ಹೈದರಾಬಾದ್: ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸಲು ಈಕ್ವಿಟಿಗಳು ಬಹು ಪ್ರಯೋಜನಗಳನ್ನು ಹೊಂದಿರುವ ಅತ್ಯುತ್ತಮ ಹೂಡಿಕೆ ಯೋಜನೆಗಳಾಗಿವೆ. ಇದರಲ್ಲಿ, ಯುನಿಟ್-ಲಿಂಕ್ಡ್ ಇನ್ವೆಸ್ಟ್‌ಮೆಂಟ್ ಪಾಲಿಸಿಗಳು (ಯುಲಿಪ್‌ಗಳು) ಹೂಡಿಕೆ ಮತ್ತು ವಿಮೆ ಎರಡರ ಪ್ರಯೋಜನಗಳನ್ನು ಬಯಸುವವರಿಗೆ ಅತ್ಯಂತ ಸೂಕ್ತವಾಗಿದೆ. ಮಾರುಕಟ್ಟೆಗಳು ಅಸ್ಥಿರವಾಗಿರುವಾಗ, ಅನೇಕ ಜನ ಇಂಥ ಪಾಲಿಸಿಗಳಲ್ಲಿ ಆಸಕ್ತಿ ತೋರಿಸಲ್ಲ ಮತ್ತು ಹೂಡಿಕೆ ಮಾಡುವುದನ್ನು ಮುಂದೂಡುತ್ತಾರೆ. ಆದರೆ ಮಾರುಕಟ್ಟೆಗೆ ಪ್ರವೇಶಿಸಲು ಯಾವುದೇ ನಿಗದಿತ ಸಮಯವಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ರಿಸ್ಕ್ ಅಂಶಗಳು, ಮಾರುಕಟ್ಟೆಯ ಕುಸಿತ ಮತ್ತು ಹಣಕಾಸಿನ ಒತ್ತಡಗಳು ಏನೇ ಇದ್ದರೂ ಶಿಸ್ತು ಮತ್ತು ದೀರ್ಘಾವಧಿಯ ಯೋಜನೆ ಹೊಂದಿದ್ದರೆ ಆದಾಯ ಗಳಿಸಲು ಸಾಧ್ಯ.
ಇತ್ತೀಚಿನ ದಿನಮಾನಗಳಲ್ಲಿ ಹೂಡಿಕೆ, ವಿಮೆ ಮತ್ತು ತೆರಿಗೆ ವಿನಾಯಿತಿಯ ಜೊತೆಗೆ, ULIP ಗಳು ಇನ್ನೂ ಕೆಲ ಪ್ರಯೋಜನಗಳನ್ನು ನೀಡುತ್ತಿವೆ. ತಮ್ಮ ಹೂಡಿಕೆ ಮತ್ತು ಭದ್ರತಾ ಯೋಜನೆಗಳಿಗೆ ಸೂಕ್ತವಾದ ಯಾವುದೇ ನಿಧಿಯನ್ನು ಆಯ್ಕೆ ಮಾಡಲು ಪಾಲಿಸಿದಾರರಿಗೆ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಇದಲ್ಲದೆ, ವಿಮಾ ಕಂಪನಿಗಳು ಉಚಿತ ಸ್ವಿಚಿಂಗ್ ಸೌಲಭ್ಯವನ್ನು ಕೂಡ ನೀಡುತ್ತಿವೆ. ತಮ್ಮ ಅಸ್ತಿತ್ವದಲ್ಲಿರುವ ಪಾಲಿಸಿಗಳ ಅವಧಿಯಲ್ಲಿ, ಪಾಲಿಸಿದಾರರು ಆದಾಯವನ್ನು ಹೆಚ್ಚಿಸುವ ಸಲುವಾಗಿ ಹೊಸ ಹೂಡಿಕೆ ಯೋಜನೆಗಳನ್ನು ಬದಲಾಯಿಸಬಹುದು ಮತ್ತು ಅಳವಡಿಸಿಕೊಳ್ಳಬಹುದು. ಪಾಲಿಸಿಗಳ ಪಕ್ವತೆಯ ಮೇಲೆ ಒಂದೇ ಬಾರಿಗೆ ಪ್ರಯೋಜನಗಳನ್ನು ಪಡೆಯಬಹುದು. ಇಲ್ಲವೇ, ಪಾಲಿಸಿಯನ್ನು ಮುಚ್ಚಿದ ನಂತರ ನಿಗದಿತ ಅವಧಿಗೆ ಆದಾಯವನ್ನು ಗಳಿಸಬಹುದು.
ಯುಲಿಪ್‌ಗಳು ನಿಯತಕಾಲಿಕವಾಗಿ ತಿಂಗಳಿಗೆ ಅಥವಾ ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕವಾಗಿ ಪ್ರೀಮಿಯಂ ಪಾವತಿಯ ಮೂಲಕ ಒಬ್ಬರ ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಆದಾಯ ಮತ್ತು ಇತರ ವೆಚ್ಚಗಳ ಆಧಾರದ ಮೇಲೆ ಪ್ರೀಮಿಯಂ ಅನ್ನು ನಿಗದಿಪಡಿಸಬಹುದು. ಯುಲಿಪ್‌ಗಳ ಅಡಿಯಲ್ಲಿ ಪ್ರೀಮಿಯಂಗಳನ್ನು ಶಿಸ್ತುಬದ್ಧವಾಗಿ ಪಾವತಿಸುವುದು ಉತ್ತಮ ಆದಾಯಕ್ಕೆ ಕಾರಣವಾಗುತ್ತದೆ. ಯುಲಿಪ್‌ಗಳ ಮುಕ್ತಾಯದ ನಂತರ, ಪಾಲಿಸಿದಾರರಿಗೆ ಪಾಲಿಸಿ ಮೊತ್ತವನ್ನು ಕ್ಲೈಮ್ ಮಾಡಲು ಅಥವಾ ಕಂತುಗಳ ಮೂಲಕ ಹಿಂಪಡೆಯಲು ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಆದ್ದರಿಂದ, ಈ ಹೂಡಿಕೆಯನ್ನು ಮುಕ್ತಾಯದ ನಂತರವೂ ಮಾರುಕಟ್ಟೆಯಲ್ಲಿ ಮುಂದುವರಿಸಬಹುದು ಮತ್ತು ಅದು ಆದಾಯವನ್ನು ನೀಡುವುದನ್ನು ಮುಂದುವರಿಸುತ್ತದೆ. ಈ ರೀತಿಯಾಗಿ, ಒಬ್ಬರು ಹೆಚ್ಚಿನ ಆದಾಯವನ್ನು ಪಡೆಯಬಹುದು.