ಹೈದರಾಬಾದ್:ಫ್ಲಾಟ್ Vs ಡ್ಯುಪ್ಲೆಕ್ಸ್ ಹೌಸ್ ಇವೆರಡಲ್ಲಿ ಯಾವುದು ಉತ್ತಮ. ಸ್ವಂತ ಮನೆ ಎಂಬುದು ಪ್ರತಿ ವ್ಯಕ್ತಿಯ ಆಶಯ ಹಾಗೂ ಗುರಿಯಾಗಿರುತ್ತದೆ. ಹೇಗಾದರೂ ಸರಿ ಸಂತ ಮನೆ ಮಾಡಬೇಕು ಎಂಬ ಆಲೋಚನೆಯಲ್ಲೇ ಬಹುತೇಕರು ದಿನ ದೂಡುತ್ತಿರುತ್ತಾರೆ. ಚಿಕ್ಕದೋ ದೊಡ್ಡದೋ ತಮ್ಮ ಮಟ್ಟಕ್ಕೆ ತಕ್ಕಂತೆ ಒಂದು ಮನೆ ಇರಬೇಕು ಎಂಬುದು ಬಹುತೇಕ ಜನರ ಆಶಯ ಕೂಡಾ ಹೌದು. ಇದಕ್ಕಾಗಿ ಹಣ ಹೊಂದಿಸಲು ಜನರು ಏನೆಲ್ಲ ವಿಶ್ವ ಪ್ರಯತ್ನಗಳನ್ನು ಮಾಡುತ್ತಾರೆ. ಅವರವರ ಮಟ್ಟದಲ್ಲಿ ಸ್ವಂತ ಮನೆ ಕಟ್ಟಿಸ್ತಾರೆ ಇಲ್ಲವೇ ಫ್ಲಾಟ್ ತೆಗೆದುಕೊಳ್ಳುತ್ತಾರೆ.
ಇನ್ನು ಮನೆ ಮಾಡಬೇಕು ಎಂಬ ಚಿಂತನೆಯಲ್ಲಿರುವ ಬಹಳಷ್ಟು ಜನ ಡ್ಯೂಪ್ಲೆಕ್ಸ್ ಹೌಸ್ ಕಟ್ಟಾಲಾ..? ಯಾವುದಾದರೂ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ತೆಗೆದುಕೊಳ್ಳಬೇಕಾ..? ಎಂಬ ಆಲೋಚನೆಯಲ್ಲೇ ಕಾಲ ಕಳೆಯುತ್ತಿರುತ್ತಾರೆ. ಹಾಗೂ ಆ ಬಗ್ಗೆ ಯೋಚಿಸುತ್ತಲೇ ಅಂತಿಮ ತೀರ್ಮಾನಕ್ಕೆ ಬರದೇ ಒದ್ದಾಡುತ್ತಿರುತ್ತಾರೆ. ದಿನಗಟ್ಟಲೆ ಆ ಆಲೋಚನೆಗಳಿಂದ ಹೊರ ಬರಲು ಸಾಧ್ಯವಾಗದೇ ತೊಳಲಾಟದಲ್ಲಿರುತ್ತಾರೆ. ಒಂದೊಮ್ಮ ನಿಮ್ಮ ಆಲೋಚನೆ ಡ್ಯೂಪ್ಲೆಕ್ಸ್ ಮನೆ ಮಾಡುವುದಿದ್ದರೆ, ಏನೆಲ್ಲಾ ಪ್ರಯೋಜನಗಳಿವೆ..? ಇಲ್ಲಿ ಒಂದೊಂದಾಗಿಯೇ ಚರ್ಚಿಸುತ್ತಾ ಹೋಗೋಣ..
