ರತಿ ಕುಟುಂಬವು ಈ ದಿನಗಳಲ್ಲಿ ಇಂತಹ ಆರಂಭಿಕ ಹೂಡಿಕೆಗಳ ಅಗತ್ಯ ಎಂದೆಂದಿಗಿಂತ ಈಗ ಹೆಚ್ಚಾಗಿದೆ. 33 ವರ್ಷದ ಖಾಸಗಿ ಉದ್ಯೋಗಿ ತನ್ನ ನಾಲ್ಕು ವರ್ಷದ ಮಗಳ ಭವಿಷ್ಯದ ಅಗತ್ಯಗಳನ್ನು ಸುರಕ್ಷಿತವಾಗಿರಿಸಲು ಏನು ಮಾಡಬೇಕು? ಈ ಗುರಿಯನ್ನು ಪೂರೈಸಲು ಯಾವ ಯೋಜನೆಗಳು ಲಭ್ಯವಿದೆ? ಎಂಬುದರ ಬಗ್ಗೆ ತಿಳಿಯುವುದು ಅಗತ್ಯವಾಗಿದೆ.
ನೀವು ತಿಂಗಳಿಗೆ ರೂ 10,000 ಹೂಡಿಕೆ ಮಾಡಲು ಸಿದ್ಧರಿದ್ದರೆ ಈ ಯೋಜನೆ ನಿಮಗೆ ಸಹಾಯ ಮಾಡಬಹುದು. ನಿಮ್ಮ ವಾರ್ಷಿಕ ಆದಾಯದ ಕನಿಷ್ಠ 10-12 ಪಟ್ಟು ಅವಧಿಯ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದು ಸುರಕ್ಷಿತ. ನೀವು ಮಾಡುವ ಹೂಡಿಕೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಅಗತ್ಯ. ಮಗಳ ಅಥವಾ ಮಗನ ಶಿಕ್ಷಣಕ್ಕೆ ನಾವು ಹೂಡಿಕೆ ಮಾಡುವ ಯೋಜನೆ, ಮುಂಬರುವ ಹಣದುಬ್ಬರವನ್ನು ಮೀರಿದ ಲಾಭವನ್ನು ಗಳಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಂಡು ಹೂಡಿಕೆ ಮಾಡುವುದು ಉತ್ತಮ ಮಾರ್ಗವಾಗಿರುತ್ತದೆ. 10 ಸಾವಿರದಲ್ಲಿ 6 ಸಾವಿರ ರೂಗಳನ್ನು ವೈವಿಧ್ಯಮಯ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಕ್ರಮೇಣವಾಗಿ ಹೂಡಿಕೆ ಮಾಡುವ ತಂತ್ರ ಅನುಸರಿಸುವುದು ಉತ್ತಮ ಮಾರ್ಗವಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆ:ಉಳಿದ 4 ಸಾವಿರ ರೂ.ಗಳನ್ನು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿ. ಹೀಗೆ 14 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಸರಾಸರಿ ಶೇ.11ರಷ್ಟು ಆದಾಯದೊಂದಿಗೆ 36,11,390ರೂ. ಪಡೆಯಲು ಸಾಧ್ಯ.
ನೀವು ಇತ್ತೀಚೆಗಷ್ಟೇ ನೌಕರಿ ಸೇರಿದ್ದೀರಾ?:ನೀವು ಇತ್ತೀಚೆಗೆ ಕೆಲಸಕ್ಕೆ ಸೇರಿದ್ದರೆ ನೀವು ಮುಂದಿನ ಐದು ವರ್ಷಗಳವರೆಗೆ ತಿಂಗಳಿಗೆ 15 ಸಾವಿರ ಹೂಡಿಕೆ ಮಾಡಲು ಬಯಸಿದರೆ, ಭವಿಷ್ಯದಲ್ಲಿ ಉತ್ತಮ ಲಾಭಗಳಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ನೀವು ದೀರ್ಘಾವಧಿಯ ಹೂಡಿಕೆ ಯೋಜನೆಯನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಲಾಭ ಪಡೆದುಕೊಳ್ಳಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾದರೆ ಆ ಬಗ್ಗೆ ಸರಿಯಾದ ತಿಳಿವಳಿಕೆ ಇರಬೇಕು. ಈ ಬಗ್ಗೆ ಸರಿಯಾದ ಮಾಹಿತಿ ಪಡೆದ ನಂತರವೇ ಉತ್ತಮ ಷೇರುಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು. ನೀವು ಹೂಡಿಕೆ ಮಾಡಿದ ಷೇರುಗಳ ಮೇಲೆ ನಿರಂತರ ನಿಗಾ ಇಡಬೇಕು. ಪರ್ಯಾಯವಾಗಿ, ನೀವು ಮಾಸಿಕ ಆಧಾರದ ಮೇಲೆ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸಬಹುದು.