ಡ್ಯೂಪ್ಲೆಕ್ಸ್ ಮನೆ ಎಂದರೆ ಏನು..?: ಡ್ಯೂಪ್ಲೆಕ್ಸ್ ಹೌಸ್ ಎಂದರೆ.. ಎರಡು ವಾಸ ಯೋಗ್ಯ ಘಟಕಗಳು ಎಂದು ಅರ್ಥ ಮಾಡಿಕೊಳ್ಳಬೇಕು. ಒಂದಕ್ಕೊಂದು ಜೋಡಿಸಲ್ಪಟ್ಟ ಒಂದು ರೀತಿಯ ವಸತಿ ಗೃಹ ಎನ್ನಬಹುದು. ಈ ಮನೆ ಎರಡು ಮಹಡಿಗಳನ್ನು ಹೊಂದಿರುತ್ತದೆ. ಅದರಲ್ಲಿ ಒಂದು ಗ್ರೌಂಡ್ ಫ್ಲೋರ್(ತಳಮಹಡಿ), ಇನ್ನೊಂದು ಮೊದಲ ಮಹಡಿ ಆಗಿರುತ್ತದೆ . ಡ್ಯೂಪ್ಲೆಕ್ಸ್ ಮನೆಯಲ್ಲಿ ಒಂದು ಅಡುಗೆ ಮನೆ ಜೊತೆಗೆ ಒಂದೇ ಊಟದ ಕೋಣೆ ಇರುತ್ತದೆ. ಮನೆ ಅಡ್ಡವಾಗಿ ಅಥವಾ ಲಂಬವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಡ್ಯೂಪ್ಲೆಕ್ಸ್ ಹೌಸ್ ದೊಡ್ಡ ದೊಡ್ಡ ಕುಟುಂಬಗಳಿಗೆ ಸರಿ ಹೊಂದುತ್ತದೆ.
ಡ್ಯೂಪ್ಲೆಕ್ಸ್ ಮನೆಗಳಲ್ಲಿರುವ ವಿಧಗಳು: ಎಷ್ಟು ರೀತಿಯ ಡ್ಯುಪ್ಲೆಕ್ಸ್ ಮನೆಗಳಿರುತ್ತವೆ ಎನ್ನುವುದು ನಿಮ್ಮ ಪ್ರಶ್ನೆಯಾ? ವಿನ್ಯಾಸ, ಯೋಜನೆಗಳನ್ನು ಅವಲಂಬಿಸಿ ಸ್ಥೂಲವಾಗಿ ಮೂರು ವಿಧದ ಡ್ಯೂಪ್ಲೆಕ್ಸ್ ಮನೆಗಳನ್ನ ನಿರ್ಮಾಣ ಮಾಡಲಾಗುತ್ತದೆ.
1 ಸ್ಟ್ಯಾಂಡರ್ಡ್ ಡ್ಯೂಪ್ಲೆಕ್ಸ್ ಹೌಸ್
2 ಗ್ರೌಂಡ್ ಡ್ಯೂಪ್ಲೆಕ್ಸ್ ಹೌಸ್
3 ಕಡಿಮೆ ಎತ್ತರದಲ್ಲಿ ಇರುವ ಡ್ಯೂಪ್ಲೆಕ್ಸ್ ಹೌಸ್
ಡ್ಯೂಪ್ಲೆಕ್ಸ್ ಮನೆಗಳ ಪ್ರಯೋಜನಗಳೇನು: ಡ್ಯೂಪ್ಲೆಕ್ಸ್ ಮನೆಯ ಅನುಕೂಲಗಳೆಂದರೆ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸಿಸುವುದರಿಂದ ಬಹಳಷ್ಟು ಪ್ರಯೋಜನಗಳು ಇವೆ.
- ಡ್ಯೂಪ್ಲೆಕ್ಸ್ ಮನೆ ಖರೀದಿಸುವ ವ್ಯಕ್ತಿ ವಿವಿಧ ರೀತಿಯ ತೆರಿಗೆ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾನೆ
- ಮನೆಯ ಮಾಲೀಕ ಒಂದು ಕಡೆ ತಾನು ವಾಸಿಸಲು, ಉಳಿದ ಅರ್ಧ ಬಾಡಿಗೆಗೆ ಕೊಡಲು ಅನುವಾಗುವಂತೆ ಈ ಡೂಪ್ಲೆಕ್ಸ್ ನಿರ್ಮಾಣ ಮಾಡಲಾಗಿರುತ್ತೆ
- ಇದರಿಂದ ಮನೆ ಕೂಡ ಹೆಚ್ಚುವರಿ ಆದಾಯ ಬರುತ್ತೆ, ನಿಮ್ಮ ಹೊರೆಯನ್ನು ತಗ್ಗಿಸುತ್ತದೆ.
- ಮನೆ ಮಾಲೀಕರು, ಬಾಡಿಗೆದಾರರು ಇಬ್ಬರಿಗೂ ಹಲವು ರೀತಿಯ ಪ್ರಯೋಜನಗಳು ಉಂಟು