ಪೋಷಕರ ಹೆಸರಲ್ಲಿ ಠೇವಣಿ ಇಡಲು ಬಯಸಿದ್ದೀರಾ?:ನೀವು 60 ವರ್ಷಕ್ಕಿಂತ ಮೇಲ್ಪಟ್ಟ ನಿಮ್ಮ ಪೋಷಕರ ಹೆಸರಿನಲ್ಲಿ 0 ಲಕ್ಷ ರೂಗಳನ್ನು ಠೇವಣಿ ಮಾಡಲು ಮತ್ತು ಮಾಸಿಕ ಬಡ್ಡಿ ವ್ಯವಸ್ಥೆ ಮಾಡಲು ಬಯಸಿದರೆ, ನೀವು ಅಂಚೆ ಕಚೇರಿಯಲ್ಲಿ ಹಿರಿಯ ನಾಗರಿಕ ಉಳಿತಾಯ ಯೋಜನೆ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಇದರಿಂದ ಶೇ 8ಕ್ಕೂ ಹೆಚ್ಚು ಆದಾಯವನ್ನು ಗಳಿಸಬಹುದು. ಇಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಪಾವತಿಸಲಾಗುತ್ತದೆ. ಮೂರು ತಿಂಗಳಿಗೆ 20 ಸಾವಿರ ರೂ.ವರೆಗೆ ಬಡ್ಡಿಯನ್ನು ನೀವು ಪಡೆದುಕೊಳ್ಳಬಹುದು. ಹಣದುಬ್ಬರ ನಿಯಂತ್ರಣದ ಹಿನ್ನೆಲೆಯಲ್ಲಿ ಆರ್ಬಿಐ ರೆಪೋದರ ಹೆಚ್ಚಳ ಮಾಡಿರುವುದರಿಂದ ಈಗೀಗ ಬ್ಯಾಂಕ್ಗಳಲ್ಲೀ ಹೆಚ್ಚಿನ ಬಡ್ಡಿದರ ನೀಡಲಾಗುತ್ತಿದೆ. ಸಂಚಿತವಲ್ಲದ ಸ್ಥಿರ ಠೇವಣಿಗಳನ್ನು ಆಯ್ಕೆಮಾಡಿ ಮತ್ತು ಮಾಸಿಕ ಬಡ್ಡಿ ಪಡೆದು ಲಾಭ ಮಾಡಿಕೊಳ್ಳಬಹುದು.
ಸಣ್ಣ ವ್ಯಾಪಾರಿ ಪ್ರತಿ 15 ದಿನಗಳಿಗೊಮ್ಮೆ 3 ಸಾವಿರ ರೂ.ವರೆಗೆ ಹೂಡಿಕೆ ಮಾಡಲು ಬಯಸಿದರೆ, ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಮೂರು ವೈವಿಧ್ಯಮಯ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆಮಾಡಿ ಹೂಡಿಕೆ ಮಾಡಿ. ನಿಮಗೆ ಸೂಕ್ತವಾದ ದಿನಾಂಕಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಲು ಪ್ರಾರಂಭಿಸಿ. ನೀವು 10 ವರ್ಷಗಳ ಕಾಲ ಈ ರೀತಿ ಹೂಡಿಕೆ ಮಾಡಿದರೆ, ಸರಾಸರಿ 13 ಶೇಕಡಾ ಆದಾಯದೊಂದಿಗೆ 13,26,220 ರೂ.ಗಳನ್ನು ಪಡೆಯಲು ಸಾಧ್ಯವಿದೆ.
ಇದನ್ನು ಓದಿ:Explainer: ಸೈಬರ್ ವಿಮೆ, ಅಗತ್ಯ ಮತ್ತು ಉಪಯೋಗಗಳು